More

    ಸಂವಿಧಾನದ ಆಶಯಗಳ ಜಾರಿಗೆ ಗಮನಹರಿಸಿ

    ಹುಣಸೂರು: ನಾಗರಿಕರಾಗಿ ನಾವು ಹೇಗೆ ಬಾಳಬೇಕೆನ್ನುವುದನ್ನು ಸಂವಿಧಾನ ತಿಳಿಸಿಕೊಟ್ಟಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ತಿಳಿಸಿದರು.

    ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಸಂವಿಧಾನ ನಮಗೆ ಅತ್ಯಂತ ಪೂಜ್ಯನೀಯವಾದುದು. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ನಾಗರಿಕನಾಗಿ ಈ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟಿದೆ. ಮಾತ್ರವಲ್ಲದೆ 1970ರಲ್ಲಿ ಹಕ್ಕಿನ ಜತೆಗೆ ನಾಗರಿಕರ ಕರ್ತವ್ಯವನ್ನೂ 42ನೇ ತಿದ್ದುಪಡಿಯ ಮೂಲಕ ತಿಳಿಸಲಾಗಿದೆ. ಹಕ್ಕು ಮತ್ತು ಕರ್ತವ್ಯ ಎರಡನ್ನೂ ಪಾಲಿಸುವ ಹೊಣೆ ನಮ್ಮದಾಗಿದೆ. ಸಂವಿಧಾನದ ಪೀಠಿಕೆಯಲ್ಲಿನ ವಿಷಯಗಳನ್ನು 448 ಪರಿಚ್ಛೇದದ ಮೂಲಕ ವಿಸ್ತಾರವಾಗಿ ತಿಳಿಸಲಾಗಿದ್ದು, ವಿದ್ಯಾರ್ಥಿಗಳು ಪೀಠಿಕೆಯ ಪ್ರತಿಯೊಂದು ಪದವನ್ನು ಅರ್ಥೈಸಿಕೊಂಡು ಸಂವಿಧಾನದ ಆಶಯಗಳನ್ನು ಅನುಸರಿಸುವತ್ತ ಗಮನಹರಿಸಬೇಕೆಂದು ಸಲಹೆ ನೀಡಿದರು.

    ಪ್ರಭಾರ ಪ್ರಾಂಶುಪಾಲ ಬಿ.ಆರ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ನಾಗಣ್ಣೇಗೌಡ ಮಾತನಾಡಿದರು. ಉಪಾಧ್ಯಕ್ಷ ಬಿ.ಸಿ.ಸುಂದರೇಶ್, ಕಾರ್ಯದರ್ಶಿ ಶ್ರೀನಿವಾಸ್, ಪ್ರಾಧ್ಯಾಪಕರಾದ ಶಾಂತರಾಜು, ಧರ್ಮೇಗೌಡ, ಚಲುವೇ ಅರಸ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಟಿ.ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts