More

    ಸಮಾಜದ ಏಳಿಗೆಗೆ ಶ್ರಮಿಸಿದ ಪೂಜ್ಯರು

    ಮುನವಳ್ಳಿ, ಬೆಳಗಾವಿ: ಹಾನಗಲ್ಲ ಕುಮಾರೇಶ್ವರರು ಬಸವಾದಿ ಪ್ರಮಥರ ತತ್ತ್ವ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನದುದ್ದಕ್ಕೂ ಸಮಾಜದ ಏಳಿಗೆಗೆ ಶ್ರಮಿಸಿದವರು ಎಂದು ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದ ಸೋಮಶೇಖರ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಕಾರಣಿಕ ಯುಗಪುರುಷ ಹಾನಗಲ್ಲ ಗುರುಕುಮಾರೇಶ್ವರರ 155ನೇ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸುವ ಮೂಲಕ ಹಂಚಿ ಹೋಗಿದ್ದ ವೀರಶೈವ ಸಮಾಜವನ್ನು ಒಗ್ಗೂಡಿಸುವಲ್ಲಿ ಪೂಜ್ಯರು ಯಶಸ್ವಿಯಾಗಿದ್ದಾರೆ ಎಂದರು.

    ಯಕ್ಕುಂಡಿ ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ರಮೇಶ ಮುರಂಕರ ಮಾತನಾಡಿ, ಅಜ್ಞಾನ ಅಂಧ ಶ್ರದ್ಧೆಯಿಂದ ಬಡವಾಗಿದ್ದ ಸಮಾಜಕ್ಕೆ ಆಚಾರ, ಅರಿವು, ಶರಣ ಸಂಸ್ಕೃತಿಯ ನೆಲೆಯಲ್ಲಿ ಪುನಶ್ಚೇತನಗೊಳಿಸಿ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಿ ರಾಷ್ಟ್ರದ ಭವ್ಯ ಪರಂಪರೆ ಉಳಿಸಿ ಬೆಳಸಲು ಶ್ರಮಿಸಿದ್ದಾರೆ ಎಂದರು.

    ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾಗಿ ಬೆಳಗಾವಿ ಪ್ರಾಂತದಿಂದ ಅವಿರೋಧವಾಗಿ ಆಯ್ಕೆಗೊಂಡ ರವೀಂದ್ರ ಯಲಿಗಾರ ಅವರನ್ನು ಸನ್ಮಾನಿಸಲಾಯಿತು. ಜೆಎಸ್‌ಪಿ ಸಂಘದ ಚೇರ್ಮನ್ ಎಂ.ಆರ್.ಗೋಪಶೆಟ್ಟಿ, ಜಂಗಮ ಸಮಾಜದ ಅಧ್ಯಕ್ಷ ಡಾ.ಎಂ.ಬಿ.ಅಷ್ಟಗಿಮಠ, ಗೌತಮಗೌಡ ದ್ಯಾಮನಗೌಡರ, ಎಂ.ಎಚ್.ಪಾಟೀಲ. ಕೆ.ಬಿ.ನಲವಡೆ, ಎಸ್.ಬಿ.ಹಿರಲಿಂಗನ್ನವರ, ಕಲ್ಲಪ್ಪ ನಲವಡೆ, ಬಾಳು ಹೊಸಮನಿ, ಐ.ಕೆ.ಮಠಪತಿ, ಆನಂದ ಯಲಿಗಾರ, ಶ್ರೀಶೈಲ ಗೋಪಶೆಟ್ಟಿ, ವಿರಾಜ ಕೊಳಕಿ, ಎಂ.ಜಿ.ಚುಳಕಿಮಠ, ಮಂಜುನಾಥ ಭಂಡಾರಿ, ಶಂಕರ ಗಯ್ಯಳಿ, ಸಂಗಯ್ಯ ಹೋಳಿಮಠ, ರುದ್ರಕ್ಕ ಶಿರಸಂಗಿ, ಎ.ಪಿ.ಲಂಬೂನರ, ಎಂ.ಜಿ.ಹೊಸಮಠ, ರಾಜೇಶ್ವರಿ ಬಾಳಿ, ಗಂಗಮ್ಮ ಸಂಕನ್ನವರ, ಬಿ.ಬಿ.ಹುಲಿಗೊಪ್ಪ, ಸುರೇಖಾ ಗೋಪಶೆಟ್ಟಿ, ಗಂಗಾಧರ ಗೊರಾಬಾಳ, ಪುಷ್ಪಾ ಜಾವೂರ, ಅನುರಾಧಾ ಬೆಟಗೇರಿ, ನಿರ್ಮಲಾ ಶಿರಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts