More

    ಸಮಸ್ಯೆಗಳ ಆಗರ ಗುರುಬಸಪ್ಪಜ್ಜ ನಗರ

    ಶಿಗ್ಲಿ: ಗ್ರಾಮದಲ್ಲಿರುವ ಗುರುಬಸಪ್ಪಜ್ಜ ನಗರ ಸಮಸ್ಯೆಗಳ ಆಗರವಾಗಿದೆ. ಇಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳ ಜನರು ವಾಸಿಸುತ್ತಿದ್ದಾರೆ. ಇವರ ಯಾವೊಂದು ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದೆ.

    ಶುದ್ಧ ಕುಡಿಯುವ ನೀರಿನ ಘಟಕ, ಪ್ರಾಥಮಿಕ ಶಾಲೆ ಹಾಗೂ ಕಿರು ಗ್ರಂಥಾಲಯ ಇಲ್ಲಿಲ್ಲ. ಇಡೀ ಗುರುಬಸಪ್ಪ ನಗರಕ್ಕೆ ಒಂದು ಕಿರು ಕುಡಿಯುವ ನೀರಿನ ಸಂಗ್ರಹ ಟ್ಯಾಂಕ್ ಇದೆ. ಆದರೆ, ಈ ಟ್ಯಾಂಕಿನ ನೀರು ಯೋಗ್ಯವಲ್ಲದ ಕಾರಣ ಬಹುತೇಕ ಜನ ಕುಡಿಯಲು ಬಳಸುವುದಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರು ತರಲು ಒಂದು ಕಿಮೀ ದೂರ ತೆರಳಬೇಕು. ಇಳಿಜಾರು ರಸ್ತೆ ಇಲ್ಲಿರುವುದರಿಂದ ಶಾಲಾ ಮಕ್ಕಳಿಗೆ ಹೋಗಿ ಬರಲು ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಎಲ್​ಕೆಜಿ, ಯುಕೆಜಿಯಿಂದ ಐದನೇ ತರಗತಿಯವರೆಗಿನ ಸರ್ಕಾರಿ ಶಾಲೆಯನ್ನು ಗುರುಬಸಪ್ಪಜ್ಜ ನಗರದಲ್ಲಿಯೇ ತೆರೆಯಬೇಕು. ಇಲ್ಲಿರುವ 5 ಅಡ್ಡ ರಸ್ತೆ ಗಳ ಪೈಕಿ ಒಂದು ಅಡ್ಡ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಇನ್ನುಳಿದ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು ಹಾಗೂ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕೆಂದು ಗುರುಬಸಪ್ಪಜ್ಜ ನಗರ ನಿವಾಸಿಗಳಾದ ಯಲ್ಲಪ್ಪ ಮಡಿವಾಳರ, ಸುಭಾಷ ದಾನಪ್ಪನವರ, ಬಸವರಾಜ ತೋಟದ, ಮನೋಹರ ಪತ್ತಾರ, ಶಿವಪ್ಪ ಬಾಲೇಹೊಸೂರು, ಉಮಾಶಂಕರ ಗಣಮುಖಿ, ಮಮ್ತಾಜ್ ನದಾಫ್, ಲೀಲಾವತಿ ಸಂಗಣ್ಣವರ ಇತರರು ಆಗ್ರಹಿಸಿದ್ದಾರೆ.

    ಗುರುಬಸಪ್ಪಜ್ಜ ನಗರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯ ವಿರುವುದು ಗಮನಕ್ಕೆ ಬಂದಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು.

    | ಶ್ರೀಧರ ತಳವಾರ

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಶಿರಹಟ್ಟಿ

    ಸುಮಾರು 15 ವರ್ಷಗಳ ಹಿಂದೆ ನಿರ್ವಣವಾದ ಗುರುಬಸಪ್ಪಜ್ಜ ನಗರದ ರಸ್ತೆ ಅಗಲಕ್ಕೆ ತುಂಬಾ ಕಡಿಮೆ ಇದೆ. ಅಲ್ಲದೆ, ಇಳಿಜಾರಾಗಿರುವುದರಿಂದ ಮಕ್ಕಳು, ವೃದ್ಧರು ಜೀವಭಯದಲ್ಲಿಯೇ ಸಂಚಾರ ಮಾಡಬೇಕಿದೆ.

    | ಬಸವರಾಜ ತೋಟದ

    ಗ್ರಾಪಂ ಮಾಜಿ ಅಧ್ಯಕ್ಷ ಶಿಗ್ಲಿ

    ಮಕ್ಕಳನ್ನು ಶಾಲೆಗೆ ಕಳುಹಿಸಲು ಹಾಗೂ ಕರೆ ತರಲು ಅರ್ಧ ಕಿಮೀ ಇಳಿ ಜಾರು ರಸ್ತೆಯಲ್ಲಿ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಇಲ್ಲಿಯೇ ಎಲ್​ಕೆಜಿಯಿಂದ 5ನೇ ತರಗತಿ ಯವರೆಗೆ ಸರ್ಕಾರಿ ಶಾಲೆ ತೆರೆಯಬೇಕು.

    | ಮನೋಹರ ಪತ್ತಾರ ಗುರುಬಸಪ್ಪಜ್ಜನಗರದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts