More

    ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮುಷ್ಕರ ಮಾ.1ರಿಂದ, ಕರ್ತವ್ಯದಿಂದ ದೂರವಿರಲು ರಾಜ್ಯ ಸರ್ಕಾರಿ ನೌಕರರ ನಿರ್ಧಾರ

    ಹುಬ್ಬಳ್ಳಿ: ವೇತನ, ಭತ್ಯೆಗಳ ಪರಿಷ್ಕರಣೆ ಮತ್ತು ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಮಾ. 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ವನಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ನಗರ ಘಟಕದ ಅಧ್ಯಕ್ಷ ಡಾ. ಪ್ರಹ್ಲಾದ ಗೆಜ್ಜಿ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 28ರ ವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ ಮಾ.1ರಿಂದ ‘ಭರವಸೆ ಬೇಡ ಆದೇಶ ಬೇಕು’ ಘೋಷಣೆಯೊಂದಿಗೆ ಮುಷ್ಕರಕ್ಕೆ ಮುಂದಾಗಲಿದ್ದೇವೆ. ಮೆರವಣಿಗೆ, ಪ್ರತಿಭಟನೆ ಇರುವುದಿಲ್ಲ. ಆದರೆ, ಕರ್ತವ್ಯದಿಂದ ದೂರವಿರುತ್ತೇವೆ ಎಂದರು.

    ಸಂಘದ ಗ್ರಾಮೀಣ ಅಧ್ಯಕ್ಷ ವಿ.ಎಫ್. ಚುಳಕಿ ಮಾತನಾಡಿ, ರಾಜ್ಯ ಬಜೆಟ್​ನಲ್ಲಿ ನಮ್ಮ ಬೇಡಿಕೆ ಈಡೇರುವ ಭರವಸೆ ಇತ್ತು. ಆದರೆ, ಅನುದಾನ ಘೋಷಣೆ ಮಾಡಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ 7ನೇ ವೇತನ ಆಯೋಗ ಜಾರಿಯಾಗಬೇಕು. 40ರಷ್ಟು ಫಿಟ್​ವೆುಂಟ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಎನ್​ಪಿಎಸ್ ನೌಕರರ ಸಂಘದ ಪರಮಾನಂದ ಶಿವಳ್ಳಿಮಠ, ಪ್ರಶಾಂತ ಹೊಸಳ್ಳಿ, ಅಡವೇಶ ಗಾಯಕವಾಡ, ಮಂಜುನಾಥ ಜಂಗಳಿ, ನಾರಾಯಣ ಬದ್ದಿ, ರಾಮಚಂದ್ರ ಬಿರಾದಾರ, ಬಸವರಾಜ ಹೊಸಮನಿ ಇದ್ದರು.

    ಹೋರಾಟ ಬೆಂಬಲಿಸಲು ಮನವಿ: ಧಾರವಾಡ ಜಿಲ್ಲೆ, ತಾಲೂಕು, ಯೋಜನಾ ಶಾಖೆಯ ಎಲ್ಲ ಸರ್ಕಾರಿ ನೌಕರರು ಮುಷ್ಕರವನ್ನು ಬೆಂಬಲಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮನವಿ ಮಾಡಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎನ್​ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್​ಗಢ ಸೇರಿ ಇತರ ಕಡೆಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಯಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

    ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧೀನಕ್ಕೊಳಪಡುವ ಎಲ್ಲ ಇಲಾಖೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

    ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಳ್ಳಿ, ಆರ್.ಬಿ. ಲಿಂಗದಾಳ, ಮಲ್ಲಿಕಾರ್ಜುನ ಸೊಲಗಿ, ದೇವಿದಾಸ ಶಾಂತಿಕರ, ರಾಜಶೇಖರ ಬಾಣದ, ಗಿರೀಶ ಚೌಡಕಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts