More

    ವೈದ್ಯರು, ಸಿಬ್ಬಂದಿ ಕಾರ್ಯವೈಖರಿಗೆ ಮೆಚ್ಚುಗೆ

    ಚಿತ್ರದುರ್ಗ: ತಾಲೂಕಿನ ಲಕ್ಷ್ಮೀಸಾಗರ-ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ, ಸಿಬ್ಬಂದಿ ಹಾಜರಾತಿ, ಔಷಧ ದಾಸ್ತಾನು ಪರಿಶೀಲಿಸಿದರು.


    ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಕೇಂದ್ರ ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆ ಒದಗಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಜೆ ಸಮಯದಲ್ಲೂ ಸಿಬ್ಬಂದಿ ಕರ್ತವ್ಯದಲ್ಲಿ ಹಾಜರಿರುವುದನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


    ಆಸ್ಪತ್ರೆಯ ಹೊರ ಮತ್ತು ಒಳ ಆವರಣ ಸ್ವಚ್ಛತೆ, ರೋಗಿಗಳ ಜತೆ ಉತ್ತಮ ಸಮಾಲೋಚನೆ, ಚಿಕಿತ್ಸೆ ನೀಡಲು ಸ್ಪಂದಿಸುತ್ತಿರುವ ವಿಚಾರ ಶ್ಲಾಘನೀಯ. ಎಲ್ಲ ಕೇಂದ್ರಗಳಲ್ಲೂ ಈ ರೀತಿ ಕರ್ತವ್ಯ ನಿರ್ವಹಿಸಿದರೆ, ಸರ್ಕಾರಿ ಆಸ್ಪತ್ರೆಗಳ ಕುರಿತು ಜನರಲ್ಲಿ ವಿಶ್ವಾಸ, ಗೌರವ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.


    ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಜಯಶ್ರೀ ಮಾತನಾಡಿ, ರೋಗಿಗಳಿಗೆ ತೊಂದರೆ ಉಂಟಾಗದಂತೆ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
    ಪ್ರಯೋಗಶಾಲಾ ತಂತ್ರಜ್ಞ ಶಿವಮೂರ್ತಪ್ಪ, ಶುಶ್ರೂಷಕಿಯರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts