More

    ಸಕಾರಾತ್ಮಕ ಯೋಚನೆಗೆ ಪ್ರೊ.ಸಿಆರ್ಸಿ ಸಲಹೆ

    ಕಲಬುರಗಿ: ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಯೋಚಿಸಿ ವಾಸ್ತವ ಅರಿತು ಮುನ್ನಡೆಯಬೇಕು ಎಂದು ಖ್ಯಾತ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ ಸಲಹೆ ಮಾಡಿದರು.
    ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಾನಸಿಕ ಆರೋಗ್ಯ ಕುರಿತು ಗುರುವಾರ ವಿಶೇಷ ಉಪನ್ಯಾಸ ನೀಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಧಿಕಾರ, ಸ್ಥಾನ, ಹಣ, ಪ್ರಶಸ್ತಿ, ಪುರಸ್ಕಾರ ಗಳಿಕೆಯಲ್ಲಿ ವಿಪರೀತ ಸ್ಪರ್ಧೆ ಮತ್ತು ವೇಗವಿದೆ. ವಿದ್ಯಾರ್ಥಿಗಳು ತನ್ನ ಇತಿ-ಮಿತಿ ಶಕ್ತಿ, ದೌರ್ಬಲ್ಯ ಅರ್ಥೈಸಿಕೊಂಡು ಸೋಲು-ಗೆಲುವಿಗೆ ಸಿದ್ಧರಾಗಬೇಕು. ಸೋತಾಗ ಕುಗ್ಗದೆ ಸಮರ್ಥವಾಗಿ ಎದುರಿಸಬೇಕು. ಆಸೆ ಇರಬೇಕು. ಆದರೆ ದುರಾಸೆ ಇರಬಾರದು. ನಾವು ಗಳಿಸಿದ್ದರಲ್ಲಿ ತೃಪ್ತಿ ಹೊಂದಿರಬೇಕು. ಜೀವನದ ಸಾಧನೆ ಹಾದಿಯಲ್ಲಿ ಸೋತಾಗ ಧೈರ್ಯದಿಂದ ಮತ್ತೆ ಪ್ರಯತ್ನಿಸಬೇಕು ಎಂದು ತಿಳಿಹೇಳಿದರು.
    ಒಂಟಿತನ ಅನಾಥಪ್ರಜ್ಞೆ, ಹಿಂಸೆ, ಅಸಹಾಯಕತೆ ಜತೆಗೆ ಮನುಷ್ಯನ ನೆಮ್ಮದಿ ಕೆಡಿಸುತ್ತದೆ. ಆದ್ದರಿಂದ ಜನರ ಸಂಪರ್ಕದಲ್ಲಿ ಇರಬೇಕು. ತಂದೆ-ತಾಯಿ, ಬಂಧು-ಬಳಗ, ಗುರು-ಹಿರಿಯರ ಜತೆಗಿರಬೇಕು. ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ಸದಾ ಚಟುವಟಿಕೆಯಿಂದ ಇರಬೇಕು. ದೇವರಲ್ಲಿ ನಂಬಿಕೆಯಿಟ್ಟು ಪ್ರಾರ್ಥನೆ ಮಾಡಬೇಕು. ದೀನ-ದುರ್ಬಲರಿಗೆ ನೆರವಾಗಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts