More

    ಸತೀಶ್ ಜಾರಕಿಹೊಳಿ ವಿರುದ್ಧ ತಣ್ಣಗಾಗದ ಆಕ್ರೋಶ; ಹಿಂದು ಪದ ಕುರಿತ ಹೇಳಿಕೆ ಖಂಡಿಸಿ ಪ್ರತಿಭಟನೆ

    ತೀರ್ಥಹಳ್ಳಿ: ಹಿಂದು ಪದದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಡಲ ಬಿಜೆಪಿ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಸತೀಶ್ ಜಾರಕಿಹೊಳಿ ಹೇಳಿಕೆ ಕೋಮು ಭಾವನೆಗಳ ಕೆರಳಿಸಿವೆ. ಕೋಟ್ಯಂತರ ಹಿಂದುಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ದೇಶದ ಸೌಹಾರ್ದತೆಗೆ ಭಂಗ ತರುವ ಮತ್ತು ದೇಶದ ಸಮಗ್ರತೆಗೆ ಧಕ್ಕೆ ಉಂಟು ಮಾಡಿರುವ ಜಾರಕಿಹೊಳಿಯವರನ್ನು ಕಾಂಗ್ರೆಸ್ ಪಕ್ಷದವರು ಈ ಕೂಡಲೇ ಉಚ್ಚಾಟನೆ ಮಾಡಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಹೆದ್ದೂರು ನವೀನ್ ಆಗ್ರಹಿಸಿದರು.
    ತಾಪಂ ಮಾಜಿ ಸದಸ್ಯ ಚಂದವಳ್ಳಿ ಸೋಮಶೇಖರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಓಲೈಕೆ ರಾಜಕಾರಣವನ್ನೇ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ಇಂದು ದಯನೀಯ ಸ್ಥಿತಿ ತಲುಪಿದೆ. ನಿರ್ನಾಮ ಹಂತ ತಲುಪುವ ಸ್ಥಿತಿಗೆ ಬಂದಿದ್ದರೂ ಆ ಪಕ್ಷದವರಿಗೆ ಇಂದಿಗೂ ಹಿಂದುತ್ವದ ಹೆಗ್ಗಳಿಕೆಯ ಅರಿವಿಲ್ಲ. ಪಾದಯಾತ್ರೆ ಹಾಗೂ ಸತ್ತವರ ಮನೆಗಳಿಗೆ ಹೋಗಿ ಕೆಳಮಟ್ಟದ ರಾಜಕಾರಣ ಮಾಡುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಜಾರಕಿಹೊಳಿಯ ಹೇಳಿಕೆಯ ಬಗ್ಗೆ ಚಕಾರ ಎತ್ತಿಲ್ಲ. ಪಾದಯಾತ್ರೆ ಅಲ್ಲಾ ತಲೆ ಕೆಳಗೆ ಮಾಡಿ ನಡೆದರೂ ಜನ ಇವರಿಗೆ ಚುನಾವಣೆಯಲ್ಲಿ ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದರು.
    ಚಕ್ಕೋಡಬೈಲು ರಾಘವೇಂದ್ರ ಮಾತನಾಡಿ, ಹಿಂದುತ್ವದ ಆಧಾರದಲ್ಲಿಯೇ ಈ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಇಂದು ಜಗತ್ತಿನ ಮಾನ್ಯತೆಯನ್ನು ಗಳಿಸಿದ್ದಾರೆ. ಆದರೆ ಸ್ವಾತಂತ್ರ್ಯದ ಆರಂಭದಿಂದಲೂ ಕಾಂಗ್ರೆಸ್ ಹಿಂದುತ್ವವನ್ನು ವಿರೋಧಿಸಿಕೊಂಡು ಬಂದಿದೆ ಎಂದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts