More

    ಶಿರಸಿ ಹಳೇ ಬಸ್ ನಿಲ್ದಾಣ ಕೆಲಸ ಶುರು

    ಶಿರಸಿ: ವರ್ಷಗಳ ನಂತರ ನಗರದ ಹಳೆಯ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿದೆ. ಆದರೆ, ಪ್ರಯಾಣಿಕರಿಗೆ ನಿಲ್ಲಲು ಸೂಕ್ತ ಶೆಡ್ ಕಲ್ಪಿಸದೇ ಬಸ್ ನಿಲ್ದಾಣ ಬಂದ್ ಮಾಡಿರುವ ಬಗ್ಗೆ ಸಾರ್ವಜನಿಕರಿಮದ ಆಕ್ರೋಶ ವ್ಯಕ್ತವಾಗಿದೆ.

    ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ವ್ಯಾಪ್ತಿಯ ಶಿರಸಿ ಹಳೆಯ ಬಸ್ ನಿಲ್ದಾಣದ ಅಭಿವೃದ್ಧಿ ಕೆಲಸ ಈಗಷ್ಟೇ ಆರಂಭವಾಗಿದ್ದು, ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ವಣವಾಗಲಿದೆ.

    ಕಳೆದ ಕೆಲ ತಿಂಗಳ ಹಿಂದೆ ಶಿರಸಿ ಹಳೇ ಬಸ್ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿತ್ತು. ಏಪ್ರಿಲ್​ನಲ್ಲೇ ಟೆಂಡರ್ ಪ್ರಕ್ರಿಯೆ ಆಗಿದ್ದರೂ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ್ದರು. ಇದರಿಂದ ಮಳೆಗಾಲದಲ್ಲಿ ಸಾಕಷ್ಟು ಅಡಚಣೆ ಉಂಟಾಗಿತ್ತು. ಅಲ್ಲದೆ, ಕಟ್ಟಡ ಇಲ್ಲದೇ ವರ್ಷಗಳಿಂದ ತಗಡಿನ ಶೆಡ್​ನಲ್ಲಿ ನಿಂತು ಪ್ರಯಾಣಿಕರು ಬಸ್​ಗಳಿಗೆ ಕಾಯುವ ಪರಿಸ್ಥಿತಿ ಎದುರಾಗಿತ್ತು. ಇದೀಗ ಕಾಮಗಾರಿ ಆರಂಭವಾಗಿದ್ದು, ಹಳೆಯ ಬಸ್ ನಿಲ್ದಾಣ ಸಂಪೂರ್ಣ ಬಂದ್ ಮಾಡಿ ಅಲ್ಲಿನ ಬಸ್ ಸಂಚಾರವನ್ನು ಹೊಸ ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ. ಆದರೆ, ಹಳೆಯ ಬಸ್ ನಿಲ್ದಾಣದ ಸಮೀಪದಲ್ಲಿ ಪಿಕ್ ಅಪ್ ಪಾಯಿಂಟ್ ಮಾಡಲಾಗಿದ್ದು, ಅದು ರಾಡಿ ತುಂಬಿದ ಗದ್ದೆಯಂತಾಗಿದೆ. ದೊಡ್ಡ ಹೊಂಡಗಳಿಂದ ತುಂಬಿದ ರಸ್ತೆ ಪಕ್ಕದಲ್ಲಿ ಬಸ್​ಗಳು ನಿಲ್ಲುತ್ತಿದ್ದು, ಮಳೆಯಿಂದ ಮಣ್ಣು ಗದ್ದೆಯಾಗಿದೆ. ಆದರೂ ಇಲಾಖೆಯಿಂದ ಅದೇ ದುಸ್ಥಿತಿಯಲ್ಲಿ ಬಸ್​ಗಳು ಸಂಚರಿಸುತ್ತಿದ್ದು, ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ನೂರಾರು ಪ್ರಯಾಣಿಕರು ಮಳೆಯಲ್ಲೇ ನಿಂತು, ರಾಡಿ ಗುಂಡಿಯಲ್ಲೇ ಓಡಾಡಿ ಬಸ್ ಹತ್ತುವ ಸ್ಥಿತಿ ಎದುರಾಗಿದ್ದು, ಸಾರಿಗೆ ಇಲಾಖೆಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಸಾವಿರಾರು ಪ್ರಯಾಣಿಕರು ಶಿರಸಿಯಿಂದ ಬಸ್​ನಲ್ಲಿ ಸಂಚರಿಸುತ್ತಾರೆ. ಐದು ರಸ್ತೆಯಲ್ಲಿ ನಿಲ್ಲುತ್ತಾರೆ. ಹಳೆಯ ಬಸ್ ನಿಲ್ದಾಣ ಸಮೀಪ ನಿಲ್ಲುತ್ತಾರೆ. ಅವರೆಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಬೇಕು.
    ಭೀಮಣ್ಣ ನಾಯ್ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಹಳೆಯ ಬಸ್ ನಿಲ್ದಾಣ ಪಕ್ಕದ ಟೆಂಪೋ ಸ್ಟಾಂಡ್ ಅನ್ನು ಪಿಕ್ ಅಪ್ ಪಾಯಿಂಟ್ ಮಾಡಲಾಗಿದೆ. ಪ್ರತಿಯೊಂದು ಬಸ್ ಅಲ್ಲಿಗೆ ತೆರಳಿ ಜನರನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಕಂಟ್ರೋಲ್ ರೂಮನ್ನು ಸಹ ಅಲ್ಲಿಗೆ ಶಿಫ್ಟ್ ಮಾಡಲಾಗಿದೆ. ಜನರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡುವ ವ್ಯವಸ್ಥೆ ಶೀಘ್ರದಲ್ಲಿ ಮಾಡಲಾಗುತ್ತದೆ.
    ಎಂ. ರಾಜಕುಮಾರ ಸಾರಿಗೆ ಸಂಸ್ಥೆ ಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts