More

    ಸಮಯಪಾಲನೆಯಿಂದ ಸಾಧನೆ ಸಾಧ್ಯ

    ಕೆ.ಆರ್.ಪೇಟೆ: ಸಮಯ ಪಾಲನೆ ಮತ್ತು ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬಹುದು ಎಂದು ಸ್ವಾಮಿ ವಿಜಯಾನಂದ ಸರಸ್ವತಿ ಮಹಾರಾಜ್ ಹೇಳಿದರು.

    ತಾಲೂಕಿನ ಬೂಕನಕೆರೆ ಹೋಬಳಿಯ ಗವಿಮಠದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿವೇಕ ವಿದ್ಯಾವಾಹಿನಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

    ಹುಟ್ಟಿರುವ ಪ್ರತಿಯೊಬ್ಬ ಮನುಷ್ಯನು ಏನನ್ನಾದರೂ ಸಾಧಿಸಲೇಬೇಕು. ಆ ಮುಖಾಂತರ ಸತ್ತ ನಂತರವೂ ಬದುಕಿರಬೇಕು. ಸಾಧಿಸದೆ ಸಾಯುವವನು ಸಾಯುವುದಕ್ಕೂ ಸಮರ್ಥನಲ್ಲ ಎಂಬ ಗಾದೆಯಂತೆ ಮಾನವನಿಗೆ ಸಾಧನೆ ಮಾಡಲು ಸಾವಿರಾರು ಕ್ಷೇತ್ರಗಳಿವೆ. ಇಂದಿನ ವಿದ್ಯಾರ್ಥಿಗಳು ಸಮಯದ ಮಹತ್ವ, ವೇಳಾಪಟ್ಟಿ ರಚನೆ, ಭಯ ನಿವಾರಣೆ ಹಾಗೂ ಸಾಧಿಸುವ ಹಂಬಲ ಇಟ್ಟುಕೊಂಡು ಗುರಿ ಸಾಧನೆಗೆ ಶ್ರಮಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಂಗೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್, ಶಾಲೆಯ ಪ್ರಾಂಶುಪಾಲರಾದ ಕುಪ್ಪಹಳ್ಳಿಪ್ರಸನ್ನ ಕುಮಾರ್ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತಾರಣಾಧಿಕಾರಿ ಎಂ.ಎನ್.ವೆಂಕಟೇಶ್, ಟ್ರಸ್ಟ ಅಧ್ಯಕ್ಷ ನಿತ್ಯಾನಂದ, ಶಿಕ್ಷಕರುಗಳಾದ ರವಿ, ಮಮತಾ, ದಾಕ್ಷಾಯಿಣಿ, ತಾಂಡವಮೂರ್ತಿ, ವೇಣು, ರೂಪ, ಮೋಸಸ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts