More

    ವಿಷ ಬಿತ್ತಿ ವಿಷ ಉಣಬಡಿಸುವುದು ಸರಿಯಲ್ಲ

    ಬಾಗಲಕೋಟೆ: ನಿತ್ಯ ಸೇವನೆ ಮಾಡುವ ಪ್ರತಿಯೊಂದು ಹಣ್ಣು, ತರಕಾರಿಗಳಲ್ಲಿ ನೈಸರ್ಗಿಕ ತಾಕತ್ತು ಉಳಿದಿಲ್ಲ. ಪ್ರತಿ ಹಂತದಲ್ಲಿ ರಾಸಾಯನಿಕೆ ಬಳಕೆ ಮೀತಿ ಮೀರಿ ಹೋಗಿದೆ. ವಿಷವನ್ನು ಉತ್ತಿ, ಬಿತ್ತಿ ಬೆಳೆದು ಉಣಬಡಿಸುತ್ತಿದ್ದೇವೆ. ತೋಟಗಾರಿಕಾ ವಿಜ್ಞಾನಿಗಳ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ. ಇದು ನಿಜವಾದ ಪ್ರಗತಿ ಅಲ್ಲ..!!

    ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ತೋವಿವಿ ಮೂರು ದಿನಗಳ ಹಮ್ಮಿಕೊಂಡಿರುವ ಬರ ಸಹಿಷ್ಣುತೆಗಾಗಿ ತೋಟಗಾರಿಕೆ ಮೇಳಕ್ಕೆ ಶನಿವಾರ ಚಾಲನೆ ನೀಡಿ ತಮ್ಮ ಶೈಲಿಯಲ್ಲಿ ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತಿನ ಚಾಟಿ ಬೀಸಿದರು. ಉದ್ಘಾಟನೆಗೆ ಕರಿಬೇಡಿ, ನನ್ನಿಂದ ಭಾಷಣ ಮಾಡಿಸಬೇಡಿ ಅಂತ ಹೇಳಿದ್ದೆ. ಆದರೇ ಅನಿವಾರ್ಯತೆ ಸೃಷ್ಟಿಯಾಗಿದೆ. ನಾನು ನೇರ ನುಡಿ ಮನುಷ್ಯ. ಇರುವದನ್ನು ಹೇಳುತ್ತಿದ್ದೇನೆ. ಇನ್ನು ಸುಮ್ಮನೆ ಕೂಡಲು ಆಗಲ್ಲ. ಬದಲಾವಣೆಗೆ ಬೆನ್ನು ಹತ್ತುತ್ತೇನೆ ಎನ್ನುತ್ತಲೆ ತೋವಿವಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದರು.

    ಸಂಶೋಧನೆಗಳು ಆಗಬೇಕು. ರೈತರು, ಕೃಷಿಗೆ ಪೂರಕವಾಗಿರಬೇಕು. ಆದರೇ ಅದು ಸಾಧ್ಯವಾಗುತ್ತಿಲ್ಲ. ಹಾನಿಯೇ ಅಽಕವಾಗಿದೆ. ನಮ್ಮೆಲ್ಲರ ಪ್ರಯತ್ನದಿಂದಾಗಿ ಎಸ್.ಎಂ.ಕೃಷ್ಣಾ ಅವರ ಸರ್ಕಾರ ಇದ್ದಾಗ ವಿಜಯಪುರ, ಬಾಗಲಕೋಟೆ ಜಿಲ್ಲೆಯನ್ನು ತೋಟಗಾರಿಕೆ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಯಿತು. ಇದರಿಂದ ಇಲ್ಲಿ ತೋವಿವಿ ಸ್ಥಾಪನೆಯಾಗಲು ಕಾರಣವಾಯಿತು. ಆದರೇ ಸ್ಥಾಪನೆಯಾಗಿ ಒಂದು ದಶಕ ಕಳೆದರು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ತೋಟಗಾರಿಕೆ ಬೆಳೆಗಳು ಸಾವಯವ ಪದ್ಧತಿಯಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ಬಂದು ನಿಂತಿದೆ. ಯಾವ ಹಣ್ಣು ಸೇವನೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಪ್ರತಿಯೊಂದರಲ್ಲಿ ಕೆಮಿಕಲ್, ಕೆಮಿಕಲ್ ಅಂತ ಒತ್ತಿ ಹೇಳಿದರು.

    ವಿಜ್ಞಾನಿಗಳು ವಿಜ್ಞಾನಿಗಳಾಗಿ ಉಳಿದಿಲ್ಲ. ನಮ್ಮ ಬೆಳೆಗಾರರಿಗೆ ಅಂಗಡಿಕಾರರೇ ವಿಜ್ಞಾನಿಗಳಾಗಿದ್ದಾರೆ. ಇದರಿಂದ ಕ್ಯಾನ್ಸರನಂತಹ ಮಾರಕ ರೋಗಗಳು ಹೆಚ್ಚಾಗುತ್ತೀವೆ. ಈ ನಿಟ್ಟಿನಲ್ಲಿ ಚಿಂತನೆಗಳು ನಡೆದಿಲ್ಲ ಎನ್ನುವುದೇ ದುರಂತ ಸಂಗತಿ. ಅನೇಕ ಜನ ಬೆಳೆದವೇ ತಿನ್ನುವದಿಲ್ಲ ಹಣ್ಣುಗಳನ್ನು. ಆದರು ಜನರಿಗೆ ಹಂಚುತ್ತಿದ್ದೇವೆ. ರಾಸಾಯನಿಕದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯಾವುದೇ ತೋಟಗಾರಿಕೆ ವಿವಿ ಅಥವಾ ವಿಜ್ಞಾನಿಗಳು ವರದಿಕೊಟ್ಟಿಲ್ಲ. ತಿಳುವಳಿಕೆ, ಅರಿವು ಮೂಡಿಸುವ ಕಾರ್ಯ ಮಾಡಿಲ್ಲ. ಇಲ್ಲಿಯ ವರೆಗೆ ನಮ್ಮ ಮಾತು ಕೇಳಿಲ್ಲ. ವಿವಿ ಆವರಣ ಉತ್ತಮವಾಗಿ ಉಳಿದಿಲ್ಲ. ಲ್ಯಾಬ್‌ನಲ್ಲಿ ಆಗುವ ಸಂಶೋಧನೆಗಳು ರೈತರ ಲ್ಯಾಂಡ ತಲುಪುತಿಲ್ಲ. ವಿದ್ಯಾರ್ಥಿಗಳು ಮಾರ್ಕ ಪಡೆದು ವಿವಿ ಶಿಕ್ಷಣದಲ್ಲಿ ಮುಂದೆ ಬಂದಿರಬಹುದು. ಆದರೇ ಕೃಷಿ ಕ್ಷೇತ್ರದಲ್ಲಿ ವಿವಿಗಳ ಪಾತ್ರ? ಉತ್ತರವಿಲ್ಲ. ಇನ್ನು ಸುಧಾರಣೆ, ಬದಲಾವಣೆ ಆಗಬೇಕು. ಸಾವಯವ ಪದ್ಧತಿಗೆ ಹೆಚ್ಚಿನ ಒತ್ತು ನೀಡಬೇಕು. ಹಂತ ಹಂತವಾಗಿ ರಾಸಾಯನಿಕ ಬಳಿಕೆ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಅಪಾಯ ತಪ್ಪಿದಲ್ಲ ಎಂದು ಎಚ್ಚರಿಕೆ ನೀಡಿದರು.

    ಶಾಸಕ ಎಚ್.ವೈ.ಮೇಟಿ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ತೋವಿವಿ ಕುಲಪತಿ ಡಾ.ಎನ್.ಕೆ.ಹೆಗಡೆ, ಕುಲ ಸಚಿವ ಡಾ.ಟಿ.ಬಿ.ಅಳೊಳ್ಳಿ, ಶಿಕ್ಷಣ ನಿರ್ದೇಶನ ಡಾ.ಎನ್.ಕೆ.ಹಗಡೆ, ವ್ಯವಸ್ಥಾಪನ ಮಂಡಳಿ ಸದಸ್ಯ ತಿಮ್ಮಣ್ಣ ಅರಳಿಮಟ್ಟಿ, ಡಾ.ರವೀಂದ್ರ ಮುಲಗೆ, ಡಾ.ಎಂ.ಶಿವಮೂರ್ತಿ, ಡಾ.ವಸಂತ ಗಾಣಗೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts