More

    ಸಚಿವ ಗೋವಿಂದ ಕಾರಜೋಳ‌ ವಿರುದ್ದ ಚಾಟಿ, ಶಾಸಕ ಡಾ.ಎಂ.ಬಿ. ಪಾಟೀಲ ಹೇಳಿಕೆ, ಬಿಜೆಪಿಯ ಪಾಪದ ಮಂತ್ರಿ ಕಾರಜೋಳ

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಕಾಂಗ್ರೆಸ್ ನ ಪಾಪದ ಕೂಸು ಎಂದಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಹೇಳಿಕೆ‌ ಚಿಲ್ಲರೆ ಯಿಂದ ಕೂಡಿದೆ ಎಂದು ಶಾಸಕ ಡಾ.ಎಂ.ಬಿ. ಪಾಟೀಲ ತಿರುಗೇಟು ನೀಡಿದ್ದಾರೆ‌.

    ಬಿಜೆಪಿ ಅನೈತಿಕ ಕೂಸು. ಅಂಥ ಸರ್ಕಾರದಲ್ಲಿ ಮಂತ್ರಿಯಾಗಿರುವ ನೀವು ಪಾಪದ ಕೂಸು. ಹಿರಿಯರು, ಅನುಭವಿ, ಜವಾಬ್ದಾರಿಯುತ ಮಂತ್ರಿಯಾಗಿ ಇಂಥ ಹೇಳಿಕೆ ನೀಡಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ಲಾಲಬಹಾದ್ದೂರ ಶಾಸ್ತ್ರೀ ಅವರು ಆಲಮಟ್ಟಿ ಅಣೆಕಟ್ಟು ನಿರ್ಮಾಣ ಮಾಡದೇ ಹೋಗಿದ್ದರೆ ಈವೊತ್ತು ಕಾರಜೋಳರಿಗೆ ನೀರಾವರಿ ಮಂತ್ರಿಯಾಗುವ ಪ್ರಮೇಯ ಬರುತ್ತಿರಲಿಲ್ಲ. ಹೀಗಾಗಿ ನೀರಾವರಿ ವಿಷಯದಲ್ಲಿ ರಾಷ್ಟ್ರೀಯ ನಾಯಕರ ತನಕ ಹೋಗುವುದು ಕಾರಜೋಳರಿಗೆ ಶೋಭೆಯಲ್ಲ ಎಂದರು.

    ಕಳೆದ ಆರು ವರ್ಷ ಗೋವಿಂದ ಕಾರಜೋಳ ಸದನದಲ್ಲಿ ಏನು ಮಾತನಾಡಿದ್ದಾರೆ ಅದೆಲ್ಲ ದಾಖಲೆ ಪಡೆದಿದ್ದೇನೆ. ನೀರಾವರಿ ಬಗ್ಗೆ ಕಾರಜೋಳ ಮಾತನಾಡಿದ ಎಲ್ಲ ಮಾಹಿತಿ ಸಭಾಧ್ಯಕ್ಷರಿಂದ ಪಡೆದಿದ್ದೇನೆ. ಗೋವಿಂದ ಕಾರಜೋಳ ಅವರು ಬಹಳ ಕಾಳಜಿ ಹಾಗೂ ಬದ್ಧತೆಯಿಂದ ರೈತರಿಗೆ 40 ಲಕ್ಷ ಪರಿಹಾರ ಕೊಡಬೇಕು ಎಂದಿದ್ದಾರೆ. 4. 1 ವರ್ಷ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ಈ ಸರ್ಕಾರದಲ್ಲಿ ಕಾರಜೋಳ ಅವರು ಮಂತ್ರಿಯಾಗಿದ್ದಾರೆ‌. ಈವರೆಗೆ ಮಾಡಿದ್ದೇನು? ಕೇಂದ್ರ ಹಾಗೂ ರಾಜ್ಯ ಸರ್ಕಾರದ ಲ್ಲಿ ಇವರದ್ದೇ ಸರ್ಕಾರ ಇದೆಯಲ್ಲ. ಗ್ಯಾಜೆಟ್ ನೋಟಿಫಿಕೇಶನ್ ಏಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

    2013 ರಲ್ಲಿ ಸಿದ್ದರಾಮಯ್ಯ ಸರ್ಕಾರದ ಲ್ಲಿ ನಾನು ನೀರಾವರಿ ಮಂತ್ರಿಯಾಗಿ ಗೆಜೆಟ್ ನೋಟಿಫಿಕೇಶನ್ ಗೆ ಕಾಯುತ್ತಾ ಕೂರಲಿಲ್ಲ‌. ಜಾಕ್ ವೆಲ್, ವಿದ್ಯುತ್ ಸ್ಥಾವರ, ಕಾಲುವೆ, ಅಕ್ವಾಡೆಕ್ಟ್ ಹೀಗೆ ಗ್ಯಾಜೆಟ್ ನೋಟಿಫಿಕೇಶನ್ ತೆ ಕಾಯದೇ ಪೂರ್ವ ಭಾವಿಯಾಗಿ ಕಾಮಗಾರಿ ಕೈಗೊಳ್ಳಲಾಯಿತು‌. ಪರಿಣಾನ ಜಿಲ್ಲೆ ನೀರಾವರಿ ಆಯಿತು‌. ಜನ ಖುಷಿಯಿಂದ ಇದ್ದಾರೆ. ನಾನೂ ಗೆಜೆಟ್ ನೋಟಿಫಿಕೇಶನ್ ಗೆ ಕಾಯುತ್ತಾ ಕೂತಿದ್ದರೆ ಇಷ್ಟೆಲ್ಲಾ ಕೆಲಸ ಆಗುತ್ತಿತ್ತಾ ಎಂದು ಪ್ರಶ್ನಿಸಿದರು.
    ಭೂಸ್ವಾಧೀನ ಹಾಗೂ ಪುನರ್ವಸತಿಗೆ ಹಿಂದಿನ ಸರ್ಕಾರ 17206 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುನೋದನೆ ಕೊಡಲಾಗಿದ್ದು ಅದೊಂದು ತಾತ್ವಿಕ ಒಪ್ಪಿಗೆಯಾಗಿದ್ದು ಈಗ ಅದರ ಮೊತ್ತ ಹೆಚ್ಚಿದೆ. ಕನಿಷ್ಠ 40 ಲಕ್ಷ ರೂ. ಪರಿಹಾರ ನೀಡಬೇಕೆಂದು ಕಾರಜೋಳರೇ ಹೇಳುತ್ತಾರೆ.
    2014 ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆ ಬಂದಾಗ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕಾಗಿ ಬಂತು. ಆಗ ಸಮಗ್ರ ಯೋಜನೆ ವರದಿ ಸಿದ್ದಪಡಿಸಿ ಹೆಚ್ಚಿನ ಅನುದಾನ ಮೀಸಲಿಡಲಾಯಿತು.
    33103 ಕೋಟಿ ರೂ. ಮೀಸಲಿಡಲಾಯಿತು. ಆದರೆ ನೀವು ಮಾಡಿದ್ದು ಎಷ್ಟು? ಎಂದು ಪ್ರಶ್ನಿಸಿದ ಡಾ.ಎಂ.ಬಿ. ಪಾಟೀಲ
    ಕಾರಜೋಳ ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದರು.
    ನಾನು ನೀರಾವರಿ ಮಂತ್ರಿಯಾಗಿದ್ದಾಗ ಪ್ರತ್ಯೇಕ ಹಣಕಾಸು ಖಾತೆ ತೆಗೆದೆ. ಅಲ್ಲಿಯವರೆಗೂ ಅದು ಪ್ರತ್ಯೇಕವಾಗಿರಲಿಲ್ಲ. ಪ್ರತ್ಯೇಕ ಖಾತೆ ಮಾಡಿ ಹಣ ಮೀಸಲಿಟ್ಟೆ. ಉನ್ನತ ಮಟ್ಟದ ಸಭೆ ಮಾಡಿದೆ ಎಂದರು.
    1.25 ಲಕ್ಷ‌ ಕೋಟಿ ರೂ.ಕೃಷ್ಣಾ ಮೇಲ್ದಂಡೆ ಯೋಜನೆಗೆ ಖರ್ಚು ಮಾಡುವುದಾಗಿ ಹೇಳಿದ ಯಡಿಯೂರಪ್ಪ ಈವರೆಗೂ ಏನೂ ಮಾಡಿಲ್ಲ‌. ಮಂಗಳವಾರ ಸಿಎಂ ಬೊಮ್ಮಾಯಿ‌ ಸಹ ಸಭೆ ಮಾಡಿ ಭೂಸ್ವಾಧೀನಕ್ಕೆ ಹಣ ಮೀಸಲಿಡುವ ಬಗ್ಗೆ ಮಾತನಾಡಿದ್ದಾರೆ.
    ಕನಿಷ್ಠ ಪಕ್ಷ 40 ಲಕ್ಷ ರೂ. ಪರಿಹಾರ ನೀಡುವುದಾಗಿ ಭಾಷಣ ಮಾಡುತ್ತಿದ್ದ ಕಾರಜೋಳ ಅವರು ಈಗ ಆ ಮೊತ್ತ ನಿಗದಿ ಮಾಡಬಹುದಿತ್ತಲ್ಲ? ನಮ್ಮವರಿದ್ದೀರಿ, ಕಣ್ಣೀರು ಹಾಕಿದ್ದೀರಿ, ವ್ಯಂಗ್ಯ, ಕೊಳಕಾಗಿ ಮಾತಾಡಿದ್ದೀರಿ….ಈಗ ನಿಮ್ಮ ಕೈಯಲ್ಲಿಯೇ ಅಧಿಕಾರ ಇದೆಯಲ್ಲ….ಮಾಡಿ‌. 2022 ರ ಬಜೆಟ್ ನಿಮ್ಮ ಕೈಯಲ್ಲೇ ಇದೆಯಲ್ಲ ಎಷ್ಟು ಕೆಲಸ ಮಾಡುತ್ತೀರಿ ನೋಡೋಣ ಎಂದರು.
    ಸದನದ ಹೊರಗೆ, ಒಳಗೆ ನೀವೇ ಮಾತನಾಡಿದ್ದನ್ನು ಅನುಷ್ಟಾ‌ಕ್ಕೆ ತನ್ನಿ ಸಾಕು‌‌. ನೀವು ಆಡಿದ ಮಾತು ಜಾರಿಗೆ ಬಂದರೆ ಅಷ್ಟೇ ಸಾಕು ಎಂದರು.
    ನೋಟಿಫಿಕೇಶನ್ ಆದರೆ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು‌ ಮೂರು ತಿಂಗಳು ಸಾಕು ಎನ್ನುವ ಕಾರಜೋಳರ ಹೇಳಿಕೆ ಹಾಸ್ಯಾಸ್ಪದ ಎಂದರು.
    ಈ ದೇಶಕ್ಕೆ ತ್ಯಾಗ ಮಾಡಿದವರು ನಾವು, ನಮ್ಮ ಬದುಕು ಕಟ್ಟಿಕೊಡಲು ಆಗದಿದ್ದರೆ ನೀವೇನು ಸರ್ಕಾರ ನಡೆಸುತ್ತೀರಿ? ಎಂದು ಸದನದಲ್ಲಿ ಭಾಷಣ ಮಾಡಿದ ಕಾರಜೋಳ ಈಗ ನೀವೇನು ಮಾಡುತ್ತಿದ್ದೀರಿ? ಎಂದರು.
    ಮುಧೋಳದ
    ಕಾಚಕನೂರ, ಆಲಗುಂಡಿ ಮತ್ತಿತರ ಗ್ರಾಮಗಳಲ್ಲಿ ಮುಳುಗಡೆಯಿಂದ ಸಂಕಷ್ಟ ಎದುರಾಗಿದೆ. ಹಾವು, ಚೇಳು, ಕಪ್ಪೆ ವಾಸಿಸುತ್ತಿವೆ ಎಂದಿದ್ದ ಕಾರಜೋಳ ಅವರೇ ನಿಮ್ಮ ಸರ್ಕಾರ ಬಂದು ಎರಡು ವರ್ಷವಾಯಿತಲ್ಲ ಹಾವು, ಚೇಳು, ಕಪ್ಪೆ ಹೋದವಾ? ಎಂದು ಟಾಂಗ್ ನೀಡಿದರು.
    ಕಾರಜೋಳರೇ ಹೇಳಿದಂತೆ ನೀರಾವರಿ ಜಮೀನಿಗೆ 40 ಲಕ್ಷ ರೂ.ಪರಿಹಾರ ನೀಡಿ. ಹೆಚ್ಚಿಗೆ ನೀಡದರೂ ನಮ್ಮ ಅಭ್ಯಂತರ ಇಲ್ಲ. ಕೆಬಿಜೆಎನ್ ಎಲ್ ಕಚೇರಿ ಸ್ಥಳಾಂತರ ನಿರ್ಧಾರ ಸ್ವಾಗತ ಎಂದ ಡಾ.ಎಂ.ಬಿ. ಪಾಟೀಲ, ಏಕರೂಪ ಬೆಲೆ ನಿಗದಿ ಮಾಡಲು ರೈತರು ನ್ಯಾಯಾಲಯದ ಮೊರೆ ಹೋಗಲು ಸಿದ್ದರಾಗಿದ್ದು ಅಷ್ಟರಲ್ಲಿ ಬೆಲೆ ನಿಗದಿಪಡಿಸಿ. ಬಹಳ ಸಮಯ ಉಳಿದಿಲ್ಲ. ಎರಡು ವರ್ಷ ಈಗಾಗಲೇ ಕಳೆದಿದ್ದೀರಿ. ಇನ್ನು ಬಹಳ ದಿನ ಉಳಿದಿಲ್ಲ. ಅಷ್ಟರಲ್ಲಿ ಆರು ವರ್ಷ ನೀವೇ ಮಾತನಾಡಿದ್ದನ್ನು ಸಾಧಿಸಿ ತೋರಿಸಿ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಸಹ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts