More

    ಸಂಘಟನೆಗೆ ಹೊಸ ಅರ್ಥ ಬರೆದ ಒಕ್ಕಲಿಗರು

    ಹೊನ್ನಾವರ: ಹೊನ್ನಾವರ ತಾಲೂಕಿನ ಜನರು ಒಗ್ಗಟ್ಟಾಗಿದ್ದು, ಸಂಘಟನೆಗೆ ಹೊಸ ಅರ್ಥ ಬರೆದಿದ್ದಾರೆ. ಸುಂದರವಾದ ಭವನ ಕೇವಲ ಒಕ್ಕಲಿಗರ ಸಮುದಾಯಕ್ಕಲ್ಲ ಒಕ್ಕಲಿಗರ ಮೂಲಕ ಎಲ್ಲ ಸಮಾಜಕ್ಕೂ ಸಲ್ಲುವುದು ಎಂದು ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

    ತಾಲೂಕಿನ ಕೆಳಗಿನೂರಿನಲ್ಲಿ ನಿರ್ವಣಗೊಂಡ ಒಕ್ಕಲಿಗರ ಸಮುದಾಯ ಭವನವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

    ನಮ್ಮ ಜನರು ಆಸ್ತಿಯಲ್ಲಿ, ಸಂಪತ್ತಿನಲ್ಲಿ ಬಡವರರಿರಬಹುದು. ಆದರೆ, ಇರುವ ಸಂಖ್ಯೆಯ ಇತಿ, ಮಿತಿಯೊಳಗೆ ಶಿಸ್ತು, ಸಂಯಮ, ಭಕ್ತಿಯಲ್ಲಿ ಮುಂದಿದ್ದಾರೆ. ಈ ಭಾಗದಲ್ಲಿ ಸಂಘಟನೆ ಉತ್ತಮವಾಗಿ ನಡೆದಿದೆ. ಸಂಘಟನೆಯ ಜೊತೆಗೆ ಸಂಸ್ಕೃತಿ, ಸಂಸ್ಕಾರ, ವಿದ್ಯೆ ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದರು.

    ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಮಾತನಾಡಿ, ಅಸಂಘಟಿತರಾದ ಒಕ್ಕಲಿಗ ಸಮುದಾಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೂಜ್ಯಗುರುಗಳು ಒಟ್ಟಿಗೆ ತಂದು ಸ್ವಾಭಿಮಾನದ ಶಕ್ತಿ ಮತ್ತು ಪೋ›ತ್ಸಾಹವನ್ನು ನೀಡಿದ್ದಾರೆ. ಅದರ ಪ್ರತೀಕವಾಗಿ ಭವ್ಯವಾದ ಸಮುದಾಯ ಭವನ ನಿರ್ವಣಗೊಂಡಿದೆ. ಸಮಾಜದ ಯುವಕರು ಉತ್ತಮ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.

    ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾದ ತುಳಸಿ ಗೌಡ, ಮಾಜಿ ಶಾಸಕ ಮಂಕಾಳ ವೈದ್ಯ, ಸ್ಥಳದಾನಿ ಮಾದೇವಿ ವಿಷ್ಣು ಗೌಡ ಅವರನ್ನು ಸನ್ಮಾನಿಸಲಾಯಿತು. ಸಮುದಾಯ ಭವನಕ್ಕೆ 1 ಲಕ್ಷ ರೂ.ಗಳಿಗಿಂತ ಹೆಚ್ಚು ಧನಸಹಾಯ ಮಾಡಿದವರನ್ನು ಗೌರವಿಸಲಾಯಿತು.

    ಶಾಸಕರಾದ ಸುನೀಲ ನಾಯ್ಕ, ಆರಗ ಜ್ಞಾನೇಂದ್ರ, ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಜೆ. ಗೌಡ, ತಾಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಜಿ.ಪಂ. ಸದಸ್ಯೆ ಸವಿತಾ ಗೌಡ, ಮಾಜಿ ಸದಸ್ಯ ಕೃಷ್ಣ ಗೌಡ, ಕೆ.ಟಿ. ಗೌಡ, ಗ್ರಾಪಂ ಸದಸ್ಯೆ ದೇವಿ ಗೌಡ, ನಿವೃತ್ತ ತಹಸೀಲ್ದಾರ್ ವಿ.ಆರ್. ಗೌಡ, ಹೆಸ್ಕಾಂ ಎಇಇ ಶಂಕರ ಗೌಡ ಹಾಗೂ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಕ್ಷ್ಮೀಕಾಂತ ಗೌಡ ಸ್ವಾಗತಿಸಿದರು. ಬಾಲಚಂದ್ರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಒಕ್ಕಲಿಗರಲ್ಲಿ 124 ಉಪವಿಭಾಗಗಳಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಈ ಸಮುದಾಯ ಹರಡಿಕೊಂಡಿದೆ. ಈ ಭಾಗದಲ್ಲಿ ಒಕ್ಕಲಿಗರು ಹೆಚ್ಚು ಸಂಘಟಿತರಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ಸಮುದಾಯ ಭವನ ಕಟ್ಟಡ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿಯೂ ಎಲ್ಲರ ಸಹಕಾರದಲ್ಲಿ ಭವ್ಯವಾದ ಕಟ್ಟಡ ಲೋಕಾರ್ಪಣೆಗೊಂಡಿದೆ. | ಶ್ರೀ ಪ್ರಸನ್ನನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠಾಧೀಶರು

    ವಸುಧೈವ ಕುಟುಂಬಕಂ ಎಂಬಂತೆ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಬಾಳಬೇಕು. ಆದಿಚುಂಚನಗಿರಿ ಮಠದಿಂದ ಎಲ್ಲ ಜಾತಿ ಧರ್ಮವನ್ನು ಒಟ್ಟಿಗೆ ಕರೆದೊಯ್ಯುವ ಕಾರ್ಯ ನಡೆಯುತ್ತಿದೆ. ಧರ್ಮವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಹೊನ್ನಾವರ ತಾಲೂಕಿನ ಒಕ್ಕಲಿಗ ಸಮುದಾಯದವರು ಮಾಡಿಕೊಂಡು ಬಂದಿದ್ದಾರೆ. ಸಂಘಟನೆ ಉತ್ತಮವಾಗಿ ಕಾರ್ಯ ನಿರ್ವಹಿಸಿದಾಗ ಇಂತಹ ಸಮುದಾಯಭವನ ನಿರ್ಮಾಣ ಸಾಧ್ಯವಾಗುವುದು. | ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಶ್ರೀರಾಮ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts