More

    ಸಮಾಜದ ಉನ್ನತಿಗಾಗಿ ಶ್ರಮಿಸಿ

    ಮುನವಳ್ಳಿ, ಬೆಳಗಾವಿ: ಪುರಾಣ, ಪ್ರವಚನಗಳು ಮಾನವೀಯ ಮೌಲ್ಯಗಳು ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.

    ನವರಾತ್ರಿ ಉತ್ಸವದ ಪ್ರಯುಕ್ತ ಪಟ್ಟಣದ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಬುಧವಾರ ಜರುಗಿದ ಶ್ರಿ ದೇವಿ ಪುರಾಣ ಮಂಗಲೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಬಸವರಾಜ ಹಲಗತ್ತಿ, ಸುಭಾಷ ಸಣಕಲ್ಲ, ಅರ್ಚಕ ವಿರೂಪಾಕ್ಷ ದೇವಾಂಗಮಠ, ಹಿರಿಯರಾದ ಮಲ್ಲಿಕಾರ್ಜುನ ಹೊನ್ನಳ್ಳಿ, ದಾನಿ ತಮ್ಮಣ್ಣ ಹೊನ್ನಳ್ಳಿ, ಶಿವಾಜಿ ಸಣಕಲ್ಲ ಹಾಗೂ ಶ್ರೀ ಬನಶಂಕರಿ ವಿದ್ಯಾ ವಿಕಾಸ ಸಂಸ್ಥೆ ವತಿಯಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೇವೇಂದ್ರಪ್ಪ ದಿನ್ನಿಮನಿ, ಚನ್ನಪ್ಪ ಕಳಸನ್ನವರ, ಈಶ್ವರ ಅತ್ತಿಮರದ, ಈಶ್ವರ ಯಕ್ಕುಂಡಿ, ಮನೋಹರ ದಿನ್ನಿಮನಿ, ಗುರುರಾಜ ಹೊನ್ನಳ್ಳಿ, ವಿಲಾಸ ಸಣಕಲ್ಲ, ಮುರಳೀಧರ ಹೊನ್ನಳಿ ನಾಗೇಶ ಹೊನ್ನಳ್ಳಿ, ಸುಧೀರ ವಾಗೇರಿ, ರವಿ ಸಣಕಲ್ಲ, ಶೇಖರ ಸಣಕಲ್ಲ, ಅಶೋಕ ವನಹಳ್ಳಿ, ವೆಂಕಪ್ಪ ದಿನ್ನಿಮನಿ, ವಿಶಾಲ ಹುಲ್ಲೂರ ಇತರರಿದ್ದರು.

    ಹಳ್ಳೂರ ವರದಿ: ಗ್ರಾಮ ಹಾಗೂ ಸುತ್ತಮುತ್ತಲಿನ ಶಿವಾಪುರ(ಹ), ಖಾನಟ್ಟಿ, ಮುನ್ಯಾಳ, ರಂಗಾಪುರ, ಕಮಲದಿನ್ನಿ, ಮರಾಕೂಡಿ, ನೀರಲಕೋಡಿ ಗ್ರಾಮಗಳಲ್ಲಿ ಗ್ರಾಮಸ್ಥರು ವಿಜಯದಶಮಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಿದರು. ಅರ್ಚಕ ಮಲ್ಲಪ್ಪ ಪೂಜೇರಿ, ನಾರಾಯಣ ಪೂಜೇರಿ, ಬಾಳಪ್ಪ ಪಾಟೀಲ, ರಮೇಶ ಸನದಿ, ಸುರೇಶ ಕತ್ತಿ, ಮಾರುತಿ ಮಾವರಕರ, ಶಿವದುಂಡು ಕೊಂಗಾಲಿ, ಮಲ್ಲಿಕಾರ್ಜುನ ಅರಳಿಮಟ್ಟಿ, ಸನದಿ, ಮಹಾದೇವ ಅಂಗಡಿ, ದುರದುಂಡಿ, ಗ್ರಾಮದ ಮುಖಂಡರು, ಸದ್ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts