More

    ಶಾಂತಿ, ಸುವ್ಯವಸ್ಥೆಗೆ ಭಂಗ ತಂದರೆ ಕ್ರಮ

    ಕೋಲಾರ: ನಿಮ್ಮ ಕಸುಬಿನ ಮೇಲೆ ತಲ್ಲೀನರಾಗಿ ಬದುಕಿ, ಬೇರೆಯವರಿಗೆ ತೊಂದರೆ ನೀಡುವ ಮೂಲಕ ಹೀರೋಗಳಾಗಲು ದೊಡ್ಡವರಾಗಲು ಹೋದರೆ ಕ್ರಮ ಕೈಗೊಳ್ಳಲಾಗುವುದು ಎಂದು ರೌಡಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಖಡಕ್ ಎಚ್ಚರಿಕೆ ನೀಡಿದರು.

    ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಶುಕ್ರವಾರ ರೌಡಿ ಶೀಟರ್’ಗಳ ಪರೇಡ್ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಲ್ಲರೂ ಸಮಾನವಾಗಿ ನೆಮ್ಮದಿಯಿಂದ ಬದುಕು ನಡೆಸಬೇಕು. ನೀವುಗಳು ಯಾವುದೇ ರೀತಿಯ ಅಹಿತಕರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಇತರರಿಗೆ ತೊಂದರೆ ನೀಡಿದ್ದಾದರೆ ಕಾನೂನು ರೀತಿಯಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿಪಾರು ಮಾಡಲಾಗುವುದು ಎಂದರು.

    ನಿಮ್ಮ ಕಾರ್ಯವೈಖರಿ, ದಿನಚರಿ ಬಗ್ಗೆ ಪೊಲೀಸರು ನಿಗಾವಯಸಿರುತ್ತಾರೆ. ರೌಡಿ ಶೀಟರ್ ಪಟ್ಟಿಯಿಂದ ಹೆಸರು ತೆಗೆಯಲು ಸಮಾಜದಲ್ಲಿ ಗೌರವ ಪಡೆಯಲು ಒಳ್ಳೆ ನಡವಳಿಕೆಯ ವ್ಯಕ್ತಿಗಳಾಗಿ, ಹೊಸ ಕೇಸ್ ಬೀಳದಂತೆ ಎಚ್ಚರವಹಿಸಿ. ನಿಮ್ಮ ಮೇಲೆ ಸಣ್ಣ ಪಿಟ್ಟಿ ಕೇಸ್ ದಾಖಲಾದರು ರೌಡಿ ಹಾಳೇಯಿಂದ ನಿಮ್ಮ ಹೆಸರನ್ನು ತೆಗೆಯಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

    ಇಂದು ಪೆರೇಡ್ ನಲ್ಲಿ ೬೬೩ ರೌಡಿಗಳು ಭಾಗವಹಿಸಬೇಕಿತ್ತು, ಆರೋಗ್ಯ ಸಮಸ್ಯೆ ಜೈಲಿನಲ್ಲಿರುವವರು ಹಾಗೂ ಕೆಲವು ಕಾರಣಗಳಿಂದಾಗಿ ೩೩೯ ಜನ ಮಾತ್ರ ಹಾಜರಾಗಿದ್ದಾರೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸಬಾರದು. ಗಾಂಜಾ, ಮಾದಕ ವಸ್ತುಗಳ ಮಾರಾಟ ಮಾಡುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವ ಕೆಲಸಗಳು ಮಾಡಬಾರದು. ಸಮಾಜಿಕ ಜಾಲತಾಣದಲ್ಲಿ ಕತ್ತಿ-ಲಾಂಗ್-ಮಚ್ಚು ಹಿಡಿದು ಪ್ರದರ್ಶಿಸುವ ಮತ್ತು ಕೇಕ್ ಕತ್ತರಿಸುವ ಫೋಟೋ ಪೋಸ್ಟ್ ಮಾಡುವುದು, ಧರ್ಮ ಜಾತಿ ಬಗ್ಗೆ ಅಪಪ್ರಚಾರ ಮಾಡುವುದು, ಇವೆಲ್ಲ ಬಿಟ್ಟುಬಿಡಬೇಕು. ಪ್ರತಿಯೊಬ್ಬರ ಸಾಮಾಜಿಕ ಜಾಲತಾಣದ ಖಾತೆ ಮೇಲೆ ಪೊಲೀಸ್ ಕಣ್ಣಿಟ್ಟಿರುತ್ತದೆ. ಗೌರವಿತವಾಗಿ ಬದುಕುವುದನ್ನು ಕಲಿಯಿರಿ ಬೇರೆಯವರು ಬದುಕಲು ಬಿಡಿ ಎಂದು ಎಚ್ಚರಿಸಿದರು.

    ಅಡಿಷನಲ್ ಎಸ್ಪಿ ಭಾಸ್ಕರ್, ಡಿವೈಎಸ್ಪಿ ಮುರಳಿಧರ್, ವೃತ್ತ ನಿರೀಕ್ಷಕ ಹರೀಶ್, ನಿರೀಕ್ಷಕರಾದ ಲೋಕೇಶ್ ವೆಂಕಟೇಶ್ ಅನಿಲ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

    ಚಿತ್ರ ೨೧ ಕೆಎಲ್‌ಆರ್ ೦೧: ನಗರದ ಖವಾಯತ್ತು ಮೈಧಾನದಲ್ಲಿ ರೌಡಿ ಶೀಟರ್‌ಗಳ ಪೆರೆಡ್‌ನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪರಿಶೀಲಿಸುತ್ತಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts