More

    ಸಂವಿಧಾನ ಬದುಕಿನ ಉಸಿರಾಗಲಿ

    ಹುಣಸೂರು: ಸಂವಿಧಾನ ನಮ್ಮ ನಿತ್ಯ ಬದುಕಿನ ಉಸಿರಾಗಬೇಕು ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 66ನೇ ಮಹಾಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

    ಅಂಬೇಡ್ಕರ್ ನೀಡಿದ ಸಂವಿಧಾನ ಕೇವಲ ಶೋಷಿತರಿಗೆ ಮಾತ್ರ ನ್ಯಾಯ ಒದಗಿಸಿಲ್ಲ. ಬದಲಾಗಿ ಸಮಾಜದ ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದೆ. ತಮ್ಮ ಸ್ವಾರ್ಥಕ್ಕಾಗಿ ಸಾಮಾಜಿಕ ನ್ಯಾಯವನ್ನು ಅವರು ಪ್ರತಿಪಾದಿಸಲಿಲ್ಲ. ಬದಲಾಗಿ ಭವಿಷ್ಯದ ಭಾರತದಲ್ಲಿ ಸಮಾನತೆ ಸಾಧಿಸಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯವೆನ್ನುವ ಅಂಶವನ್ನು ಮನಗಂಡು ಸಮಾನತೆ, ಸಾಮಾಜಿಕ ನ್ಯಾಯ, ಮೀಸಲಾತಿಯಂತಹ ಆದರ್ಶ ಸಿದ್ಧಾಂತಗಳನ್ನು ಅಳವಡಿಸಿದ್ದಾರೆ. ರಾಷ್ಟ್ರೀಯತೆ, ಪೌರತ್ವ, ಜನಾಂಗೀಯತೆ ಮುಂತಾದ ವಿಷಯಗಳ ಕುರಿತು ಅವರ ವಿಶ್ಲೇಷಣಾತ್ಮಕ ನಿಲುವುಗಳು ಇಂದಿಗೂ ಚರ್ಚೆಗೆ ಅರ್ಹ ವಿಷಯಗಳಾಗಿವೆ ಎಂದರು.

    ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ನಿಂಗರಾಜ ಮಲ್ಲಾಡಿ, ಬಸವಲಿಂಗಯ್ಯ, ಡಿ.ಕುಮಾರ್, ಗಜೇಂದ್ರ, ಬಿಳಿಕೆರೆ ನಾರಾಯಣ್, ಹಿರಿಯ ರಂಗಕಲಾವಿದ ಎಸ್.ಜಯರಾಂ, ಉಪವಿಭಾಗಾಧಿಕಾರಿ ರುಚಿ ಬಿಂದಾಲ್, ಸಿಡಿಪಿಒ ರಶ್ಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts