More

    ಸಮಾವೇಶದಿಂದ ನಮ್ಮ ಶಕ್ತಿ ಅನಾವರಣ

    ಬೈಲಹೊಂಗಲ: ಪಂಚಮಸಾಲಿಗಳ ಸ್ವಾಭಿಮಾನ ಸಮಾವೇಶದಿಂದ ಕಿತ್ತೂರು ನಾಡಿನಲ್ಲಿ ಪಂಚಮಸಾಲಿಗಳ ನಾಡಿನಾದ್ಯಂತ ಅನಾವರಣಗೊಂಡಿದೆ ಎಂದು ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಗಣಾಚಾರಿ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನೆ, ಡಿ.22ರ ಪಂಚಶಕ್ತಿ ಪ್ರದರ್ಶನದ ಪೂರ್ವಭಾವಿ ಸಭೆ ಹಾಗೂ ಡಿ.20 ರಂದು ಬೈಲಹೊಂಗಲಕ್ಕೆ ಪಾದಯಾತ್ರೆ ಅಗಮಿಸುವ ಕುರಿತು ಪಾದಯಾತ್ರೆ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಡಿ.19 ರಂದು ರಾತ್ರಿ ಸವದತ್ತಿಯಿಂದ ಮತಕ್ಷೇತ್ರದ ಕರಿಕಟ್ಟಿ ಗ್ರಾಮದವರೆಗೆ ಪಾದಯಾತ್ರೆ ಮೂಲಕ ಅಗಮಿಸಿ ವಾಸ್ತವ್ಯ, ಡಿ.20ರಂದು ಉಡಿಕೇರಿ, ಬೆಳವಡಿ ಮೂಲಕ ಬೈಲಹೊಂಗಲಕ್ಕೆ ಅಗಮಿಸಿ ರಾಣಿ ಚನ್ನಮ್ಮಳ ಸಮಾಧಿಗೆ ಮುಕ್ತಾಯಗೊಳಿಸುವುದು. ಡಿ.21 ರಂದು ಬೆಳಗ್ಗೆ ಸಮಾಧಿ ರಸ್ತೆ ಮೂಲಕ ಸಂಪಗಾಂವ, ಚಿಕ್ಕಬಾಗೇವಾಡಿಯಿಂದ ಹಿರೇಬಾಗೇವಾಡಿಯಲ್ಲಿ ವಾಸ್ತವ್ಯ ನಡೆಸಿ, ಡಿ.22 ರಂದು ಬೆಳಗ್ಗೆ ಪಂಚಶಕ್ತಿ ಸಮಾವೇಶದ ವೇದಿಕೆಯವರೆಗೆ ಪಾದಯಾತ್ರೆ ನಡೆಯಲಿದೆ. ನಾಡಿನ ಸಮಸ್ತ ಪಂಚಮಸಾಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಯಶಸ್ವಿಯಾಗಿಸುವಂತೆ ಕರೆ ನೀಡಿದರು.

    ಕಾಡಾ ಅಧ್ಯಕ್ಷ ಡಾ.ವಿ.ಐ.ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಾಜಿ ಅಧ್ಯಕ್ಷ ಬಾಬು ಕುಡಸೋಮಣ್ಣವರ, ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ, ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಮುರುಗೇಶ ಗುಂಡ್ಲೂರ್, ವೀರೇಶ ಹಲಕಿ, ಐ.ಎಲ್.ಪಾಟೀಲ, ಶಿವಾನಂದ ಬೆಟಗೇರಿ, ಗುರುಪಾದ ಕಳ್ಳಿ, ಮಹಾಂತೇಶ ಹೊಸೂರ, ರಾಜು ಸೋಗಲ, ಶಿವಾನಂದ ಬಡ್ಡಿಮನಿ, ಶಿವಾನಂದ ಬೆಳಗಾವಿ, ಈರಣಗೌಡ ಪಾಟೀಲ, ಶ್ರೀಕಾಂತ ಶಿರಹಟ್ಟಿ, ಶ್ರೀಶೈಲ ಶರಣಪ್ಪನವರ, ದುಂಡಪ್ಪ ಬನ್ನುರ, ಮಹಾಬಳೇಶ್ವರ ಬೋಳಣ್ಣವರ, ಬಿ.ಬಿ.ಗಣಾಚಾರಿ, ಮಹೇಶ ಕೊಟಗಿ, ಮಲ್ಲಪ್ಪ ಗರ್ಜುರ, ವೀರನಗೌಡ ದೊಡ್ಡವಿರಪ್ಪನವರ, ಬಿ.ಬಿ.ಸಂಗನಗೌಡರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts