More

    ಶಿಸ್ತು, ಸಂಯಮವಿದ್ದರೆ ಸಾಧನೆ ಸಾಧ್ಯ

    ಬೆಳಗಾವಿ: ಶಿಸ್ತು ಹಾಗೂ ಸಂಯಮ ಇದ್ದರೆ ಜೀವನದಲ್ಲಿ ಏನೆಲ್ಲವನ್ನೂ ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಸಮಯ ಉಪಯೋಗಪಡಿಸಿಕೊಂಡು ಗುರಿಯೆಡೆಗೆ ಹೆಜ್ಜೆ ಇಡಬೇಕು ಎಂದು ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಅಧಿಕಾರಿ ಕರ್ನಲ್ ದರ್ಶನ್ ಎಸ್. ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸೈನಿಕ ಶಿಬಿರದಲ್ಲಿ ರಾಷ್ಟ್ರೀಯ ಸಾಧನೆ ಮಾಡಿದ ಎನ್‌ಸಿಸಿ ಕೆಡೆಟ್‌ಗಳನ್ನು ಗೌರವಿಸಿ ಮಾತನಾಡಿದ ಅವರು, ಭವಿಷ್ಯವನ್ನು ರೂಪಿಸುವಲ್ಲಿ ಎನ್‌ಸಿಸಿ ಘಟಕವು ಮಹತ್ವಪೂರ್ಣವಾದ ಪಾತ್ರವಹಿಸುತ್ತದೆ. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಾವು ಪಾಲ್ಗೊಳ್ಳುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಅವಕಾಶಗಳು ಬಂದಾಗ ಅವುಗಳನ್ನು ಮುಕ್ತ ಮನಸ್ಸಿನಿಂದ ಬಾಚಿಕೊಂಡು ಯಶಸ್ಸಿನೆಡೆಗೆ ಸಾಗಬೇಕು. ಒಂದು ಸಂದರ್ಭದಲ್ಲಿ ಕಲಿಯಲು ಸೌಲಭ್ಯಗಳ ಕೊರೆತೆ ಇತ್ತು. ಇಂದು ಎಲ್ಲ ಸೌಲಭ್ಯಗಳು ಹೇರಳವಾಗಿ ದೊರೆಯುತ್ತಿವೆ. ಆ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧಿಸಬೇಕು. ಎನ್‌ಸಿಸಿ ಘಟಕವು ಶಾರೀರಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ. ರಾಷ್ಟ್ರನಿರ್ಮಾಣದಲ್ಲಿ ಶ್ರೇಷ್ಠವಾದ ಕೊಡುಗೆಯನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದರು.

    ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಮಾತನಾಡಿದರು. ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ, ಪದವಿಪೂರ್ವ ಪ್ರಾಚಾರ್ಯ ಪ್ರೊ.ಗಿರಿಜಾ ಹಿರೇಮಠ, ಧರ್ಮರಾಜ ಶಿಂಧೆ, ಚಂದ್ರಶೇಖರಯ್ಯ ಸವದಿ, ಲಕ್ಷ್ಮಣ ರಾಜೋಳಿ, ಪ್ರೊ.ಚಂದ್ರಶೇಖರ, ಪ್ರೊ.ನಟರಾಜ ಪಾಟೀಲ, ಡಾ.ಶಿವಾನಂದ ಬುಲಬುಲೆ, ಕೆಡೆಟ್ ಮಣಿಕಂಠ ಪಾಟೀಲ, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts