More

    ಶಿಕ್ಷಕರ ಸಮಸ್ಯೆ ಸರಿಪಡಿಸಲು ಶ್ರಮಿಸಿ

    ಆಲಮಟ್ಟಿ: ಇನ್ನುಳಿದ ಸಂಘಟನೆಗಳಿಗಿಂತ ಶಿಕ್ಷಕ ಸಂಘಟನೆ ಸಂಪೂರ್ಣ ಭಿನ್ನವಾಗಿದ್ದು, ಸರ್ವಾಧಿಕಾರಿ ಧೋರಣೆಯ ತತ್ವಗಳಿಂದ ಮುಕ್ತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಕ್ಷಕ ಸಂಘಟನೆ ಸದಾ ಶಿಕ್ಷಕರ ಏಳಿಗೆಗೆ ಕಾರ್ಯನಿರ್ವಹಿಸುತ್ತದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯ ಪಟ್ಟರು.

    ಇಲ್ಲಿಯ ಎಚ್.ಪಿ.ಎಸ್. ಶಾಲೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ವಿವಿಧ ಹಂತದ ನೂತನ ಪದಾಧಿಕಾರಿಗಳಿಗೆ ಗುರುವಾರ ಪ್ರಮಾಣಪತ್ರ ನೀಡಿ ಅವರು ಮಾತನಾಡಿದರು.

    2005ರಲ್ಲಿ ಅಧಿಸೂಚಿತಗೊಂಡು 2007 ರಲ್ಲಿ ನೌಕರಿಗೆ ಸೇರಿದ 11,000ಕ್ಕೂ ಅಧಿಕ ನೌಕರರಿಗೆ ಎನ್‌ಪಿಎಸ್‌ನಿಂದ ಹಳೇ ಪಿಂಚಣಿ ವ್ಯವಸ್ಥೆಗೆ ಶಿಕ್ಷಕ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಒಪ್ಪಿದೆ. ಎಲ್ಲ ನೌಕರರಿಗೂ ಹಳೇ ಪಿಂಚಣಿ ವ್ಯವಸ್ಥೆ ಕೊಡಿಸುವುದು, 7ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯ ಒದಗಿಸುವುದು, ಪಿಎಸ್‌ಟಿ ಶಿಕ್ಷಕರ ಪದೋನ್ನತಿ ಸಮಸ್ಯೆ ಬಗೆಹರಿಸುವುದು ನಮ್ಮ ಸಂಘದ ಮುಂದಿರುವ ಗುರಿಯಾಗಿದೆ. ಈಗ ನಾಮನಿರ್ದೇಶನಗೊಂಡ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

    ಸಂಘಟನೆಯ ನಿಡಗುಂದಿ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಪ್ರಧಾನಕಾರ್ಯದರ್ಶಿ ಸಲಿಂ ದಡೆದ, ಆರ್.ಬಿ.ಗೌಡರ ಮಾತನಾಡಿದರು.

    ಸರ್ಕಾರಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ಆರ್.ಎಸ್. ಕಮತ, ಆರ್.ಬಿ.ಗೌಡರ, ಬಿ.ಎಸ್. ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಎಂ.ಜಿ. ಪೂಜಾರ, ಎಂ.ಎಂ. ಮುಲ್ಲಾ, ಬಿ.ಸಿ. ನದಾಫ್, ಎಸ್.ಎಂ. ಪಾಟೀಲ, ನಾಗರಾಜ ಬಸರಕೋಡ, ಮುತ್ತು ಯಳಮೇಲಿ, ಮುತ್ತುರಾಜ ಹೆಬ್ಬಾಳ, ಪ್ರಕಾಶ ಇಜೇರಿ, ಭಾಷಾಸಾಬ್ ಮನಗೂಳಿ, ಸುರೇಶ ಹುರಕಡ್ಲಿ, ಎಚ್.ಡಿ. ನದಾಫ್, ಎಸ್.ಎಂ. ಪಾಟೀಲ, ಪ್ರಭಾಕರ ಹೆಬ್ಬಾಳ, ರಾಜು ಹಲಗಿ, ಮಲ್ಲಿಕಾರ್ಜುನ ವಾಲಿ ಇತರರಿದ್ದರು.

    • ನೇಮಕ: ಬೆಳಗಾವಿ ವಿಭಾಗೀಯ ಉಪಾಧ್ಯಕ್ಷರಾಗಿ ಎಂ.ಆರ್. ಮಕಾನದಾರ, ವಿ.ಕೆ. ಮಸೂತಿ, ಲಲಿತಾ ಸಂಖ, ಎಚ್.ಡಿ. ಮಾದರ, ಪವಾಡೆಪ್ಪ ಚಲವಾದಿ, ಸಹಕಾರ್ಯದರ್ಶಿಗಳಾಗಿ ಬಸಮ್ಮ ಪೂಜಾರಿ, ಬಸವರಾಜ ಚಿಂಚೋಳಿ, ಕೆ.ಎಂ. ಗುಡದಿನ್ನಿ, ಸಂಘಟನಾ ಕಾರ್ಯದರ್ಶಿಗಳಾಗಿ ವಾಸುದೇವ ಸುಲಾಖೆ, ಸಿ.ಎಸ್. ಭಾವಿಕಟ್ಟಿ, ಮಾಧ್ಯಮ ಸಂಚಾಲಕರಾಗಿ ಆನಂದ ಗೌಡರ, ನಿಡಗುಂದಿ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿ ಬಿ.ಎಸ್. ಯರವಿನತೆಲಿಮಠ ಅವರನ್ನು ನೇಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts