More

    ಶಿಥಿಲ ಸೇತುವೆ ಮೇಲೆ ಆತಂಕದ ಪ್ರಯಾಣ

    ರಾಜಕುಮಾರ ಹೊನ್ನಾಡೆ ಹುಲಸೂರು
    ಸಮೀಪದ ಭಾಲ್ಕಿ-ಬಸವಕಲ್ಯಾಣ ಮುಖ್ಯರಸ್ತೆಯ ಧನ್ನೂರ (ಕೆ) ಹಳೇ ಗ್ರಾಮ ಹತ್ತಿರದ ಸೇತುವೆ ಶಿಥಿಲಗೊಂಡಿದ್ದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ದಶಕಗಳ ಹಿಂದೆ ನಿಮರ್ಿಸಲಾದ ಸೇತುವೆಯ ಸಿಮೆಂಟ್ ಕಿತ್ತು ಹೋಗಿದ್ದರಿಂದ ಕಲ್ಲುಗಳು ಉದುರಿ ಬೀಳುತ್ತಿವೆ. ಚುಳಕಿನಾಲಾ ಜಲಾಶಯದ ಹಿನ್ನೀರು ಸೇತುವೆಯ ಕೆಳಭಾಗದಲ್ಲಿ ಸದಾ ಇರುವ ಕಾರಣ ಜನರು ಆತಂಕದಿಂದ ಪ್ರಯಾಣ ಮಾಡುವಂತಾಗಿದೆ.

    ಭಾರಿ ಗಾತ್ರದ ವಾಹನಗಳು ಸಂಚರಿಸಬಾರದು. ಸೇತುವೆ ಶಿಥಿಲಗೊಂಡಿದೆ, ಪ್ರಯಾಣಿಕರು ಎಚ್ಚರಿಕೆಯಿಂದ ಓಡಾಡಬೇಕು ಎಂಬ ಎಚ್ಚರಿಕೆಯ ನಾಮಫಲಕ ಹಾಕಲಾಗಿದೆ. ಆದರೂ ಸಹ ಭಾರವಾದ ವಾಹನಗಳು ಓಡಾಡುತ್ತಿರುವುದರಿಂದ ಅಪಾಯ ಸಂಭವಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ.

    ಸೇತುವೆ ಕೆಳಭಾಗದಲ್ಲಿ ಒಂದು ಅಡಿ ಅಂತರದಲ್ಲಿ ನೀರು ಇರುವುದರಿಂದ ಹಾವು ಸೇರಿದಂತೆ ವಿಷಜಂತುಗಳ ಭಯ ಪ್ರಯಾಣಿಕರನ್ನು ಕಾಡುತ್ತಿದೆ. ಸೇತುವೆ ಶಿಥಿಲಗೊಂಡಿದ್ದರಿಂದ ರಾತ್ರಿ ಸಮಯ ಸಂಚಾರ ಬಂದ್ ಆಗಿರುತ್ತದೆ. ಸ್ವಲ್ಪ ಮಳೆ ಸುರಿದರೆ ಸಾಕು ಚುಳಕಿನಾಲಾ ಜಲಾಶಯದ ಹಿನ್ನೀರು ಸೇತುವೆ ಮೇಲೆ ಹರಿದು ಸಂಚಾರ ಬಂದ್ ಆಗುತ್ತದೆ.

    ಸೇತುವೆ ಮೇಲೆ ಪ್ರಯಾಣಿಕರು ಭಯಭೀತರಾಗಿ ಸಂಚರಿಸುತ್ತಿರುವ ಬಗ್ಗೆ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ತುರ್ತು ಸಂದರ್ಭಗಳಿದ್ದರೂ ರಾತ್ರಿ ಹೊತ್ತು ಈ ಮಾರ್ಗದಲ್ಲಿ ಸಂಚಾರ ಬಂದ್ ಆಗಿರುತ್ತದೆ. ಬೇಗನೆ ಸೇತುವೆ ನಿರ್ಮಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

    ಧನ್ನೂರ (ಕೆ) ಗ್ರಾಮ ಹತ್ತಿರದ ಸೇತುವೆ ಶಿಥಿಲಗೊಂಡು ಇದರ ಕಲ್ಲುಗಳು ಬೀಳುತ್ತಿವೆ. ಚುಳಕಿನಾಲಾ ಜಲಾಶಯದ ಹಿನ್ನೀರು ಒತ್ತಿ ಬರುತ್ತಿದ್ದರಿಂದ ಮಳೆಗಾಲದಲ್ಲಿ ಸಂಚಾರ ಬಂದ್ ಆಗುತ್ತದೆ. ಸೇತುವೆ ಕೆಳಗೆ ಸದಾ ನೀರು ಇರುತ್ತಿರುವುದರಿಂದ ವಿಷಜಂತುಗಳ ಭಯವೂ ಕಾಡುತ್ತಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ನಿಮರ್ಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ.
    | ಎಂ.ಜಿ.ರಾಜೋಳೆ, ಸಂಚಾಲಕ, ಹುಲಸೂರು ತಾಲೂಕು, ಬಸವಕಲ್ಯಾಣ ಜಿಲ್ಲಾ ಕೇಂದ್ರ ರಚನೆ ಹೋರಾಟ ಸಮಿತಿ

    ಧನ್ನೂರ (ಕೆ) ಸಮೀಪದ ಸೇತುವೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕೆಲವೇ ದಿನಗಳಲ್ಲಿ ಕೆಲಸ ಆರಂಭಿಸುತ್ತೇವೆ. ಹಳೇ ಗ್ರಾಮದ ಮಧ್ಯಭಾಗದಿಂದ ಸೇತುವೆ ನಿಮರ್ಿಸುವ ಯೋಜನೆ ಇತ್ತು. ಆದರೆ ನೀರಾವರಿ ಇಲಾಖೆ ಅನುಮತಿ ನೀಡದ ಕಾರಣ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು.
    | ಶರಣಬಸಪ್ಪ ಪಾಟೀಲ್, ಎಇಇ, ಲೋಕೋಪಯೋಗಿ ಇಲಾಖೆ ಬಸವಕಲ್ಯಾಣ

    ಹೊಸ ಸೇತುವೆ ನಿಮರ್ಿಸಲು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು. ಬಸವಕಲ್ಯಾಣ ನಗರದಿಂದ ಧನ್ನೂರ (ಕೆ) ಮೂಲಕ ಹುಲಸೂರು ತಾಲೂಕಿನ ಮುಚಳಂಬ, ಮಾದೆಪುರ, ಲಿಂಗಾಪುರ, ಗಡಿರಾಯಪಳ್ಳಿ, ತೊಗಲೂರ ಗ್ರಾಮಗಳ ಸಂಪರ್ಕ ಸೇರಿದಂತೆ ಭಾಲ್ಕಿ ಮುಖ್ಯರಸ್ತೆ ಇದಾಗಿದೆ. ಸೇತುವೆಯ ಎರಡೂ ಕಡೆ ಎಚ್ಚರಿಕೆಯ ನಾಮಫಲಕ ಹಾಕಲಾಗಿದೆ. ಪ್ರಯಾಣಿಕರು ಜಾಗ್ರತೆಯಿಂದ ಸಂಚರಿಸಬೇಕು.
    | ಶಿವಾನಂದ ಮೇತ್ರೆ, ತಹಸೀಲ್ದಾರ್, ಹುಲಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts