More

    ಶಿಸ್ತಿನಿಂದ ಪಡಿತರ ಪಡೆದ ಚೀಟಿದಾರರು

    ಸಿದ್ದಾಪುರ: ಕರೊನಾ ವೈರಸ್ ಮಹಾಮಾರಿ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದೆ. ಪಡಿತರ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮೂಲಕ ಜನತೆ ಪಡಿತರ ಪಡೆಯುವುದಕ್ಕೆ ಮುಂದಾಗಿ ಮಾದರಿಯಾಗಿದ್ದಾರೆ.

    ದೇಶಾದ್ಯಂತ ಕರೊನಾ ವೈರಸ್ ಹರಡುತ್ತಿರುವುದರಿಂದ ಅದನ್ನು ತಡೆಯುವುದಕ್ಕೆ ಲಾಕ್​ಡೌನ್ ಮಾಡಲಾಗಿದೆ. ಜನತೆಗೆ ಅವಶ್ಯ ಇರುವ ಪಡಿತರ ಪಡೆಯುವುದಕ್ಕೆ ಸರ್ಕಾರ ಅವಕಾಶ ನೀಡಿದೆ.

    ಪಡಿತರ ಅಂಗಡಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹ ರಾಜ್ಯ ಸರ್ಕಾರದ ಸೂಚನೆಯಂತೆ ಹ್ಯಾಂಡ್ ಗ್ಲೌಸ್, ಮಾಸ್ಕ ಧರಿಸಿಕೊಂಡು ಪಡಿತರ ವಿತರಣೆ ಮಾಡುತ್ತಿದ್ದಾರೆ. ಅಲ್ಲದೆ, ಜನತೆ ಪಡಿತರ ಅಂಗಡಿಯ ಮುಂದೆ ಹಾಕಿರುವ ಸಾಮಾಜಿಕ ಅಂತರದಲ್ಲಿ ಮಾಸ್ಕ್ ಹಾಕಿಕೊಂಡು ನಿಂತು ಸರದಿಯಂತೆ ಪಡಿತರ ಪಡೆಯುತ್ತಿರುವುದು ಕಂಡುಬರುತ್ತಿದೆ.

    ತಾಲೂಕಿನ ಎಲ್ಲ ಪಡಿತರ ಅಂಗಡಿಯ ಮುಂದೆ ಕರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಪಡಿತರ ಪಡೆಯುವವರು ಅಂತರ ಕಾಯ್ದುಕೊಳ್ಳುವಂತೆ ವಿಶೇಷ ಸೂಚನೆಯ ನೋಟಿಸ್ ಅಂಟಿಸಲಾಗಿದೆ. ಇದಕ್ಕೆ ಸ್ಪಂದಿಸಿ ಜನತೆ ಪಡಿತರ ಪಡೆಯುತ್ತಿರುವುದು ಶ್ಲಾಘನೀಯವಾಗಿದೆ ಎನ್ನುತ್ತಾರೆ ಹಾರ್ಸಿಕಟ್ಟಾದ ಸೇವಾ ಸಹಕಾರಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ಗುಲ್ಜಾರ್.

    ಕರೊನಾ ವೈರಸ್ ಕುರಿತು ಜನರಲ್ಲಿ ಆತಂಕ ಹೆಚ್ಚಾಗಿರುವುದರಿಂದ ಸ್ವಯಂಪ್ರೇರಣೆಯಿಂದಲೇ ಪಡಿತರ ಚೀಟಿದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ.
    | ಮೋಹನ ನಾಯ್ಕ ಬೇಡ್ಕಣಿ ಪಡಿತರ ಚೀಟಿದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts