More

    ಸದ್ಭಾವ ಕಂಪನಿ ವಿರುದ್ಧ ಧರಣಿ

    ಶಿರಹಟ್ಟಿ: ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಹಾಗೂ 6 ತಿಂಗಳ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ತಾಲೂಕಿನ ಛಬ್ಬಿ ಗ್ರಾಮ ಬಳಿಯ ಸದ್ಭಾವ ಇಂಜಿನಿಯರಿಂಗ್ ಲಿ. ಕಂಪನಿ ಕಚೇರಿ ಎದುರು ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.
    ನೌಕರರಾದ ಮಹ್ಮದ್ ಜಬಿ, ಅಲೋಕ ಕುಮಾರ ಮಿಶ್ರಾ ಮಾತನಾಡಿ, ‘580 ಕೋಟಿ ರೂ. ವೆಚ್ಚದ ಗದಗ-ಹೊನ್ನಾಳಿ ದ್ವಿಪಥ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದ ಸದ್ಭಾವ ಇಂಜಿನಿಯರಿಂಗ್ ಕಂಪನಿಯು 150 ನೌಕರರನ್ನು ನೇಮಿಸಿಕೊಂಡಿತ್ತು. ಆದರೆ, 6 ತಿಂಗಳಿಂದ ನೌಕರರಿಗೆ ಸಂಬಳ ನೀಡಿಲ್ಲ. ಅಲ್ಲದೆ, ಸಮರ್ಪಕವಾಗಿ ಊಟವೂ ಕೊಟ್ಟಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಕಳೆದ ಆರು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ ಎನ್ನುವ ಸಬೂಬು ಹೇಳಿ ಇತ್ತೀಚೆಗೆ 120 ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ’ ಎಂದು ದೂರಿದರು.
    ಅಲ್ಲದೆ, ರಸ್ತೆ ನಿರ್ವಣಕ್ಕೆ ಖಡಿ, ಎಂ ಸ್ಯಾಂಡ್ ಪೂರೈಸಿದ ಕ್ರಷರ್ ಮಾಲೀಕರಿಗೆ ಹಣ ಪಾವತಿಸದ ಕಾರಣ ಅವರು ನಿತ್ಯ ಕಚೇರಿಗೆ ಬಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಂಪನಿ ಯೋಜನಾ ನಿರ್ವಾಹಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. 3 ದಿನಗಳ ಒಳಗಾಗಿ ಬಾಕಿ ವೇತನ ನೀಡದಿದ್ದರೆ ವಾಹನ ಸಂಚಾರ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಎಂ.ಬಿ. ಮುಲ್ಲಾ, ಚಂದನ ಪ್ರಸಾದ, ಕಾಸೀಂಸಾಬ ಹಳ್ಳಿ, ಅಮರಕುಮಾರ, ಅರ್ಜುನ ಮುನ್ನಾಲಾಲ, ನಿತಿನಕುಮಾರ, ಉದಯ ನೆರೇಗಲ್ ಇತರರು ಇದ್ದರು.


    ಸರ್ಕಾರಿಂದ ಹಣ ಸಂದಾಯವಾಗದ ಕಾರಣ ನೌಕರರಿಗೆ ವೇತನ ನೀಡಿಲ್ಲ. ಸದ್ಯ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಇನ್ನೆರಡು ದಿನಗಳಲ್ಲಿ ಬಾಕಿ ವೇತನ ಪಾವತಿಸಲಾಗುವುದು.
    | ಶೇಖರ ಕಂಪನಿ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts