More

    ಶನಿವಾರ ಮತ್ತೆ ಕಾಣಿಸಿಕೊಂಡ ಬೆಂಕಿ

    ಕಲಬುರಗಿ
    ಜಗತ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅವಘಡದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಅಲ್ಲಿದ್ದ ೩೪ ಸಿಸಿ ಕ್ಯಾಮರಾ ದೃಶ್ಯಗಳನ್ನು ಸೆರೆ ಹಿಡಿದ ಡಿವಿಆರ್ ವಶಪಡಿಸಿಕೊಂಡಿದ್ದು, ಕೆಲವರು ದುರುz್ದೆÃಶದಿಂದಲೇ ಬೆಂಕಿ ಹಚ್ಚಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
    ಶುಕ್ರವಾರ ತಡರಾತ್ರಿ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದರು. ಅಲಲ್ಲಿ ಉಳಿದುಕೊಂಡು ಮತ್ತೆ ಶನಿವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಹೀಗೆ ಎರಡು ಸಲ ಕರಕಲಾಗಿದ್ದ ಕಡತ, ಛಾವಣಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಎರಡು ಸಲ ಫೈರ್ ಬ್ರಿಗೇಡ್ ವಾಹನದೊಂದಿಗೆ ದೌಡಾಯಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.
    ಕಟ್ಟಡ ಮೇಲ್ಭಾಗದಲ್ಲಿರುವ ಕಟ್ಟಿಗೆಯ ಚೌದಾರಿ, ಲಾಕರ್‌ಗಳಲ್ಲಿನ ದಾಖಲೆಗಳು, ಕೆಲ ಮೂಲೆಗಳಲ್ಲಿ ಹೊಗೆಯಾಡುತ್ತಿದ್ದ ಕಡತಗಳನ್ನು ಹೀಗೆ ಎಲ್ಲ ಕಡೆ ನೀರು ಹಾಕಿ ಬೆಂಕಿ ನಂದಿಸಲಾಯಿತು. ಸಿಇಒ ಚೇಂಬರ್, ಅದಕ್ಕೆ ಹೊಂದಿಕೊAಡAತಿದ್ದ ಲೆಕ್ಕಪತ್ರ, ನರೇಗಾ ವಿಭಾಗಗಳಲ್ಲಿನ ಎಲ್ಲ ದಾಖಲೆ, ಸಲಕರಣೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
    ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನಿಸುತ್ತಿದ್ದರೂ ದಿಢೀರ್ ಬೆಂಕಿ ಹೊತ್ತಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಕೆಲ ದಾಖಲೆಗಳನ್ನು ನಾಶಪಡಿಸಲು ಈ ಹಿಂದೆ ಬೆಂಗಳೂರಿನ ಬಿಬಿಎಂಪಿಯಲ್ಲಿ ನಡೆಸಿದ ಕೃತ್ಯದಂತೆ ಇಲ್ಲೂ ನಡೆಸಲಾಗಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts