More

    ಸಂತೆ ಕರ ಲಿಲಾಲು- ದಾಖಲೆ ಬರೆದ ವಿಜಯಪುರ ಮಹಾನಗರ ಪಾಲಿಕೆ

    ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿಯ ವಿವಿಧ ಸಂತೆ ಬಜಾರ್‌ಗಳ ಲಿಲಾವು ಪ್ರಕ್ರಿಯೆಯಲ್ಲಿ 99.25 ಲಕ್ಷ ರೂ.ಗಳಿಗೆ ಬೇಡಿಕೆ ಬರುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ.
    ಗುರುವಾರ ಮಹಾನಗರ ಪಾಲಿಕೆಯಲ್ಲಿ 2022-23ನೇ ಸಾಲಿಗೆ ಸಂತೆ ಬಜಾರ್, ಸಂಡೆ ಬಜಾರ್, ನೆಹರು ಮಾರುಕಟ್ಟೆ ಒಳಬದಿಯಲ್ಲಿರುವ ಕಟ್ಟೆಗಳು ಹಾಗೂ ಕೋಳಿ ಬಜಾರ್ ಬಹಿರಂಗ ಲಿಲಾವು ಪ್ರಕ್ರಿಯೆ ನಡೆಯಿತು.
    ಈ ವೇಳೆ ಸಂತೆ ಬಜಾರ್ ಹಾಗೂ ಸಂಡೆ ಬಜಾರ್ ಲಿಲಾವು ಮೊತ್ತ 99.25 ಲಕ್ಷ ರೂ.ಗಳಿಗೆ ಬಂದು ನಿಂತಿತು. ಈ ಮೊತ್ತದೊಂದಿಗೆ ಜಿಎಸ್‌ಟಿ ಶೇ. 18 ಸೇರಿ ಒಟ್ಟು 1,17,11,500 ರೂ.ಗಳಾಗುತ್ತದೆ. ಇದು ಹಿಂದಿನ ದರಕ್ಕಿಂತ ಐದು ಪಟ್ಟು ಹೆಚ್ಚಾಗಿದ್ದು, ಪಾಲಿಕೆ ಇತಿಹಾಸದಲ್ಲೇ ಇದು ಮೊದಲು ಎನ್ನುತ್ತಾರೆ ಅಧಿಕಾರಿಗಳು.
    ಈ ಹಿಂದೆ 2018-19ರಲ್ಲಿ ಲಿಲಾವು ಪ್ರಕ್ರಿಯೆ ನಡೆದಿತ್ತು. ಪ್ರತಿ ವರ್ಷ ಶೇ.5ರಂತೆ ಮೊತ್ತ ಹೆಚ್ಚಿಸಿ ಮುಂದುವರಿಸಲಾಗಿತ್ತು. ಇದೀಗ ನಡೆದ ಹರಾಜು ಆರ್.ಎಚ್. ಜಾನವೇಕರ ಪಡೆದಿದ್ದಾರೆ.
    ಇನ್ನು ನೆಹರು ಮಾರುಕಟ್ಟೆ ಒಳಬದಿಯಲ್ಲಿರುವ ಕಟ್ಟೆಗಳ ಲಿಲಾವು 2017-18ರಲ್ಲಿ ನೆರವೇರಿಸಲಾಗಿತ್ತು. ಇದೀಗ ಅದು ಸಹ 1.41 ಲಕ್ಷ ರೂ.ಗಳಿಗೆ ಬೇಡಿಕೆ ಬಂದಿದೆ. ಈ ಹಿಂದಿನ ಮೊತ್ತಕ್ಕೆ ಹೋಲಿಸಿದರೆ ಇದು 2 ಪಟ್ಟು ಹೆಚ್ಚಾಗಿದೆ. ಶೇ.18ರಷ್ಟು ಜಿಎಸ್‌ಟಿ ಸೇರಿ ಒಟ್ಟು 1,66,380 ರೂ.ಮೊತ್ತವಾಗಲಿದೆ. ಅಲ್ತಾಫ್ ಅಬ್ದುಲ್‌ರಶೀದ್ ಬಾಗವಾನ ಈ ಹರಾಜು ಪಡೆದಿದ್ದಾರೆ.
    ಕೋಳಿ ಬಜಾರ್ ವ್ಯಾಪಾರ ಸ್ಥಳದ ಬಹಿರಂಗ ಹರಾಜು 1.20 ಲಕ್ಷ ರೂ.ಗಳಿಗೆ ಅಂತಿಮಗೊಂಡಿದೆ. ಜಿಎಸ್‌ಟಿ ಸೇರಿ ಇದರ ಮೊತ್ತ 1,41,600 ರೂ.ಗಳಿಗೆ ನಿಗದಿಯಾಗಿದೆ. ಹಸನ ಬಾಲವನಕರ ಈ ಹರಾಜು ಪಡೆದಿದ್ದಾರೆ.
    ಪ್ರಕ್ರಿಯೆಲ್ಲಿ ಆಯುಕ್ತ ವಿಜಯ ಮೆಕ್ಕಳಕಿ, ವಲಯ ಆಯುಕ್ತ ಸಿದ್ದಣ್ಣ ಮಹಾಜನ, ಉಪ ಆಯುಕ್ತ ಮಹಾವೀರ ಬೋರಣ್ಣವರ, ಆರ್.ಬಿ. ಶಿರಶ್ಯಾಡ, ಕಂದಾಯ ಅಧಿಕಾರಿಗಳಾದ ಕೆ.ಎ. ಲೈನ್, ಶಿವಾನಂದ ಪೂಜಾರ, ಆರ್.ಎ. ಮುಜಾವರ, ಎಲ್.ಎಂ. ಕಾಂಬಳೆ, ಎನ್.ಆರ್. ಶಟಗಾರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts