More

    ಸಂಧ್ಯಾವಂದನೆಯಿಂದ ಮನಸ್ಸಿಗೆ ನೆಮ್ಮದಿ

    ಹುಮನಾಬಾದ್: ವಿಶ್ವಕ್ಕೆ ಬೆಳಕು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮಾಡುವ ಕಾರ್ಯವೇ ಸಂಧ್ಯಾವಂದನೆ. ಇದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸಲಿದೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ನುಡಿದರು.

    ಮಾಣಿಕನಗರದ ಶ್ರೀ ಮಾಣಿಕಪ್ರಭು ದೇವಸ್ಥಾನಕ್ಕೆ ಬುಧವಾರ ಸಂಜೆ ಭೇಟಿ ನೀಡಿದ ಅವರು ವಿಶೇಷ ಪಂಚಾಮೃತ ಅಭಿಷೇಕಾದಿ ಪೂಜೆ ಸಲ್ಲಿಸಿದ ಬಳಿಕ ಸಂಧ್ಯಾವಂದನೆ ಕುರಿತು ಅಮೃತೋಪದೇಶ ನೀಡಿದರು.

    ಸತ್ಯಾತ್ಮತೀರ್ಥರ ಪಾದಪೂಜೆ ಮೂಲಕ ಪೂರ್ಣಕುಂಭ ಸ್ವಾಗತ ಕೋರಿದ ಶ್ರೀ ಮಾಣಿಕಪ್ರಭು ಸಂಸ್ಥಾನ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಮಾಣಿಕಪ್ರಭುಗಳು ಮಾತನಾಡಿ, ಸತ್ಸಂಗದಲ್ಲಿ ತೊಡಗಿದರೆ ಪರಮಾತ್ಮ ನಮ್ಮನ್ನು ಯಾವತ್ತೂ ಕೈಬಿಡಲ್ಲ. ಸುಖವನ್ನು ಅರಸಿ ಬೇರೆ ಲೋಕದಲ್ಲಿ ಹೋಗಬೇಕಿಲ್ಲ. ಬದಲಿಗೆ ಈ ಲೋಕದಲ್ಲೇ ಸುಂದರ ಬದುಕು ಸಾಗಿಸುವುದೇ ಮಹಾತ್ಮರ, ಅನುಭಾವಿಗಳ ಸಂಗ. ಅದುವೇ ಸತ್ಸಂಗ ಎಂದರು.

    ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಪ್ರಭು, ಸಹ ಕಾರ್ಯದಶರ್ಿ ಚೈತನ್ಯರಾಜ ಪ್ರಭು, ಚಾರುದತ್ತ ಪ್ರಭು, ಚಿಂಚವಲ್ ಪ್ರಭು,ಪ್ರಮುಖರಾದ ದತ್ತಕುಮಾರ ಚಿದ್ರಿ, ವೆಂಕಟೇಶ ಕುಲಕರ್ಣಿ, ಕಿಶೋರ ಕುಲಕರ್ಣಿ, ಮಹಾದೇವ ಜಲಸಿಂಗಿ, ವಸಂತ ನಾಯಕ, ಪ್ರಜ್ಞಾನ್, ಸೂರ್ಯಕಾಂತ ಹಾವಶೆಟ್ಟಿ, ಭೀಮರಾವ ಕುಲಕರ್ಣಿ, ಪ್ರಭಾಕರ ಕುಲಕರ್ಣಿ, ಅಮರ ಪ್ರಭಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts