More

    ಶಿಗಡಿ ಮೀನು ಬೇಟೆ ಭರ್ಜರಿ

    ಕಾರವಾರ: ಅರಬ್ಬಿ ಸಮುದ್ರಕ್ಕೆ ತೆರಳಿದ ಮೀನುಗಾರರಿಗೆ ಭರ್ಜರಿ ಶಿಗಡಿ ಮೀನು ಬೇಟೆಯಾಗುತ್ತಿದೆ. ಆದರೆ, ದರ ಇಳಿದ ಕಾರಣ ಮೀನುಗಾರರು ಖುಷಿಯಲ್ಲಿಲ್ಲ.

    ಕಾರವಾರ ಬೈತಖೋಲ್ ಮಾರುಕಟ್ಟೆಯಲ್ಲಿ ಶನಿವಾರ ಒಂದೇ ದಿನ 30 ಬೋಟ್​ಗಳಿಂದ ಸುಮಾರು 28 ಟನ್​ಗೂ ಅಧಿಕ ಕರಿಕಡ್ಡಿ ಎಂಬ ಜಾತಿಯ ಶಿಗಡಿ ಆವಕವಾಗಿದೆ. ಕೆಲ ಟ್ರಾಲರ್ ಬೋಟ್​ಗಳು ತೀರದಿಂದ ಒಂದು ಕಿಮೀಗೂ ಈಚೆ ಶಿಗಡಿ ಬೇಟೆಗೆ ಇಳಿದಿದ್ದು ಕಂಡು ಬಂತು. ಒಮ್ಮೆ ಹಿಡಿದಾಗ ಬೋಟ್ ತುಂಬಿ ಎರಡನೇ ಬಾರಿಗೆ ಮತ್ತೆ ಬೇಟೆಗೆ ತೆರಳಿದ ಉದಾಹರಣೆಯೂ ಇದೆ.

    ಬೆಲೆ ಇಳಿಕೆ: ಪ್ರತಿ ವರ್ಷ ಕಾರವಾರಕ್ಕೆ ಮೀನುಗಳ ಖರೀದಿಗೆ ಮಂಗಳೂರು, ಕೇರಳ ಹಾಗೂ ಗೋವಾಗಳಿಂದ ವ್ಯಾಪಾರಸ್ಥರು ಬರುತ್ತಿದ್ದರು. ಆದರೆ, ಈ ಬಾರಿ ಕರೊನಾ ಹಾಗೂ ಎಲ್ಲೆಡೆ ಸಾಕಷ್ಟು ಮೀನು ಬೇಟೆ ಇರುವ ಕಾರಣ ಮಂಗಳೂರಿನ ಒಬ್ಬರೇ ವ್ಯಾಪಾರಿ ಕಾರವಾರದಲ್ಲಿ ಮೀನು ಖರೀದಿಗೆ ಬಂದಿದ್ದು, ಅವರು ಹೇಳಿದ ಬೆಲೆಗೆ ಶಿಗಡಿ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಮೊದಲು ಒಂದು ಕೆಜಿಗೆ 70 ರಿಂದ 80 ರೂ.ಗೆ ಮಾರಾಟವಾಗುತ್ತಿದ್ದ ಕರಿ ಕಡ್ಡಿ ಶಿಗಡಿ ಈಗ 30 ರಿಂದ 50 ರೂ. ಬೆಲೆಗೆ ಮಾರಾಟವಾಗುತ್ತಿದೆ ಎಂದು ಮೀನುಗಾರ ರಾಜೇಶ ಮಾಜಾಳಿಕರ್ ಬೇಸರ ವ್ಯಕ್ತಪಡಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts