More

    ಸಂಸದ ಡಾ.ಜಾಧವ್​ ವಂದೇ ಭಾರತ್​ ಪ್ರಯಾಣ

    ಕಲಬುರಗಿ: ಬೆಂಗಳೂರಿನಿAದ ಕಲಬುರಗಿಗೆ ಹೊರಟ ವಂದೇ ಭಾರತ್ ರೈಲಿನಲ್ಲಿ ಸಂಸದ ಡಾ.ಉಮೇಶ ಜಾಧವ್ ಮಂಗಳವಾರ ಪ್ರಯಾಣ ಬೆಳೆಸಿ, ಪ್ರಯಾಣಿಕರೊಂದಿಗೆ ಚರ್ಚಿಸಿದರು.
    ರೈಲಿನಲ್ಲಿದ್ದ ಸಹ ಪ್ರಯಾಣಿಕರ ಜತೆ ಉಭಯ ಕುಶಲೋಪರಿ ನಡೆಸಿದ್ದು, ಅತ್ಯುತ್ತಮ ಸೌಲಭ್ಯ ಒದಗಿಸಿದ್ದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರÈ ಬಂದ ನಂತರ ಮೊದಲ ಬಾರಿಗೆ ನೇರ ರೈಲು ವ್ಯವಸ್ಥೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಎಂದು ಬಣ್ಣಿಸಿದ್ದಾರೆ. ರೈಲಿನಲ್ಲಿ ನೀಡುವ ಉಟೋಪಚಾರ, ಆತಿಥ್ಯಕ್ಕೆ ಪ್ರಯಾಣಿಕರು ಖುಷಿ ಆಗಿದ್ದಾರೆ ಎಂದು ಡಾ.ಜಾಧವ್ ತಿಳಿಸಿದ್ದಾರೆ.
    ಅಭಿವೃದ್ಧಿ ಟೀಕಿಸುವ ಜನರಿಗೆ ಸೌಲಭ್ಯ ಹೀಯಾಳಿಸುವ ಪ್ರವೃತ್ತಿಯು ಉತ್ತಮ ಲಕ್ಷಣವಲ್ಲ. ಅಭಿವೃದ್ಧಿ ಸಹಿಸದೆ ವಿರೋಧಿಗಳು ಟೀಕೆ ಮಾಡುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಕಲಬುರಗಿಯ ಎರಡನೇ ಪಿಟ್‌ಲೈನ್ ಕೆಲಸ ಪೂರ್ಣವಾದ ನಂತರ ರೈಲು ಗಾಡಿಗಳನ್ನು ಕಲಬುರಗಿಯಿಂದ ಬೆಂಗಳೂರು ಕಂಟೋನ್ಮೆAಟ್‌ವರೆಗೆ ಓಡಿಸಲಾಗುವುದು. ಕಲಬುರಗಿಯಲ್ಲಿ ಎರಡನೇ ಪಿಟ್‌ಲೈನ್ ಕೆಲಸ ಆರಂಭವಾಗಿದ್ದು, ಶೀಘ್ರದಲ್ಲಿ ಮುಕ್ತಾಯಕ್ಕೆ ಕ್ರಮ ಕೈಗೊಳ್ಳಲಾಗುವುದು. ನೂತನ ರೈಲುಗಳ ಆರಂಭದಿAದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವೇಗ ಸಿಕ್ಕಿದೆ ಎಂದು ಡಾ.ಜಾಧವ್ ಹಂಚಿಕೊAಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts