More

    ಶಿರಸಿ ಜಿಲ್ಲೆ ಹೋರಾಟ ಬೆಂಬಲಿಸಿ

    ಮುಂಡಗೋಡ: ಶಿರಸಿ ಜಿಲ್ಲಾ ಕೇಂದ್ರವನ್ನಾಗಿಸುವುದು ತೀರಾ ಅವಶ್ಯವಿದೆ. ತಾಲೂಕಿನ ಜನರು ಶಿರಸಿ ಜಿಲ್ಲಾ ಕೇಂದ್ರವನ್ನಾಗಿಸಲು ಹೋರಾಟಗಾರರಿಗೆ ಹೆಚ್ಚು ಬೆಂಬಲ ನೀಡಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.

    ಪಟ್ಟಣದ ಓಶಿಮಠ ಅವರ ನಿವಾಸದಲ್ಲಿ ಮಂಗಳವಾರ ಜರುಗಿದ ಶಿರಸಿ ಜಿಲ್ಲಾ ಹೋರಾಟಗಾರರ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

    ಈಗಾಗಲೆ ಶಿರಸಿಯಲ್ಲಿ ಜಿಲ್ಲಾ ಮಟ್ಟದ ಹಲವಾರು ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂದರು. ಪರಮಾನಂದ ಹೆಗಡೆ ಮಾತನಾಡಿ, ಶಿರಸಿ ಜಿಲ್ಲೆಯನ್ನಾಗಿಸಬೇಕು ಎಂಬ ಕೂಗು ರಾಜಧಾನಿವರೆಗೂ ತಲುಪಿದೆ. ಘಟ್ಟದ ಮೇಲಿನ ತಾಲೂಕಿನ ಜನರು ಶಿರಸಿ ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಹೋರಾಟ ತೀವ್ರಗೊಳಿಸುವುದು ಅವಶ್ಯವಿದೆ ಎಂದರು. ಓಂ ಗ್ಯಾಸ್ ಮಾಲೀಕ ಬಸವರಾಜ ಓಶಿಮಠ ಮಾತನಾಡಿದರು.

    ಇದೇ ವೇಳೆ ಬಸವರಾಜ ಓಶಿಮಠ ಅವರನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಎಂ.ಎಂ. ಭಟ್ಟ, ಮಂಜುನಾಥ ಮೊಗೇರ, ಶ್ರೀಧರ ಮೊಗೇರ, ವಿನಾಯಕ ಹೊಸಪಟ್ಟಣ, ಶ್ರೀಧರ ಡೋರಿ, ಎಸ್.ಕೆ. ಬೋರ್ಕರ್, ಸೋಮಣ್ಣ ಮುಡೆಣ್ಣವರ, ವಸಂತ ಕೊಣಸಾಲಿ, ಸಂಗಪ್ಪ ಕೋಳೂರ, ಜಗದೀಶ ಕಾನಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts