More

    ವೈದ್ಯಕೀಯ ಶುಶ್ರೂಷಕರ ಕೈಸೇರದ ಭತ್ಯೆ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಕರೊನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾಧಿಕಾರಿಗಳಿಗೆ ಇದುವರೆಗೂ ಪ್ರೋತ್ಸಾಹಧನ ಕೈಸೇರಿಲ್ಲ. ವೈದ್ಯರು, ಆರೋಗ್ಯ ಇಲಾಖೆ ನರ್ಸರಿ ಮತ್ತು ಗ್ರೂಪ್ ಡಿ ನೌಕರರಿಗೆ ಸಿಕ್ಕ ಭತ್ಯೆ ವೈದ್ಯಕೀಯ ಶಿಕ್ಷಣ ಇಲಾಖೆ ನಸರ್್ಗಳಿಗೆ ನೀಡದಿರುವ ಸರ್ಕಾದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟದ ಹಾದಿ ತುಳಿಯಲಾಗಿದೆ.

    ಕರೊನಾ ಆರ್ಭಟ ಶುರುವಾದಾಗಿನಿಂದ ವೈದ್ಯರ ಜತೆ ನರ್ಸರಿಗಳು ಸಹ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರು, ಗ್ರೂಪ್ ಡಿ ನೌಕರರಿಗೆ ಕೋವಿಡ್ ರಿಸ್ಕ್ ಇನ್ಸೆಂಟಿವ್ ನೀಡಲು ಸರ್ಕಾರ ಆದೇಶ ಹೊರಡಿಸಿದ್ದಲ್ಲದೆ ಪ್ರೋತ್ಸಾಹಧನವೂ ಪಾವತಿಸಿದೆ. ಆದರೆ ವೈದ್ಯಕೀಯ ಇಲಾಖೆ ನರ್ಸರಿಗಳನ್ನು ಮಾತ್ರ ದೂರವಿಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

    ಮೊದಲ ಅಲೆ ಹಂತದ ಆರು ತಿಂಗಳು ತಲಾ 5000 ರೂ. ಹಾಗೂ 2ನೇ ಅಲೆ ಹಂತದ 6 ತಿಂಗಳು ತಲಾ 8 ಸಾವಿರ ರೂ.ರಂತೆ ಪ್ರತಿ ಶುಶ್ರೂಷಕರಿಗೆ 78 ಸಾವಿರ ರೂ. ಪ್ರೋತ್ಸಾಹ ಧನ ಬರಬೇಕು. ಆದರೆ ಈವರೆಗೆ ನೀಡಿಲ್ಲ. ಸಮನಾಗಿ ಕೆಲಸ ಮಾಡುವ ಆರೋಗ್ಯ ಇಲಾಖೆ ಶುಶ್ರೂಷಕರಿಗೆ ನೀಡಿರುವ ಸರ್ಕಾರ, ವೈದ್ಯಕೀಯ ನರ್ಸರಿಗಳಿಗೆ ನೀಡದಿರುವ ಕಾರಣ ಹೋರಾಟದ ಹಾದಿ ತುಳಿದಿದ್ದಾರೆ.

    ಬೀದರ್ ಬ್ರಿಮ್ಸ್ ಸೇರಿ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿ ರಾಜ್ಯದಲ್ಲಿ 19 ಸಂಸ್ಥೆಗಳಿದ್ದು, 3000ಕ್ಕೂ ಅಧಿಕ ಶುಶ್ರೂಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರೊನಾ 3ನೇ ಅಲೆ ಅಬ್ಬರದ ನಡುವೆ ಜನವರಿಯಲ್ಲಿ ಒಂದು ವಾರ ಮೊದಲ ಹಂತದ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ. ಇದೀಗ ಎರಡನೇ ಹಂತದ ಹೋರಾಟಕ್ಕೆ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಕರ ಸಂಘ ಸಿದ್ಧತೆಯಲ್ಲಿ ತೊಡಗಿದ್ದು, ಶೀಘ್ರದಲ್ಲಿ ಸಭೆ ನಡೆಸಿ ಯಾವ ರೀತಿ ಹೋರಾಟ ಮಾಡಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಪ್ರಕಾಶ ಬಿ. ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

    ಕಪ್ಪು ಪಟ್ಟಿ ಧರಿಸಿ ಹೋರಾಟ: ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಕರು ಮೊದಲ ಹಂತವಾಗಿ ಜನವರಿ ತಿಂಗಳಲ್ಲಿ ಒಂದು ವಾರ ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಒಂದು ವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಸರ್ಕಾರ ಸ್ಪಂದಿಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts