More

    ಶ್ರೀ ಸರ್ವೇಶ್ವರನಿಗೆ ಏಳು ದಿನ ನಿರಂತರ ಅಭಿಷೇಕ

    ಹುಮನಾಬಾದ್: ಹಳ್ಳಿಖೇಡ(ಬಿ)ಗ್ರಾಮದ ಶ್ರೀ ಸವರ್ೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದಿಂದ ಮಳೆ-ಬೆಳೆ ಸಮೃದ್ಧಿ ಹಾಗೂ ಕರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ಒಂದು ವಾರ ಸತತ ಧಾರಿ ಸಪ್ತಾಹದ ಸಮಾರೋಪ ಬುಧವಾರ ನೆರವೇರಿತು. ದೇವಾಲಯದಲ್ಲಿ ಶ್ರೀಸವೇಶ್ವರ ಮೂರ್ತಿಗೆ ಅನ್ನ ಪೂಜೆ, ಪುಷ್ಪಾಲಂಕಾರ ಪೂಜೆ ನಡೆಸಲಾಯತು. ಮಧ್ಯಾಹ್ನ ಆರತಿ ನಂತರ ಮಹಾ ಪ್ರಸಾದ ವಿತರಿಸಲಾಯಿತು. ಕರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನೆರವೇರಿಸಲಾಯಿತು.
    ಸಪ್ತಾಹದ ನಿಮಿತ್ತ ಏಳು ದಿನ ನಿತ್ಯ 24 ಗಂಟೆ ಅಭಿಷೇಕ ನಡೆಸಲಾಯಿತು. ಮೂರು ಗಂಟೆಗೆ ಇಬ್ಬರಂತೆ ಅಭೀಷೇಕ ನಡೆಸುವ ಜತೆಗೆ ಗ್ರಾಮದಲ್ಲಿ ಜೋಳಿಗೆ ಸಂಚಾರ ನಡೆಯಿತು. ಜೋಳಿಗೆ ಮನೆಗೆ ಬಂದಾಗ ಭಕ್ತರು ಮನೆಗಳಲ್ಲಿ ಪೂಜೆ ಸಲ್ಲಿಸಿ ಭಕ್ತಿ_ ಶ್ರದ್ಧೆಯಿಂದ ಜೋಳಿಗೆ ತುಂಬಿದರು.
    ಪ್ರಮುಖರಾದ ಜಿಪಂ ಮಾಜಿ ಸದಸ್ಯ ಕೇಶವರಾವ ಮಹಾರಾಜ ತಳಘಟಕರ, ಶ್ರೀ ಗುಂಡು ಮಹಾರಾಜ, ಶ್ರೀ ಶ್ರೀಪಾದ ದಿಕ್ಷಿತ, ಗುರುನಾಥ ದಿಕ್ಷಿತ, ನರಸಿಂಹ ದಿಕ್ಷಿತ, ಬಂಡು ಮಹಾರಾಜ ಸೇರಿ ಸಮಾಜದ ಪ್ರಮುಖರ ನೇತೃತ್ವದಲ್ಲಿ ಸಪ್ತಾಹ ಸಮಾರೋಪ ಸುಸೂತ್ರವಾಗಿ ನೆರವೇರಿತು. ಕರೊನಾ ಮುಕ್ತ ಭಾರತಕ್ಕಾಗಿ ಪ್ರಾಥರ್ಿಸಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಗಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಸಪ್ತಾಹ ನಡೆಸಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ಕೇಶವರಾವ ಮಹಾರಾಜ ತಳಘಟಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts