More

    ವೀಕ್ಷಕರಾಗಿ ಡಾ. ಶಾಲಿನಿ ರಜನೀಶ ನೇಮಕ

    ಧಾರವಾಡ: ಕರ್ನಾಟಕ ವಿಧಾನ ಪರಿಷತ್​ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಅವರನ್ನು ವೀಕ್ಷಕರನ್ನಾಗಿ ಚುನಾವಣೆ ಆಯೋಗ ನೇಮಿಸಿದೆ. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಸಾರ್ವಜನಿಕರು ಈ ಚುನಾವಣೆಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಲು ದೂ. 0836-244556 ಅಥವಾ ಮೊ. 94498 47645ಗೆ ಸಂಪರ್ಕಿಸಬಹುದು ಎಂದು ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

    ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ 8 ಜನರ ನಾಮಪತ್ರ ತಿರಸ್ಕೃತ

    ಧಾರವಾಡ: ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಶುಕ್ರವಾರ ನಡೆಯಿತು.

    8 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ಹಿಂಪಡೆಯಲು ಅ. 12ರವರೆಗೆ ಅವಕಾಶವಿದೆ.

    ತಿರಸ್ಕೃತ ನಾಮಪತ್ರ: ಆಜಾದ್ ಮಜದೂರ್ ಕಿಸಾನ್ ಪಕ್ಷದ ಪ್ರಕಾಶ ಕಾಂಬಳೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮಂಜುನಾಥ ಭದ್ರಪ್ಪ ಬೆಳವತ್ತಿ, ಜನತಾದಳ (ಸಂಯುಕ್ತ) ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ಪಕ್ಷೇತರರಾದ ಅಶೋಕ ಮಲ್ಲಪ್ಪ ಜವಳಿ, ಕೃಷ್ಣ ಹನುಮಂತಪ್ಪ ಬಳಿಗಾರ, ಚನ್ನಪ್ಪ ಪಿ. ಬ್ರಹ್ಮನಪಾಡ, ಚರಣರಾಜ್ ಕೆ.ಎ., ರವಿ ಶಿವಪ್ಪ ಪಡಸಲಗಿ ಅವರು ಸಲ್ಲಿಸಿದ್ದ ನಾಮಪತ್ರಗಳಲ್ಲಿ ನೈಜ ಸೂಚಕರು, ಅಫಿಡವಿಟ್​ಗಳಲ್ಲಿ ನ್ಯೂನತೆ, ಮತದಾರರ ಪಟ್ಟಿಯ ಪ್ರಮಾಣೀಕೃತ ಪ್ರತಿಗಳ ಕೊರತೆ ಸೇರಿ ಇತರ ದೋಷಗಳು ಕಂಡು ಬಂದಿವೆ. ಆದ್ದರಿಂದ ಈ ಎಂಟು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ.

    ಸಿಂಧುವಾದ ನಾಮಪತ್ರಗಳು: ಕಾಂಗ್ರೆಸ್​ನ ಆರ್.ಎಂ. ಕುಬೇರಪ್ಪ, ಜೆಡಿಎಸ್​ನ ಶಿವಶಂಕರ ಚನ್ನಪ್ಪ ಕಲ್ಲೂರ, ಬಿಜೆಪಿಯ ಎಸ್.ವಿ. ಸಂಕನೂರ, ಕರ್ನಾಟಕ ರಾಷ್ಟ್ರ ಸಮಿತಿಯ ಶಿವರಾಜ ಕೆಂಚಪ್ಪ ಕಾಂಬಳೆ, ಶಿವಸೇನಾದ ಸೋಮಶೇಖರ ವಿರೂಪಾಕ್ಷ ಉಮರಾಣಿ, ಪಕ್ಷೇತರ ಅಭ್ಯರ್ಥಿಗಳಾದ ದಶರಥ ಚಂದ್ರಹಾಸ ರಂಗರೆಡ್ಡಿ, ಬಸನಗೌಡ ದ್ಯಾಮನಗೌಡ ಹಿರೇಗೌಡ್ರ, ಬಸವರಾಜ ಎಚ್. ಗುರಿಕಾರ, ಬಸವರಾಜ ತೇರದಾಳ, ಮಹ್ಮದ್ ಶಫಿವುದ್ದೀನ್ ಎಸ್. ನಾಗರಕಟ್ಟಿ ಹಾಗೂ ಶಿವಕುಮಾರ ಮಹಾದೇವಪ್ಪ ತಳವಾರ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts