More

    ಶಾಂತಿಯ ಸಂದೇಶ ಸಾರುವ ಬ್ರಹ್ಮಕುಮಾರಿ

    ಕಲಬುರಗಿ: ಬದುಕಿಗೆ ಶಾಂತಿ ನೆಮ್ಮದಿ ಕಟ್ಟಿಕೊಳ್ಳಲು ಬ್ರಹ್ಮಕುಮಾರಿ ರಾಜಯೋಗ ಕೇಂದ್ರಗಳು ಸಹಕಾರಿಯಾಗಿವೆ, ನಾನು ಕೂಡಾ ಇದನ್ನು ಅಳವಡಿಸಿಕೊಂಡಿದ್ದೇನೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ್ ಹೇಳಿದರು.
    ಅವರು ಘಾಟಗೆ ಲೇಔಟನಲ್ಲಿದ್ದ ರಾಜಯೋಗ ಕೇಂದ್ರದಲ್ಲಿ ಆಯೋಜಿಸಲಾದ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಆದುನಿಕ ಜೀವನದಲ್ಲಿ ಶಾಂತಿಯಿಂದ ಬದುಕು ನಡೆಸುವುದು ಕಷ್ಟವಾಗುತ್ತಿದೆ, ಇಂತಹ ರಾಜಯೋಗ ಕೇಂದ್ರಗಳಿಂದ ಅದು ಸಾಧ್ಯವಾಗಿದೆ ಎಂದು ಹೇಳಿದರು.
    ಪೊಲೀಸ ಅಧಿಕಾರಿ ಯಶೋದಾ ಮಾತನಾಡಿ, ಜೀವನದಲ್ಲಿ ಚಾರಿತ್ರ್ಯಯುಳ್ಳ ನಡೆ ಬಹುಮುಖ್ಯ. ಶಿವನಿಗೆ ನಮ್ಮ ಬೆಳ್ಳಿ, ಬಂಗಾರ, ಹೂ ಹಾರ ಬೇಕಾಗಿಲ್ಲ, ಶುದ್ಧ, ಶಾಂತ, ಸಕಾರಾತ್ಮಕ ಭಾವನೆಗಳು ಬೇಕು. ಇಂದಿನ ಹದೆಗೆಟ್ಟಿರುವ ಸಾಮಾಜಿಕ ಪರಿಸ್ಥಿಯಲ್ಲಿ ಈಶ್ವರಿಯ ಜ್ಞಾನ ಹಾಗೂ ಬಹೂಪಯೋಗಿ, ಕೆಲದಿನಗಳಿಂದ ಬ್ರಹ್ಮಾಕುಮಾರಿ ಸಂಸ್ಥೆ ಸಂಪರ್ಕದಲ್ಲಿರುವ ಸೌಭಾಗ್ಯ ನನಗಿದೆ ಎಂದರು.
    ಕಮಲಾಪುರ ಡಿಗ್ರಿಕಾಲೇಜಿನ ಪ್ರಾಧ್ಯಾಪಕಿ ಅಮೃತಾ ಕಟಕೆ ಮಾತನಾಡಿದರು. ರಾಜಯೋಗಿನಿ ಬಿ.ಕೆ. ವಿಜಯಾ ದೀದಿ, ರಾಜಯೋಗಿ ಬಿಕೆ ಪ್ರೇಮಣ್ಣ ಇವರು ಮಹಾಶಿವರಾತ್ರಿಯ ಮಹತ್ವ ಕುರಿತು ಮಾತನಾಡಿದರು. ಬಿಕೆ ಸವಿತಾ, ಬಿಕೆ ಶಕುಂತಲಾ, ಬಿಕೆ ಅಂಬಿಕಾ, ಬಿಕೆ ಸೋನಿ, ಬಿಕೆ ಶರಣಬಸಪ್ಪ ಹೀರಾ, ಉಪಸ್ಥಿತರಿದ್ದರು. ಬಡಾವಣೆಯ ಕುಮಾರಿಯರಿಂದ ಸುಂದರ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts