More

    ಶೋಷಿತರ ಧ್ವನಿ ದೇವರಾಜ ಅರಸು

    ಚಿತ್ರದುರ್ಗ: ಶೋಷಿತ ಸಮುದಾಯದವರ ಧ್ವನಿಯಾಗಿದ್ದ ಅರಸು ಅವರ ಸಮಾಜಮುಖಿತನ ನಮ್ಮೆಲ್ಲರಿಗೂ ಸ್ಫೂರ್ತಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಬಣ್ಣಿಸಿದರು.
    ನಗರದ ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,
    ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅಧಿಕಾರಕ್ಕೆ ಬರುವ ಮೊದಲು ಸಣ್ಣ ಸಮುದಾಯಗಳು ಅಧಿಕಾರ ರಾಜಕಾರಣದಿಂದ ವಂಚಿತವಾಗಿದ್ದವು. ಶೋಷಿತರು,ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಹಾಗೂ ಚಿಕ್ಕ ಸಮುದಾಯಗಳಿಗೂ ರಾಜಕಾರಣದಲ್ಲಿ ಅವಕಾಶವಿದೆ ಎಂದು ತೋರಿಸಿದ ಕೀರ್ತಿ ಕೀರ್ತಿ ಅರಸು ಅವರಿಗೆ ಸಲ್ಲಲಿದೆ ಎಂದರು.
    ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಅರಸು,ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ಸಿನ ಎರಡು ಕಣ್ಣುಗಳಿದ್ದಂತೆ ಎಂದರು. ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, ಎರಡು ಬಾರಿ ಸಿಎಂ ಆಗಿದ್ದ ಅರಸು ಅವರು ಸರಳತೆಗೆ ನಿದರ್ಶನವಾಗಿದ್ದವರು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿಶೇಷ ಕಾಳಜಿ ಹೊಂದಿದ್ದರು ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ,ಅರಸು ಅವರು ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಪರಿ ಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರಿಂದಾಗಿ ಭೂರಹಿತರು ಭೂಮಿಯನ್ನು ಹೊಂದಲು ಸಾಧ್ಯವಾಯಿತು ಎಂದರು. ಜಿಪಂ ಮಾಜಿ ಸದಸ್ಯಬಿ.ಪಿ.ಪ್ರಕಾಶ್‌ಮೂರ್ತಿ,ನಗರಸಭಾ ಮಾಜಿ ಅಧ್ಯಕ್ಷ ಮಂಜಪ್ಪ,ಟಿ.ಸ್ವಾಮಿ,ಪೈಲ್ವಾನ್ ತಿಪ್ಪೇಸ್ವಾಮಿ,ಜಯಣ್ಣ,ಪ್ರಕಾಶ್,ಮುದಸಿರ್ ನ ವಾಜ್,ಸೈಯದ್‌ಖುದ್ದೂಸ್,ರವಿಕುಮಾರ್,ಸುದರ್ಶನ್,ಪಾರ್ಥರಾಜೇಂದ್ರ ಒಡೆಯರ್,ಅಶೋಕ್ ನಾಯ್ಡು, ಎಚ್.ಶಬ್ಬೀರ್ ಬಾಷ,ಅಬ್ದುಲ್ಲಾ,ಗಂಜಿಕಟ್ಟೆ ಶಿವಣ್ಣ,ಕರಿಯಪ್ಪ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts