More

    ಶಾಶ್ವತವಾಗಿ ನಿಲ್ಲುವ ಮಹಾನ್ ಚೇತನ

    ಕೆ.ಆರ್.ಪೇಟೆ: ಬಸವಣ್ಣರ ತತ್ವ ಸಿದ್ಧಾಂತ ವಿಶ್ವಕ್ಕೆ ಆದರ್ಶಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ ಮಂಜು ಅಭಿಪ್ರಾಯಪಟ್ಟರು.

    ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ವಿಶ್ವಗುರು ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
    ಸಮಾನತೆಯ ಹರಿಕಾರ ಬಸವಣ್ಣ ನಮಗೆಲ್ಲ ಮಾದರಿಯಾಗಿದ್ದಾರೆ. ಅನಾದಿ ಕಾಲದಿಂದಲೂ ಈ ಜಗತ್ತು ಅನೇಕ ದಾರ್ಶನಿಕರನ್ನು ಕಂಡಿದೆ. ಯುಗ-ಯುಗಗಳವರೆಗೆ ಶಾಶ್ವತವಾಗಿ ನಿಲ್ಲಬಲ್ಲ ಮಹಾನ್ ಚೇತನ ವಿಶ್ವಗುರು ಬಸವಣ್ಣನವರು. 12ನೇ ಶತಮಾನದಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟ ಮಾಡಿ ಸಮಾಜಕ್ಕೆ ಸಮಾನತೆ ಸಾರಿದವರು. ಅವರ ಕ್ರಾಂತಿ ಇಂದಿನ ಪ್ರಜಾಪ್ರಭುತ್ವಕ್ಕೆ ನಾಂದಿ. ಅವರ ಆದರ್ಶ, ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಉತ್ತಮಸಮಾಜ ನಿರ್ಮಾಣ ಮಾಡಬೇಕು ಎಂದರು.

    ಕರ್ನಾಟಕದ ಪಾಲಿಗೆ ಹನ್ನೆರಡನೇ ಶತಮಾನ ಬಹಳ ಮಹತ್ವದ್ದು. ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟದಲ್ಲಿ. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಕಾಲದಲ್ಲಿ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದ ಮಹಾನ್ ಸಾಧಕರು. ಜಾತಿಯ ಹಂಗಿಲ್ಲದೆ ಎಲ್ಲ ವರ್ಗದ ವಚನಕಾರರು ವಚನಗಳ ಮೂಲಕ ತಮ್ಮ ಹೊಸ ಚಿಂತನೆಗಳನ್ನು ಕಟ್ಟಿಕೊಡುತ್ತಿದ್ದರು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು. ಕಾಯಕವೇ ಕೈಲಾಸ ಎಂದು ಕಲಿಸಿಕೊಟ್ಟವರ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

    ಪಟ್ಟಣದ ಹೊರವಲಯದಲ್ಲಿರುವ ಮಾತೃಭೂಮಿ ವೃದ್ಧಾಶ್ರಮದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಎಲ್‌ಐಸಿ ಶಿವಪ್ಪ, ಲಿಂಗಾಪುರ ಶಿವಪ್ಪ, ಗೋವಿಂದನಹಳ್ಳಿ ಕೇಬಲ್‌ಗುಂಡ, ಸಂತೋಷ್, ಚೌಡಸಮುದ್ರ ಸಿ.ಟಿ.ಶಿವಪ್ಪ, ಸಿ.ಬಿ.ಶಿವಮೂರ್ತಿ, ಸಿ.ಪಿ.ರುದ್ರಪ್ಪ, ಸಾಸಲು ಬಿಎಸ್‌ಸಿ ಜಗದೀಶ್, ಸಾಸಲು ಅಂಗಡಿ ಸಂತೋಷ್, ಅಂತರಾಷ್ಟ್ರೀಯ ಯೋಗಪಟು ಅಲ್ಲಮಪ್ರಭು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts