More

    ವ್ಯಾಸಂಗಕ್ಕೆ ಪೂರಕವಾಗಿ ಬಸ್ ಓಡಿಸಿ-  ಕೆಎಸ್ಸಾರ್ಟಿಸಿ ಡಿಸಿಗೆ ಸಂಸದ ಸಿದ್ದೇಶ್ವರ ಸೂಚನೆ 

    ದಾವಣಗೆರೆ: ಮಹಿಳೆಯರ ಪ್ರಯಾಣಕ್ಕೆ ಅವಕಾಶ ನೀಡುವ ಧಾವಂತದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತೊಂದರೆ ಆಗದಂತೆ ಗಮನ ಹರಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.
    ಸಂಸದರ ಜನಸಂಪರ್ಕ ಕಚೇರಿಗೆ ಶನಿವಾರ ಆಗಮಿಸಿದ ಕೋಲ್ಕುಂಟೆ ಹಾಗೂ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸಂಚಾರಕ್ಕೆ ವ್ಯತ್ಯಯವಾಗುತ್ತಿರುವ ಕುರಿತು ಹೇಳಿದಾಗ ಅದಕ್ಕೆ ಸ್ಪಂದಿಸಿದರು.
    ಕೆಎಸ್ಸಾರ್ಟಿಸಿ ಡಿಸಿಗೆ ಕರೆ ಮಾಡಿದ ಸಂಸದರು ಗ್ರಾಮೀಣ ಭಾಗದಿಂದ ದಾವಣಗೆರೆ ನಗರಕ್ಕೆ ಶಾಲಾ-ಕಾಲೇಜುಗಳಿಗೆ ವ್ಯಾಸಂಗ ಮಾಡಲು ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೆಎಸ್ಸಾರ್ಟಿಸಿ ಬಸ್ ಸೇವೆ ಸಿಗದೆ ಸಮಸ್ಯೆಯಾಗಿದೆ. ಕೋಲ್ಕುಂಟೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಓಡಿಸಬೇಕೆಂದು ಸೂಚಿಸಿದರು. ಒಂದು ವಾರದೊಳಗೆ ಬಸ್ ಕಾರ್ಯಾಚರಣೆ ಆರಂಭಿಸುವ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಭರವಸೆ ನೀಡಿದರು.
    * ನಾಣ್ಯ ಹಾಕಿ ನೋಟು ಪಡೆವ ಸರ್ಕಾರ
    ಗೃಹಜ್ಯೋತಿ ಹೆಸರಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ, ದಾವಣಗೆರೆ ನಗರದಲ್ಲಿಯೂ ಸಹ ಲೋಡ್‌ಶೆಡ್ಡಿಂಗ್ ಹೇರುತ್ತಿದೆ.
    ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಆರು ತಾಸು ವಿದ್ಯುತ್ ನೀಡಬೇಕಿದ್ದರೂ ಮೂರು ತಾಸು ಮಾತ್ರ ಪೂರೈಸಲಾಗುತ್ತಿದೆ. ತಟ್ಟೆಯಲ್ಲಿ ಶಬ್ಧ ಮಾಡುವ ನಾಣ್ಯಗಳನ್ನು ಹಾಕಿ ಅವರಿಗೆ ಗೊತ್ತಾಗದಂತೆ ನೋಟನ್ನು ಎತ್ತಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
    ಸರ್ಕಾರ ಎಷ್ಟಾದರೂ ಉಚಿತ ಭಾಗ್ಯಗಳನ್ನು ನೀಡಲಿ, ಅದಕ್ಕೆ ಬೇಡ ಎನ್ನುವುದಿಲ್ಲ. ಆದರೆ, ಉಚಿತವಾಗಿ ನೀಡುವ ಭರದಲ್ಲಿ ಇತರೆಯವರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಹೇಳಿದರು.
    ಈ ಸಂದರ್ಭದಲ್ಲಿ ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್, ಕೂಲಂಬಿ ಬಸವರಾಜ್, ಕೋಲ್ಕುಂಟೆ ಅಣ್ಣಪ್ಪ, ಬಸವರಾಜ್ ಹಾಗೂ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts