More

    ವೈದ್ಯ ವೃತ್ತಿಯಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಅಗತ್ಯ

    ಬೈಲಹೊಂಗಲ: ರೋಗಿಗಳ ಬಾಳಿಗೆ ಬೆಳಕು ನೀಡುವ ವೈದ್ಯ ವೃತ್ತಿ ಶ್ರೇಷ್ಠ ಎಂದು ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
    ಸಮೀಪದ ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ತಾವು ಭಾಗ್ಯಶಾಲಿಗಳಾಗಿದ್ದು, ವಿದ್ಯಾರ್ಥಿ ಜೀವನವನ್ನು ಸವಾಲಾಗಿ ಸ್ವೀಕರಿಸಿ, ಶ್ರಮಪಟ್ಟು ಓದಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ವೈದ್ಯರಾದ ಮೇಲೆ ಶ್ರದ್ಧೆ, ಪ್ರಾಮಾಣಿಕತೆ ಅಳವಡಿಸಿಕೊಂಡು ಸೇವೆ ಮಾಡಬೇಕು ಎಂದರು.

    ಬೆಂಗಳೂರು ಆಯುಷ್ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ ಬಿ.ಎಸ್.ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪೂಜ್ಯರ ಆಶೀರ್ವಾದದೊಂದಿಗೆ ಇಂತಹ ಸುಸಜ್ಜಿತ ಭವ್ಯ ಕಾಲೇಜು ಇರವುದು ಹೆಮ್ಮೆಯಾಗಿದೆ. ವಿದ್ಯೆಯೊಂದಿಗೆ ಸಂಸ್ಕಾರ ಸಿಗುವುದರಿಂದ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಅನುಕೂಲವಾಗುತ್ತದೆ ಎಂದರು.

    ಸಂಸ್ಥೆಯ ಚೇರ್ಮನ್ ಡಿ.ಬಿ.ಮಲ್ಲೂರ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಪೂಜ್ಯರು ಕಾಲೇಜು ಸ್ಥಾಪನೆ ಮಾಡಿದ್ದಾರೆ. ಸಹಸ್ರಾರು ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನ ಮಾಡಿ ರೋಗಿಗಳಿಗೆ ಸೇವೆ ನೀಡುತ್ತಿದ್ದಾರೆ ಎಂದರು. ಬೆಂಗಳೂರು ಆಯುಷ ಮೆಡಿಕಲ್ ಆಫೀಸರ್ ಡಾ.ಪ್ರೇಮಕುಮಾರಿ, ಸಂಸ್ಥೆಯ ಮಾಜಿ ಚೇರ್ಮನ್ ಎಸ್.ಎಂ.ರಾಹುತನವರ, ಗೌರವ ಕಾರ್ಯದರ್ಶಿ ಎಸ್.ಎನ್.ಕೊಳ್ಳಿ, ಪ್ರಾಚಾರ್ಯ ಡಾ.ಜಿ. ವಿನಯಮೋಹನ, ಉಪಪ್ರಾಚಾರ್ಯ ಡಾ. ಜಿ.ಎಸ್.ಹಾದಿಮನಿ, ಉಪನ್ಯಾಸಕರು, ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts