More

    ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ

    ರಟ್ಟಿಹಳ್ಳಿ: ಪಟ್ಟಣ ಪಂಚಾಯಿತಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವವನ್ನು ಪರಸ್ಪರ ಅಂತರ ಕಾಪಾಡುವುದರೊಂದಿಗೆ ಸರಳವಾಗಿ ಆಚರಿಸಲಾಯಿತು.

    ಪಟ್ಟಣ ಪಂಚಾಯಿತಿಯಲ್ಲಿ: ಪಟ್ಟಣ ಪಂಚಾಯಿತಿ ಕೇಂದ್ರದ ಆವರಣದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    ಅಧ್ಯಕ್ಷೆ ರೇಣುಕಾ ಕಮತಹಳ್ಳಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ 12ನೇ ಶತಮಾನದ ಶಿವಶರಣರ ವಚನಗಳನ್ನು ಮೈಗೂಡಿಸಿಕೊಂಡು 15ನೇ ಶತಮಾನದಲ್ಲಿ ದಾಸೋಹ ಪದ್ಧತಿಯನ್ನು ಮುಂದುವರಿಸಿದರು. ಸಾಮಾಜಿಕವಾಗಿ, ಅಧ್ಯಾತ್ಮಿಕವಾಗಿ, ಧಾರ್ವಿುಕವಾಗಿ ಜನರಿಗೆ ಜಾಗೃತಿ ಮೂಡಿಸಿ ಅನೇಕ ಸಂದೇಶವನ್ನು ನೀಡಿದರು. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ವಣಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.

    ಗ್ರಾ.ಪಂ. ಸಿಬ್ಬಂದಿ ರಾಜುಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ವೀರೇಶ ದ್ಯಾವಕ್ಕಳವರ, ಬಸವರಾಜ ಕವಲೆತ್ತು, ಮಂಜು ಸುಣಗಾರ, ಚೌಡಪ್ಪ ಹರಿಜನ, ಹನುಮವ್ವ ಹರಿಜನ, ಪೊಲೀಸ್ ಸಿಬ್ಬಂದಿ ಪರಶುರಾಮ, ಇತರರು ಇದ್ದರು.

    ತಹಸೀಲ್ದಾರ್ ಕಚೇರಿಯಲ್ಲಿ: ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಆಚರಿಸಲಾಯಿತು.

    ತಹಸೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಮನುಕುಲಕ್ಕೆ ಒಳಿತು ಬಯಿಸಿದವರು. ಅವರ ಆದರ್ಶಗಳು ಎಲ್ಲ ಸಮಾಜದವರಿಗೂ ದಾರಿದೀಪವಾಗಬೇಕು ಎಂದು ಹೇಳಿದರು.

    ತಾಪಂ ಸದಸ್ಯ ಎಚ್.ಡಿ. ಮುದರೆಡ್ಡೇರ, ಯಲ್ಲಪ್ಪ ಮರಿಬಸಪ್ಪನವರ, ಮಹೇಶಪ್ಪ ಕೆಂಚರೆಡ್ಡಿ, ಕರಬಸಪ್ಪ ಹೊಂಕಣದ, ಶಿವರೆಡ್ಡಿ ನೆಗಳೂರ, ಹಾಲಪ್ಪ ರುದ್ರಪ್ಪನವರ, ಶರಣಪ್ಪ ಹೊಂಕಣದ, ನಾಗೇಶರೆಡ್ಡಿ ಹಿರೇತಮ್ಮಣ್ಣನವರ, ಲಿಂಗರೆಡ್ಡಿ ಹೊಂಕಣದ, ಯುವರಾಜ ಮುದರೆಡ್ಡೇರ, ರುದ್ರಪ್ಪ ಅಂಗಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts