More

    ವೀರಶೈವ ಲಿಂಗಾಯತರಿಗೆ ಒಬಿಸಿ ಸ್ಥಾನಮಾನ: ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದ ಡಿಸಿಎಂ ಗೋವಿಂದ ಕಾರಜೋಳ

    ವಿಜಯಪುರ: ವೀರಶೈವ ಲಿಂಗಾಯತರಿಗೆ ಒಬಿಸಿ ಸ್ಥಾನ ಮಾನ ನೀಡುವ ವಿಚಾರಿಂದ ಹಿಂದೆ ಸರಿದಿಲ್ಲ. ನಮ್ಮದು ಒಕ್ಕೂಟ ವ್ಯವಸ್ಥೆಯಾದ್ದರಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.

    ಸೋಮವಾರ ಬಿಜೆಪಿ ಗ್ರಾಮ ಸ್ವರಾಜ್ ಸಮಾವೇಶ ಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ “ವೀರಶೈವ ಲಿಂಗಾಯತರಿಗೆ ಒಬಿಸಿ ಸ್ಥಾನ ಮಾನ ನೀಡುವ ಹೇಳಿಕೆಯಿಂದ ಹಿಂದೆ ಸರಿದಿದ್ದು ಏಕೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

    ಯಾವುದೇ ನಿರ್ಧಾರವಾಗಲಿ ಸಂವಿಧಾನ ಚೌಕಟ್ಟಿನಲ್ಲಿ ತೆಗೆದುಕೊಳ್ಳಬೇಕು. ನಮ್ಮದು ಸಂಯುಕ್ತ ಒಕ್ಕೂಟ ವ್ಯವಸ್ಥೆ. ಹೀಗಾಗಿ ತಜ್ಞರ ಅಭಿಪ್ರಾಯ, ಅಧ್ಯಯನ ವರದಿ ಹೀಗೆ ಮುಂತಾದ ಪ್ರಕ್ರಿಯೆ ಆಧರಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾಲ್ಕು ದಿನ ತಡೆಯಿರಿ ಎಂದು ಈ‌ ಮೊದಲು ಹೇಳಿದ್ದೆ. ಹಾಗಂತ ದಿನ ಎಣಿಸಿ ಮಾಡಲಾಗಲ್ಲ. ಸ್ವಲ್ಪ ದಿನ ಕಾಯಿರಿ ಎಂದರಲ್ಲದೇ ಮಿತ್ರ ಮಂಡಳಿಯವರು ನಮ್ಮ ಪಕ್ಷಕ್ಕೆ ಬಂದು ಶಾಸಕರಾಗಿದ್ದರಿಂದ ಸಚಿವ ಸ್ಥಾನ ಕೇಳುತ್ತಿದ್ದಾರೆ. ಅದೊಂದು ಸಹಜ ಪ್ರಕ್ರಿಯೆ ಎಂದು ಉತ್ತರಿಸಿದರು.

    ಸಂಸದ ರಮೇಶ‌ ಜಿಗಜಿಣಗಿ, ಶಾಸಕರಾದ ಪಿ.ರಾಜೀವ, ಸೋಮಮಗೌಡ ಪಾಟೀಲ ಸಾಸನೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts