More

    ಸಂಸ್ಕೃತಿ ಉಳಿಕೆಗೆ ಮಕ್ಕಳನ್ನು ಕನ್ನಡದಲ್ಲಿ ಓದಿಸಿ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ನಮ್ಮ ಭವ್ಯ ಸಂಸ್ಕೃತಿ ಉಳಿಸಲು ಹತ್ತನೇ ತರಗತಿವರೆಗೂ ಮಕ್ಕಳನ್ನು ಮಾತೃಭಾಷೆಯಲ್ಲಿ ಓದಿಸಬೇಕು ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
    ಭಾನುವಾರ ನಗರದ ಸಂಗಮೇಶ್ವರ ಮಹಿಳಾ ಮಂಡಳದ 42ನೇ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕನ್ನಡ ಭಾಷೆ ಅಳಿವಿನಂಚಿನತ್ತ ಸಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚಾಗುತ್ತಿವೆ. ಕನ್ನಡ ಶಾಲೆಗಳು ಮುಚ್ಚುತ್ತಿರುವುದು ದುರಂತದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
    ಮಹಿಳಾ ಮಂಡಳ ಆವರಣದಲ್ಲಿ ಮಂಡಳದ ಸದಸ್ಯೆಯರು ಸಿದ್ದಪಡಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆ ಗಮನ ಸೆಳೆದವು.
    ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ್ ಮಳಿಗೆಗಳನ್ನು ಉದ್ಘಾಟಿಸಿದರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಮಹಿಳಾ ಮಂಡಳದ ಉಪಾಧ್ಯಕ್ಷೆ ಡಾ.ಮಹಾದೇವಿ ಮಾಲಕರಡ್ಡಿ, ಕಾರ್ಯದರ್ಶಿ ಶೋಭಾ ರಂಜೋಳಕರ್, ಮೇಘಾ ಪಾಂಡ್ವೆ ಮುಖ್ಯ ಅತಿಥಿಗಳಾಗಿದ್ದರು. ಸಂಗಮೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ವೈಶಾಲಿ ದೇಶಮುಖ ಅಧ್ಯಕ್ಷತೆ ವಹಿಸಿದ್ದರು.
    ಸಂಗೀತ ವಿಧುಷಿ ತಾರಾಬಾಯಿ ಕುಲಕರ್ಣಿ , ನರ್ಮದಾ ಚಿಂಚನಸೂರ, ಸ್ವಪ್ನಾ ದೇಶಪಾಂಡೆ ಅವರನ್ನು ಸ್ಮಾನಿಸಲಾಯಿತು.
    ಶಾಂತಾ ಸ್ವಾಗತಿಸಿದರು. ಸಂಗಮೇಶ್ವರ ಮಹಿಳಾ ಮಂಡಳ ಸಹ ಕಾರ್ಯದರ್ಶಿ ಸಂಧ್ಯಾ ಹೊನಗುಂಟಿಕರ್ ಪ್ರಾಸ್ತಾವಿಕ ಮಾತನಾಡಿದರು.ಉಪನ್ಯಾಸಕಿ ಜಾನಕಿ ದೇಶಪಾಂಡೆ ನಿರೂಪಣೆ ಮಾಡಿದರು.

    ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
    ವರ್ಣಸಿಂಧು ನಾಟ್ಯ ಕಲಾಕೇಂದ್ರದ ವಿದ್ಯಾಥರ್ಿಗಳು ಭರತನಾಟ್ಯ ಪ್ರದಶರ್ಿಸಿ ಮೆಚ್ಚುಗೆಗೆ ಪಾತ್ರರಾದರು. ಹುಣಸಗಿಯ ವೀರಸಂಗಮ್ಮ ಅವರು ಜಾನಪದಗೀತೆ, ಶಾರದಾ ಸಂಗೀತ ವಿದ್ಯಾಲಯದ ವಿದ್ಯಾಥರ್ಿಗಳಿಂದ ಸಂಗೀತ ಕಾರ್ಯಕ್ರಮ, ಮಹಿಳೆಯರಿಂದ ಜಾನಪದ ಗೀತೆಗಳ ಸ್ಪಧರ್ೆ, ಛದ್ಮವೇಷ ಸ್ಪದರ್ೆ, ನರ್ಸರಿ ಮಕ್ಕಳಿಂದ ನೃತ್ಯ, ಬಳ್ಳಾರಿಯ ರಾಮಪ್ಪ ಮತ್ತು ತಂಡದವರಿಂದ ಜೋಗತಿ ನೃತ್ಯ ಹಾಗೂ ಮಹಿಳೆಯರಿಂದ ಕಿರುನಾಟಕ ಪ್ರದರ್ಶನ ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts