More

    ಹೆಲ್ಮೆಟ್ ಧರಿಸದಂತೆ ವಿನಾಯಿತಿ ನೀಡಲು ಮನವಿ

    ವಿಜಯಪುರ: ವಿಜಯಪುರ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿರುವ ಕಾರಣ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸದಂತೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಅಪರ ಡಿಸಿ ಮಹಾದೇವ ಮುರುಗಿ ಅವರಿಗೆ ನಗರದ ಎಪಿಎಂಸಿ ನೀಲಕಂಠೇಶ್ವರ ಯಾರ್ಡ್ ಮರ್ಜೆಂಟ್ಸ್ ಅಸೋಸಿಯೇಶನ್ ಸೋಮವಾರ ಮನವಿ ಸಲ್ಲಿಸಿದೆ.

    ಮರ್ಜೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ಹೆಚ್ಚು ಬಿಸಿಲು ಇರುವ ಕಾರಣ ಹೆಲ್ಮೆಟ್ ಧರಿಸಿದರೆ ಅನೇಕ ಚರ್ಮರೋಗಗಳು ಅಂಟಿಕೊಳ್ಳುತ್ತವೆ. ಇವು ದೇಹದ ಮೇಲೆ ಪರಿಣಾಮ ಬೀರಬಲ್ಲವು.ಇದರ ಜತೆ ಕೂದಲು ಉದುರುವುದು, ತಲೆಯಲ್ಲಿ ಬೊಕ್ಕೆಗಳು ಬರುತ್ತವೆ ಎಂದು ತಿಳಿಸಿದರು.

    ಮೊದಲೇ ಸಂಚಾರ ದಟ್ಟಣೆ ಇರುವ ಕಾರಣ ದ್ವಿಚಕ್ರ ವಾಹನ ಅತಿ ವೇಗವಾಗಿ ಓಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪಘಾತಗಳು ಹೆಚ್ಚು ಆಗುವುದಿಲ್ಲ ಎನ್ನುವ ಕಾರಣ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಬಾರದು ಎಂದು ಮನವಿ ಮಾಡಿದರು.

    ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳಾದ ನಿಲೇಶ ಶಹಾ, ಜಯಾನಂದ ತಾಳಿಕೋಟಿ, ರಮೇಶ ನಿಡೋಣಿ, ಪ್ರವೀಣ ವಾರದ, ಮನೋಜ ಬಗಲಿ, ಸಿದ್ಧಪ್ಪ ಸಜ್ಜನ ಹಾಗೂ ವಿವಿಧ ವ್ಯಾಪಾರ ಸಂಘಟನೆಗಳ ಪದಾಧಿಕಾರಿಗಳಾದ ಸಂಗಪ್ಪ ಹೇರಲಗಿ, ಗೋಕುಲ ಮಹೀಂದ್ರಕರ, ಬಾಪೂಜಿ ನಿಕ್ಕಂ, ಲಾಲುಸೇಠ, ಕುಮಾರ ಹಕ್ಕಾಪಕ್ಕಿ, ರವೀಂದ್ರ ಕುಲಕರ್ಣಿ ಮತ್ತು ಅಕ್ರಂ ಮಾಶ್ಯಾಳಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts