More

    ಸಂಸ್ಕೃತಿ, ಪರಂಪರೆ ಬೆಳೆಸಲು ಹೋರಾಟ ಅಗತ್ಯ

    ರಾಣೆಬೆನ್ನೂರ: ಧರ್ಮ-ಅಧರ್ಮ, ಪರಕೀಯರ ಆಕ್ರಮಣದಿಂದ ಹಾಗೂ ಜಾತಿ, ಭೇದ-ಭಾವ ಹೋಗಲಾಡಿಸುವುದು ಸೇರಿ ಪ್ರತಿ ಹೋರಾಟದಲ್ಲೂ ಕರ್ನಾಟಕದ ಪಾತ್ರ ಬಹುಮುಖ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಸಹಬೌದ್ಧಿಕ ಪ್ರಮುಖ ರವೀಂದ್ರ ಹೇಳಿದರು.

    ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ವೈಭವ ಕಾರ್ಯಕ್ರಮದ ಕರ್ನಾಟಕ ಕಲಾ ವೈಭವ ಗೋಷ್ಠಿಯಲ್ಲಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

    ಪರಕೀಯರ ಆಕ್ರಮಣದಿಂದ ನಮ್ಮ ಸಂಸ್ಕೃತಿ ಹಾಗೂ ಇತಿಹಾಸ ಉಳಿಸಿಕೊಳ್ಳಲು ದೇಶದಲ್ಲಿ ಸಾಕಷ್ಟು ಹೋರಾಟ ನಡೆದಿವೆ. ಅವುಗಳಲ್ಲಿ ಕರ್ನಾಟಕದ ಪಾತ್ರ ಅರ್ಥಗರ್ಭಿತವಾದದ್ದು. ರಾಜ್ಯದಲ್ಲಿ ಕೇವಲ ಇಂಗ್ಲಿಷರ ವಿರುದ್ಧ ಹೋರಾಟ ನಡೆದಿಲ್ಲ. ಧರ್ಮ, ಅಧರ್ಮ, ಜಾತಿ, ಭೇದ-ಭಾವ ಸೇರಿ ಇತರ ವಿಚಾರವಾಗಿಯೂ ಹೋರಾಟ ನಡೆದಿವೆ. ಧರ್ಮ ಕಾಪಾಡುವಲ್ಲಿ ಹಾಗೂ ಅಧರ್ಮದ ವಿರುದ್ಧದ ಹೋರಾಟ ಪರಶುರಾಮನಿಂದಲೇ ಆರಂಭಗೊಂಡಿದೆ. ಇಂದಿಗೂ ಜಾತಿ-ಧರ್ಮದ ಹೆಸರಿನಲ್ಲಿ ಹೋರಾಟ ನಡೆಯುತ್ತಿವೆ. ಆದರೆ, ರಾಜ್ಯ ಬೆಳೆಸುವ ಹಾಗೂ ಕಟ್ಟುವ ನಿಟ್ಟಿನಲ್ಲಿ ಹೋರಾಟ ನಡೆಯಬೇಕು. ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.

    ಗದಗ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಸುರೇಶ ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವೈಭವದ ಸರ್ವಾಧ್ಯಕ್ಷ ಡಾ. ಎಸ್.ಜಿ. ವೈದ್ಯ ಮತ್ತಿತರರಿದ್ದರು.

    ವೈದ್ಯ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಯೂತ್ ಫಾರ್ ಸೇವಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವೆಂಕಟೇಶಮೂರ್ತಿ ಉಪನ್ಯಾಸ ನೀಡಿದರು.

    ಕವಿ ಗೋಷ್ಠಿಯಲ್ಲಿ ಕರ್ನಾಟಕ ವೈಭವ ವಿಷಯ ಕುರಿತು ಶಿವಮೊಗ್ಗದ ಹಿರಿಯ ಸಾಹಿತಿ ಅಸಾದುಲ್ಲಾ ಬೇಗ್ ಮಾತನಾಡಿ, ಜೀವನದಲ್ಲಿ ಛಲ, ಹಠ, ಗುರಿ ಸಾಧನೆಯಿದ್ದರೆ ಯುವಕರು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಕವಿತೆ ಮನುಷ್ಯನಲ್ಲಿ ಸತ್ವಗುಣ ಬೆಳೆಸಿ ಸತ್ಯವಂತನನ್ನಾಗಿ ಮಾಡುತ್ತದೆ. ಕನ್ನಡದ ನೆಲ, ಭಾಷೆಯ ವೈಭವವಾದರೆ ಮಾತ್ರ ಕರ್ನಾಟಕ ವೈಭವಯುತವಾಗಿ ವಿಜ್ರಂಭಿಸಿ ಸಾರ್ಥಕತೆ ಪಡೆಯುತ್ತದೆ. ಮಾತೃ ಭಾಷೆ ಯಾವುದೇ ಇರಲಿ ಹೃದಯದ ಭಾಷೆ ಕನ್ನಡವಾಗಿರಲಿ ಎಂದರು.

    ಧಾರವಾಡದ ಹಿರಿಯ ಸಾಹಿತಿ ಡಾ. ವಿ.ಸಿ. ಐರಸಂಗ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ರಂಗರಾಜ್ ವನದುರ್ಗ, ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು, ಚಿಂತಕ ಡಾ. ಸಿದ್ಧರಾಮಯ್ಯ ಮಠಪತಿ ಮತ್ತಿತರರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

    ಯುವಶಕ್ತಿ ದೃಢ ಸಂಕಲ್ಪ ಹೊಂದಲಿ

    ಯುವ ಗೋಷ್ಠಿಯಲ್ಲಿ ‘ಭಾರತದ ಪ್ರಗತಿಗೆ ಪವಿಶಕ್ತಿ-ನಮ್ಮ ಯುವಶಕ್ತಿ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ, ಆತ್ಮವೆಂಬುದು ಭಾರತದ ಆಧ್ಯಾತ್ಮಿಕವಾಗಿದೆ. 70ನೇ ವಯಸ್ಸಿನ ರಮಣ, ಪರಮಹಂಸರರು ವಿವೇಕಾನಂದರಿಗೆ ಹೇಗೆ ಪ್ರೇರಕರಾದರು, ಅಂತಹ ಪ್ರೇರಣೆ ಶಕ್ತಿಯನ್ನು ಇಂದಿನ ಯುವಕರು ಪಡೆಯಬೇಕಾಗಿದೆ. ಯುವಕರಿಗೆ ಆತ್ಮಸ್ಥೈರ್ಯ, ಒಳ್ಳೆಯ ನಿರ್ಧಾರ, ದೃಢ ಸಂಕಲ್ಪ ಮನೋಭಾವ ಹೊಂದಿದರೆ ಸಾಧನೆ ನಿಮ್ಮದಾಗಲಿದೆ. ಯುವಜನಾಂಗ ಸದಾ ಕ್ರೀಯಾಶೀಲ ಚಟುವಟಿಕೆಯಿಂದ ಇರಬೇಕು. ಕನಸು ಕಾಣುವ ಉತ್ಕೃಷ್ಟ ಮನೋಭಾವನೆ ಹೊಂದಿರಬೇಕು. ಯುವಶಕ್ತಿಯಲ್ಲಿ ಹೆಣ್ಣು-ಗಂಡು, ಮೇಲು -ಕೀಳು, ಬಡವ-ಶ್ರೀಮಂತ ಎನ್ನದೇ ಸದಾ ದೇಶದ ಒಳತಿಗೆ ಹಂಬಲಿಸುವಂತಾಗಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts