More

    ಸದಸ್ಯರು ಹಣ ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಿ

    ಉಳ್ಳಾಗಡ್ಡಿ- ಖಾನಾಪುರ: ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ 20 ಸ್ವ ಸಹಾಯ ಸಂಘಗಳಿಗೆ ತಲಾ 1 ಲಕ್ಷ ರೂ. ನಂತೆ ಸ್ವ ಸಹಾಯ ಸಂಘಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಿದ್ದು ಗ್ರಾಪಂ ಮಟ್ಟದಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರು ಹಣವನ್ನು ಉತ್ತಮ ರೀತಿಯಿಂದ ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ಯಮಕನಮರಡಿ ಗುರುಸಿದ್ದ ಸ್ವಾಮೀಜಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಇಂದು ಸ್ವಸಹಾಯ ಸಂಘಗಳಿಂದ ಮಹಿಳೆಯರು ಸಬಲರಾಗಿ ಸ್ವ ಉದ್ಯೋಗದಲ್ಲಿ ತೊಡಗುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಮಾರಾಟ ಮಳಿಗೆ ಯನ್ನು ತಾಪಂ ಯೋಜನೆಯಡಿ ಅಗತ್ಯವಿರುವ ಸ್ಥಳಗಳಲ್ಲಿ ಕಿರು ಉದ್ಯೋಗ ಉತ್ತೇಜನಗೊಳಿಸಿ ಸ್ವ ಸಹಾಯ ಸಂಘಗಳ ಸದಸ್ಯರು ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗುತ್ತದೆ ಎಂದರು. ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ತಾಪಂ ಇಒ ಎಸ್.ಬಿ. ಸಿದ್ನಾಳ, ಮಂಜುನಾಥ ಪರಸನ್ನವರ, ಈರಣ್ಣ ಬಿಸಿರೊಟ್ಟಿ, ವಂದನಾ ತುಬಚಿ, ಅನುರಾಧಾ ಕಾಪಸಿ, ಕಿರಣಸಿಂಗ್ ರಜಪೂತ, ಅಸ್ಲಂ ಪಕಾಲಿ, ಶಿವಲಿಂಗ ಡಂಗ, ಮಹಾದೇವ ಪಟೊಳಿ, ಜಾವೇದ್ ಜಕಾತಿ, ಸ್ವ ಸಹಾಯ ಸಂಘಗಳ ಸದಸ್ಯೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts