More

    ವ್ಯಸನ ಮುಕ್ತ ಸಮಾಜ ನಿರ್ಮಾಣ ಅವಶ್ಯ

    ಚಿತ್ರದುರ್ಗ: ದೇಶದ ಭಾವಿ ಪ್ರಜೆಗಳಾದ ಮಕ್ಕಳು, ಯುವಸಮೂಹ ಮಾದಕ ವ್ಯಸನಗಳಿಗೆ ತುತ್ತಾಗುವುದನ್ನು ತಡೆಗಟ್ಟಬೇಕಿದೆ. ವ್ಯಸನಮುಕ್ತ ಉತ್ತಮ ಸಮಾಜ ನಿರ್ಮಿಸಿ, ಭಾರತದ ಕೀರ್ತಿ ಬೆಳಗಿಸಬೇಕಿದೆ. ಅದಕ್ಕಾಗಿ ಎನ್‌ಡಿಪಿಎಸ್ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಬಿ. ಗೀತಾ ಸಲಹೆ ನೀಡಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಅಬಕಾರಿ ಇಲಾಖೆಯಿಂದ ಜಿಪಂ ಸಭಾಂಗಣದಲ್ಲಿ ಭಾನುವಾರ ಇಲಾಖೆಯ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಎನ್‌ಡಿಪಿಎಸ್ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಡಿಜಿಟಲ್ ಯುಗವಾಗಿದ್ದು, ಮಾದಕ ವಸ್ತುಗಳ ಸಂಬಂಧ ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಕಾಯ್ದೆಯಡಿ ಪ್ರತಿ ಇಲಾಖೆಯೂ ಸಹಾಯ, ಸಹಕಾರ ನೀಡಬೇಕು. ಯಾವ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸೂಚಿಸಿದರು.

    1985ರಲ್ಲಿ ಅಂದಿನ ಯುವಸಮೂಹ ಗಾಂಜಾ ಸೇರಿ ವಿವಿಧ ಮಾದಕ ವಸ್ತುಗಳಿಗೆ ದಾಸರಾಗಿದ್ದರು. ಹೀಗಾಗಿ ಬಳಕೆ ಹೆಚ್ಚಾಯಿತು. ಇದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿತ್ತು. ಇದನ್ನು ತಡೆಯಲು ವಿಶೇಷ ಕಾಯ್ದೆಯೂ ಜಾರಿಯಾಯಿತು. 1988, 2010, 2014ರಲ್ಲಿ ಹೀಗೆ ಮೂರು ಬಾರಿ ಕಾಯ್ದೆ ತಿದ್ದುಪಡಿಯಾಗಿದೆ ಎಂದರು.

    ಇದು ಸೆಕ್ಷನ್ 41ರಿಂದ 68ರವರೆಗೂ ಇದ್ದು, ಇದರೊಳಗೆ ಪ್ರಮುಖವಾದವು ಇವೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತನಿಖೆ ಮಾಡುವ ಅವಕಾಶ ನೀಡಲಾಗಿದೆ. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಹೇಳಿದರು.

    ನ್ಯಾಯಾಧೀಶರಾದ ಕೆಂಪರಾಜು, ಎಂ.ವಿಜಯ್, ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್, ಬೆಂಗಳೂರು ಮಹಾದೇವಪುರ ಅಬಕಾರಿ ನಿರೀಕ್ಷಕ ಅಬುಬಕರ್ ಮುಜಾವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts