More

    ಶ್ರೀ ಗುರು ಮಡಿವಾಳೇಶ್ವರ ರಥೋತ್ಸವ ಸಂಭ್ರಮ

    ಬೈಲಹೊಂಗಲ: ನಾಡಿನ ಅಪಾರ ಭಕ್ತರ ಆರಾದ್ಯ ದೈವ ಪಟ್ಟಣದ ಶ್ರೀ ಗುರು ಮಡಿವಾಳೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ, ಶಿವಶರಣೆ ತಂಗೆಮ್ಮ ತಾಯಿ ಅವರ ಭಾವಚಿತ್ರದ ಅಂಬಾರಿ ಮೆರವಣಿಗೆ, ಭಕ್ತರ ಹರ್ಷೋದ್ಘಾರ ನಡುವೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

    ಪಟ್ಟಣದ ಕಲಗುಡಿ ದೇವಸ್ಥಾನಕ್ಕೆ ಪಲ್ಲಕ್ಕಿಯೊಂದಿಗೆ ತೆರಳಿ ಪೂಜೆಗೈದ ನಂತರ ರಥೋತ್ಸವಕ್ಕೆ ಮಡಿವಾಳೇಶ್ವರ ಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ, ಯಕ್ಕುಂಡಿ ಕುಮಾರೇಶ್ವರಮಠದ ಪಂಚಾಕ್ಷರ ಸ್ವಾಮೀಜಿ, ಪ್ರವಚನಕಾರ ಸಿದ್ದರಾಮ ಶಾಸ್ತ್ರಿ, ವೇ.ಮೂ. ಗದಗಯ್ಯ ರುದ್ರಾಕ್ಷಿಮಠ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

    ರಥವನ್ನು ವಿವಿಧ ಹೂಮಾಲೆ, ರುದ್ರಾಕ್ಷಿ ಸರ, ಮಡಿವಾಳೇಶ್ವರ ಭಾವಚಿತ್ರ, ತೆಂಗು, ಬಾಳೆ, ಕೆಂಪು, ಬಿಳಿ ಧ್ವಜಗಳಿಂದ ಶೃಂಗರಿಸಲಾಗಿತ್ತು. ಬಂಗಾರ ಬಣ್ಣದ ಬಟ್ಟೆ ಹೊದಿಕೆಯ ಕಳಸದ ಮೇಲೆ ನವಿಲು, ಭಗವಾಧ್ವಜ ರಾರಾಜಿಸಿದವು. ರಥದಲ್ಲಿ ಮಡಿವಾಳೇಶ್ವರ, ಬಸವಣ್ಣನ ಬೆಳ್ಳಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.

    ಜವಳಿಕೂಟದಿಂದ ಆರಂಭವಾದ ರಥೋತ್ಸವ ಬಜಾರ ರಸ್ತೆ, ಮೇದಾರ ಗಲ್ಲಿ ಮಾರ್ಗವಾಗಿ ಅತಿ ಎತ್ತರದ ಪ್ರದೇಶದಲ್ಲಿ ಸಾಗಿ ಶ್ರೀಮಠಕ್ಕೆ ಬಂದು ತಲುಪಿತು. ರಸ್ತೆಯುದ್ದಕ್ಕೂ ಭಕ್ತರು ಗುರು ಮಡಿವಾಳೇಶ್ವರ, ತಂಗೆಮ್ಮ ತಾಯಿ ಅವರಿಗೆ ಜೈಘೋಷ ಕೂಗಿದರು. ಹರಹರ ಮಹಾದೇವ, ಗುರು ಮಡಿವಾಳೇಶ್ವರ ಮಹಾರಾಜಕೀ ಜೈ ಎನ್ನುತ್ತ ರಥ ಎಳೆದು ಧನ್ಯರಾದರು. ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಯಿತು. ಪುಷ್ಪ ಮಾಲೆಗಳಿಂದ ಕಂಗೊಳಿಸಿದ ರಥಕ್ಕೆ ಹೂವು, ಹಣ್ಣು, ಖಾರೀಕ್ ಸಮರ್ಪಿಸಿ ಶ್ರದ್ಧೆ, ಭಕ್ತಿಯಿಂದ ಕೈ ಮುಗಿದರು. ಮಡಿವಾಳೇಶ್ವರ ಪಲ್ಲಕ್ಕಿಯೊಂದಿಗೆ ಸುಮಂಗಲೆಯರು ಆರತಿ ಹಿಡಿದು ಸಾಗಿದರು. ಜಾಂಜ್ ಪಥಕ್ ತಂಡ, ಡೊಳ್ಳು ಸೇರಿ ವಿವಿಧ ವಾದ್ಯಗಳ ನಾದ ಮುಗಿಲು ಮುಟ್ಟುವಂತಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ಮಠಕ್ಕೆ ತೆರಳಿ ಶ್ರೀ ಗುರು ಮಡಿವಾಳೇಶ್ವರ ಗದ್ದುಗೆಗೆ ಹಣ್ಣು, ಕಾಯಿ, ಹೂವು ಮಾಲೆ, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ, ಪ್ರಸಾದ ಸವಿದು ಪುನೀತರಾದರು. ಪುಷ್ಪ ಮಾಲೆಗಳಿಂದ ಕಂಗೊಳಿಸಿದ ಮಡಿವಾಳೇಶ್ವರ ಗದ್ದುಗೆಗೆ ಭಕ್ತಿಯಿಂದ ನಮಸ್ಕರಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
    ಸಣ್ಣಬಸಪ್ಪ ಕುಡಸೋಮನ್ನವರ, ತಮ್ಮನ್ನ ಬಡಿಗೇರ, ಬಿ.ವೈ.ತಳವಾರ, ಪುಂಡಲೀಕ ಕಡಕೋಳ, ಶಿವಲಿಂಗಯ್ಯ ಏಣಗಿಮಠ, ಗಿರೀಶ ಪಾಟೀಲ, ಮಹಾಂತೇಶ ಅಕ್ಕಿ, ಬಸವರಾಜ ಕಲಾದಗಿ, ಜಗದೀಶ ಕೋತಂಬ್ರಿ, ಮಹಾದೇವಪ್ಪ ಯಡಳ್ಳಿ, ಈರಪ್ಪ ಹಣಸಿ, ಫಕೀರಪ್ಪ ಮಡ್ಡೆನ್ನವರ, ಶಿವಾನಂದ ಹತ್ತರಕಿ, ಅಜ್ಜಪ್ಪ ಬೆಳಗಾವಿ, ಮಲ್ಲಿಕಾರ್ಜುನ ಕಡಕೋಳ, ರವಿ ಲಕ್ಕನ್ನವರ, ಚಂದ್ರು ಹೊಸೂರ, ಅಜ್ಜಪ್ಪ ಹೊಸೂರ, ಶಿವಲಿಂಗಪ್ಪ ಕೋತಂಬ್ರಿ, ರುದ್ರಪ್ಪ ಯಡಳ್ಳಿ, ಮಡಿವಾಳಿ ಹೊಸಮನಿ, ಶಿವಾನಂದ ಅಗಸಗಿ, ಮಾರುತಿ ಕಲಾದಗಿ, ವಿಜಯ ಬೆಳವಡಿ, ಬಸವರಾಜ ಈಟಿ, ಮಹಾಂತೇಶ ಹಣಸಿ, ಮಹಾಬಳೇಶ್ವರ ಕಡಕೋಳ, ಮುರುಗೇಶ ವಿಭೂತಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts