More

    ‘ಶಾದಿಭಾಗ್ಯ’ ಮುಂದುವರಿಸಲು ಆಗ್ರಹ



    ಗದಗ: ಶಾದಿ ಭಾಗ್ಯ ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಗದಗ-ಬೆಗಟಗೇರಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಹಾಗೂ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸಲ್ಲಿಸಲಾಯಿತು.

    ರಾಜ್ಯದಲ್ಲಿರುವ ಮುಸ್ಲಿಮ ಸಮುದಾಯವು ಆರ್ಥಿಕ ಮತ್ತು ಸಾಮಾಜಿಕವಾಗಿ ತುಂಬಾ ಹಿಂದುಳಿದಿದ್ದು. ಇದನ್ನು ಮನಗಂಡು ಕಾಂಗ್ರೆಸ್ ಸರ್ಕಾರ ಶಾದಿಭಾಗ್ಯ ಯೋಜನೆ ಜಾರಿಗೊಳಿಸಿತ್ತು. ಇದರಿಂದ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಿತ್ತು. ಬಿಜೆಪಿ ಸರ್ಕಾರ ಶಾದಿ ಭಾಗ್ಯಯೋಜನೆ ರದ್ದುಗೊಳಿಸಿ ಮುಸ್ಲಿಮರಿಗೆ ಅನ್ಯಾಯ ಮಾಡಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಶಾದಿಭಾಗ್ಯ ಯೋಜನೆ ರದ್ದುಪಡಿಸಿ ಹೊರಡಿಸಿದ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

    ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಯೂಸೂಫ್ ನಮಾಜಿ, ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ, ಉಮರ್ ಫಾರೂಕ್ ಹುಬ್ಬಳ್ಳಿ, ಇಲಿಯಾಸ್ ಕೈರಾತಿ, ರಫೀಕ್ ಜಮಾಲ್​ಖಾನವರ, ಅಷ್ಪಾಕ್ ಅಲಿ ಹೊಸಳ್ಳಿ, ಮುನ್ನಾ ಶೇಖ, ಮಹ್ಮದ್ ಶಾಲಗಾರ, ನೌಜವಾನ್ ಕಮಿಟಿ ಅಧ್ಯಕ್ಷ ಮೆಹಬೂಬ ಮುಲ್ಲಾ, ಸೈಯದ್, ರಿಯಾಜ್​ಅಹ್ಮದ್ ಪಾಮಡಿ, ಜಿಲ್ಲಾ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ, ಪರವೀನ್​ಬಾನು ಹವಾಲ್ದಾರ, ಮುಹರುನ್ನಿಸಾ ಢಾಲಾಯತ್, ರಿಯಾಜ್ ಪಠಾಣ ಮತ್ತಿತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts