More

    ಸಮಾನತೆಗಾಗಿ ಹೋರಾಟ ನಡೆಸಿದವರು ಬ್ರಹ್ಮಶ್ರೀ ನಾರಾಯಣಗುರು

    ಎನ್.ಆರ್.ಪುರ: ಬ್ರಹ್ಮಶ್ರೀ ನಾರಾಯಣಗುರುಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದವರು. ಪಟ್ಟಣದ ನಾರಾಯಣಗುರುಗಳ ಸಮುದಾಯ ಭವನ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.  ಬಿ.ಎಚ್.ಕೈಮರದ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ 168ನೇ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಮುದಾಯದ ಧೀಮಂತ ನಾಯಕರ ಜಯಂತಿ ಆಚರಣೆ ಜಾರಿಗೆ ತಂದರು. ಕೇರಳದಲ್ಲಿ ಜಾತಿ, ಧರ್ಮ, ಅಸ್ಪೃಶ್ಯತೆ ನಿವಾರಣೆಯಲ್ಲಿ ನಾರಾಯಣಗುರುಗಳ ಪಾತ್ರ ಮತ್ತು ಹೋರಾಟ ದೊಡ್ಡದು. ಒಂದೇ, ಜಾತಿ, ಒಂದೇ ದೇವರು ಎಂದು ಪ್ರತಿಪಾದಿಸಿದವರು ಎಂದರು.

    ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ನಾರಾಯಣಗುರುಗಳು ಕೇವಲ ವ್ಯಕ್ತಿಯಲ್ಲ. ಅವರೊಂದು ದಿವ್ಯ ಚೇತನ, ಪರಿವರ್ತನೆಯ ಹರಿಕಾರ. ಕೇರಳದಲ್ಲಿ ಹಿಂದುಳಿದ ವರ್ಗದವರ ಧ್ವನಿಯಾಗಿ ಹೋರಾಡಿದ್ದರು. ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಸಂತ ಎಂದು ಹೇಳಿದರು.

    ಕೇರಳ ದೇವರ ನಾಡಾಗಲು ಶಂಕರಾಚಾರ್ಯರು ಹಾಗೂ ನಾರಾಯಣಗುರುಗಳ ಪರಿಶ್ರಮ ಅಡಗಿದೆ. ನಾರಾಯಣಗುರು ಸಮುದಾಯದವರು ಅತ್ಯಂತ ಶ್ರಮಜೀವಿಗಳು. ನಾರಾಯಣಗುರುಗಳು ಸ್ಥಾಪಿಸಿದ್ದ ಶಿವಗಿರಿ ಮಠಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿ ಅಭಿವೃದ್ಧಿಗೆ 70 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಪಟ್ಟಣದ ಸಮುದಾಯ ಭವನ ಪೂರ್ಣಗೊಳಿಸಲು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

    ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಸಮುದಾಯವನ್ನು ಬಲಿಷ್ಟವಾಗಿಸಲು ಎಲ್ಲರೂ ಸಹಕಾರ ನೀಡಬೇಕು. ಕೇರಳದಲ್ಲಿ ನಮ್ಮ ಸಮುದಾಯ ಶೈಕ್ಷಣಿಕವಾಗಿ ಮೊದಲ ಸ್ಥಾನದಲ್ಲಿದೆ ಎಂದರು. ಎಂ.ಎಸ್ಸಿ ಕೃಷಿಯಲ್ಲಿ ಬಂಗಾರದ ಪದಕ ಪಡೆದ ಮಣ್ಣಿಕುಡಿಗೆ ಎಂ.ಎ.ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅನೇಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಾರಾಯಣಗುರು ಜಯಂತಿ ಅಂಗವಾಗಿ ಮಹಿಳೆಯರಿಗಾಗಿ ರಂಗೋಲಿ, ಮ್ಯೂಸಿಕಲ್ ಛೇರ್, ಪುರುಷರಿಗಾಗಿ ಹಗ್ಗಜಗ್ಗಾಟ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts