More

    ಶಾಲೆ-ಸಮಾಜ ಒಂದು ನಾಣ್ಯದ ಎರಡು ಮುಖ

    ಕೆಂಭಾವಿ : ಗ್ರಾಮೀಣ ಭಾಗದ ಶಾಲೆಯೊಂದು ಉತ್ತಮ ಎಂದು ಹೇಳಬೇಕಾದರೆ ಆ ಊರಿನ ಜನ ಅತ್ಯುತ್ತಮವಾಗಿ ಕಾರ್ಯರ್ನಿಹಿಸಿರುತ್ತಾರೆ ಎಂದರ್ಥ. ಹೀಗಾಗಿ ಸಮಾಜ ಮತ್ತು ಶಾಲೆ ಒಂದು ನಾಣ್ಯದ ಎರಡು ಮುಖಗಳಾಗಿವೆ ಎಂದು ನಿವೃತ್ತ ಉಪ ನಿರ್ದೇಶಕ ಶಾಂತಗೌಡ ಪಾಟೀಲ್ ಹೇಳಿದರು.
    ಕೂಡಲಗಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಗುರುವಂದನಾ ಹಾಗೂ ಜಾನಪದ ಸಂಭ್ರಮ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೂಡಲಗಿ ಶಾಲೆ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಶಾಲೆ ಎಂದು ಹೆಸರುವಾಸಿಯಾಗಿದೆ. ಮಲೆನಾಡಿನ ಗಾಂಧಿ ಎಚ್.ಜಿ. ಗೋವಿಂದಗೌಡ ಪ್ರಶಸ್ತಿ ಪುರಸ್ಕೃತ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಅನೇಕ ಮುಖ್ಯಗುರು, ಶಿಕ್ಷಕ ವೃಂದ ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳ ಪರಿಶ್ರಮವೇ ಇದಕ್ಕೆ ಮೂಲ ಕಾರಣ ಎಂದರು.
    ಬಾಬಾ ಮಹಾರಾಜ ಮಠದ ಉಮಾಕಾಂತ ಸಿದ್ಧರಾಜ ಬಾಬಾ ಸಾನ್ನಿಧ್ಯ ವಹಿಸಿದ್ದರು. ಶ್ರೀ ಚನ್ನವೀರಯ್ಯ ಸ್ವಾಮಿ ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ವಠಾರ, ಮುಖ್ಯಗುರು ಪ್ರಭುಲಿಂಗ ಕೊಣ್ಣೂರ, ಬಿಸಿ ಊಟದ ಅಧಿಕಾರಿ ಯಲ್ಲಪ್ಪ ಚಂದನಕೇರಿ, ಶರಣಗೌಡ ಪೊಲೀಸ್ ಪಾಟೀಲ್,ದೊಡ್ಡ ಶರಣಪ್ಪ ಸಾಹು ಕೊಣ್ಣೂರ, ನಾರಾಯಣರಾವ ಕುಲಕರ್ಣಿ, ಭೀಮನಗೌಡ ಮಾಲಿ ಪಾಟೀಲ್, ಕಾಮಣ್ಣ ಬಿರಾದಾರ, ಮಲಕನಗೌಡ ಮೇಟಿ, ರೇವಣಪ್ಪ ಪೂಜಾರಿ, ಬಸವರಾಜ ಕೊಡೇಕಲ್, ಮಲ್ಲಪ್ಪ ನಡುವಿನಮನಿ, ಸಿಆರ್‌ಸಿ ಹಣಮಂತ್ರಾಯ ಪಲ್ಲೇದ ಇದ್ದರು.
    ಶಿಕ್ಷಕ ರಾಜುಗೌಡ ಮುದಿಗೌಡ್ರು, ಮಂಜುನಾಥ ಕಟ್ಟಿಮನಿ ಹಾಗೂ ಪ್ರಭುದೇವ ಯಾದವ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಕೃಷ್ಣಾಜಿ ಸ್ವಾಗತಿಸಿದರು. ಅಪ್ರೋಜಿ ವಂದಿಸಿದರು. ಸಾಹೇಬಗೌಡ ಬಿರಾದಾರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts