More

    ಸಂಗೊಳ್ಳಿ ರಾಯಣ್ಣ ಮಹಾನ್ ಸೇನಾನಿ

    ಕಿಕ್ಕೇರಿ: ರಾಯಣ್ಣ ಸ್ವಾತಂತ್ರ್ಯ ಹೋರಾಟಕ್ಕೆ ಮೊದಲ ಕಿಚ್ಚು ಹಚ್ಚಿದ ಮಹಾನ್ ಸೇನಾನಿ ಎಂದು ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.


    ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಬಳಗದಿಂದ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಇತ್ತೀಚೆಗೆ ಅನಾವರಣಗೊಳಿಸಿ ಮಾತನಾಡಿದರು.


    ಹಳ್ಳಿಯ ಯುವಕರು ಮಾಡುತ್ತಿರುವ ಸೇವೆ ಮಾದರಿಯಾಗಿದೆ. ರಾಯಣ್ಣನ ದೇಶಾಭಿಮಾನವನ್ನು ಎಲ್ಲರು ಅಳವಡಿಸಿಕೊಳ್ಳಬೇಕು ಎಂದು ಸಲಹ ನೀಡಿದರು.


    ಸಚಿವ ಭೈರತಿ ಬಸವರಾಜು ಮಾತನಾಡಿ, ಸಮಾಜದ ಹಿತ ಕಾಪಾಡಲು ಮುಂದಾದ ಧೀಮಂತ ನಾಯಕ ರಾಯಣ್ಣ, ಊರಿನ ಯುವಕರಲ್ಲಿ ದೇಶಾಭಿಮಾನವಿದ್ದಲ್ಲಿ ನಾಡು ಶಾಂತಿ, ನೆಮ್ಮದಿಯ ತಾಣವಾಗಲಿದೆ. ಹಳ್ಳಿಗಾಡಿನ ಯುವ ಮನಸ್ಸಿನಲ್ಲಿ ವಿಶ್ವಾಸ, ನಂಬುಗೆ ಮುಖ್ಯವಾಗಿದೆ ಎಂದರು.


    ರಾಯಣ್ಣ ಅವರ ಪ್ರತಿಮೆ ಮಾಡಿಸಿಕೊಟ್ಟ ದಾನಿ ಬೆಂಗಳೂರಿನ ಸಿ.ಎಂ.ಹರೀಶ್ ಅವರನ್ನು ಗೌರವಿಸಲಾಯಿತು. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಂದ್ರ, ಸುರೇಶ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮುಖಂಡರಾದ ವಿಜಯರಾಮೇಗೌಡ, ಮಲ್ಲಿಕಾರ್ಜುನ, ರವೀಂದ್ರಬಾಬು, ವಿನೋದ್, ಸಂತೋಷ್‌ಕುಮಾರ್, ಕೋಡಿಮಾರನಹಳ್ಳಿ ದೇವರಾಜು, ಅರವಿಂದ ಪರಮೇಶ್, ಮಾದಾಪುರ ರಾಮಕೃಷ್ಣೇಗೌಡ, ದಿವಾಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts