More

    ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಜೂ. 21ಕ್ಕೆ

    ದಾವಣಗೆರೆ: ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯು ನಗರದ ರೋಟರಿ ಕ್ಲಬ್‌ನಲ್ಲಿ ಜೂ. 21ರಂದು ಮಧ್ಯಾಹ್ನ 12 ಗಂಟೆಗೆ ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಆಯೋಜಿಸಿದೆ.
    ಕಾರ್ಯಕ್ರಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ವಹಿಸಲಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಎಸ್ಸೆಸ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ, ಕಾರ್ಮಿಕ ಸಹಾಯಕ ಆಯುಕ್ತೆ ವೀಣಾ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ. ಕೆ. ಅರುಣ್, ಗೃಹಕಾರ್ಮಿಕರ ಸಂಘಟನೆಯ ರಾಜ್ಯ ಸಹ ಸಂಯೋಜಕಿ ಸಿಸ್ಟರ್ ನಿಶಾ, ಜರ್ಸನ್, ಕಾರ್ಮಿಕಾಧಿಕಾರಿ ಇಬ್ರಾಹಿಂ ಭಾಗವಹಿಸುವರು ಎಂದು ಸಂಘಟನೆ ಸದಸ್ಯೆ ಆರ್. ರಂಗಮ್ಮ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, ಈ ಮಂಡಳಿಗೆ ಪ್ರತಿವರ್ಷ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡುವುದು. ಪ್ಲೇಸ್‌ಮೆಂಟ್ ಮೆಂಟ್ ಏಜೆನ್ಸಿ ನಿಯಂತ್ರಣ ಕಾನೂನನ್ನು ಅಂಗೀಕರಿಸಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು ಮಾಡಲಾಗುವುದು ಎಂದರು.
    ಜಿಲ್ಲೆಯಲ್ಲಿ 1400 ಗೃಹ ಕಾರ್ಮಿಕರು ಮನೆಗೆಲಸದಲ್ಲಿ ತೊಡಗಿದ್ದು, ಅಸಂಘಟಿತ ವಲಯದಲ್ಲಿರುವ ನಮಗೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ. ಅಧಿಕಾರಿಗಳು ಕೂಡ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಮಕ್ಕಳ ಓದು ಇತರೆ ವೆಚ್ಚವನ್ನು ಗೃಹ ಕೃತ್ಯದ ದುಡಿಮೆಯಿಂದಲೆ ಭರಿಸಬೇಕಿದೆ. ಕೆಲವರು ಮನೆಗೆಲಸದವರನ್ನು ಬದಲಾವಣೆ ಮಾಡುವುದರಿಂದಲೂ ನಮಗೆ ಅಭದ್ರತೆ ಕಾಡುತ್ತಿದೆ ಎಂದು ಹೇಳಿದರು.
    ಕರೊನಾ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್‌ಕಾರ್ಡ್ ಮಾಡಿಸಿದ್ದೇವೆ. ಆದರೆ ಕೆಲವರ ಖಾತೆಗೆ ಮಾತ್ರವೇ 2 ಸಾವಿರ ರೂ. ಹಣ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವಿ. ಲಕ್ಷ್ಮೀ, ಎಚ್.ಎಂ.ಸುಜಾತಾ, ಜಿ. ಬಸಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts