More

    ಶಾಲಾ ಪಠ್ಯ ಸೇರಲಿ ಸಹಕಾರ ವಿಷಯ: ಸಿರಿಗೆರೆ ರಾಜಣ್ಣ

    ದಾವಣಗೆರೆ: ಸಹಕಾರ ವಿಷಯ ಕುರಿತು ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಲು ಶಾಲಾ ಪಠ್ಯದಲ್ಲಿ ಜಾರಿಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಸಿರಿಗೆರೆ ರಾಜಣ್ಣ ಹೇಳಿದರು.

    ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಇತ್ತೀಚೆಗೆ ಸಹಕಾರ ವಿಚಾರ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ, ಚರ್ಚಾ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಸಹಕಾರಿ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸ್ಪರ್ಧೆಗಳು ಸಹಕಾರಿಯಾಗಲಿವೆ ಎಂದರು.
    ಜಿಲ್ಲೆಯಲ್ಲಿ ಅನೇಕ ಸಹಕಾರ ಸಂಘಗಳು ಲಾಭದಾಯಕವಾಗಿದ್ದು, ಭ್ರಷ್ಟಾಚಾರಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಹಕಾರ ಚಳವಳಿಯಿಂದ ಮಾತ್ರ ಗ್ರಾಮೀಣ ಅಭಿವೃದ್ಧ್ದಿ ಸಾಧ್ಯವಾಗಿದೆ. ರೈತರಿಗೆ ಅವಶ್ಯಕ ಬೀಜ, ಗೊಬ್ಬರ, ಕೃಷಿ ಉಪಕರಣಗಳು ಸಹಕಾರ ಸಂಘಗಳಿಂದ ದೊರೆಯುತ್ತಿವೆ ಎಂದು ತಿಳಿಸಿದರು.
    ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಅಮುಲ್, ಇಫ್ರೋ, ಕ್ರಿಬ್ಕೋ, ನಂದಿನಿ ಮೊದಲಾ ಸಹಕಾರ ಸಂಘಗಳು ಉತ್ತಮ ಬೆಳವಣಿಗೆಯೊಂದಿಗೆ ದೇಶಕ್ಕೆ ಕೀರ್ತಿ ತಂದಿವೆ. ವಿಚಾರ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಹಕಾರ ಕ್ಷೇತ್ರವು ಎಲ್ಲೆಡೆ ವಿಸ್ತಾರಗೊಂಡಿದೆ ಎಂದು ತಿಳಿಸಿದರು.
    ರಾಜ್ಯ ಸಹಕಾರ ಮಹಾಮಂಡಳದ ಸಹಕಾರ ಶಿಕ್ಷಣಾಧಿಕಾರಿ ಕೆ.ಮಲ್ಲಯ್ಯ ಇದ್ದರು. ತೀರ್ಪುಗಾರರಾಗಿ ಎವಿಕೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ, ಡಾ.ಬಸವರಾಜ ಬಣಕಾರ್, ಸಹಕಾರ ಇಲಾಖೆಯ ಎಂ.ದಕ್ಷಿಣಾಮೂರ್ತಿ, ಜಿ.ಎಸ್.ಸುರೇಂದ್ರ ಕಾರ್ಯ ನಿರ್ವಹಿಸಿದರು.
    ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಸಹಕಾರ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts