More

    ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ ಜಗಜ್ಯೋತಿ ಬಸವೇಶ್ವರ ಶಾಸಕ ಡಾ. ಬಿ.ಜಿ.ಪಾಟೀಲ ಬಣ್ಣನೆ


    ಬಸವೇಶ್ವರ ಕಾಲೋನಿಯಲ್ಲಿ ಬಸವ ಜಯಂತಿ ಆಯೋಜನೆ
    ಕಾರ್ಯಕ್ರಮದಲ್ಲಿ ಪ್ರೊ ಯಶವಂತರಾಯ ಅಷ್ಠಗಿ ವಿಶೇಷ ಉಪನ್ಯಾಸ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಜಗಜ್ಯೋತಿ ಬಸವೇಶ್ವರರುವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ಅವರು ೧೨ ನೇ ಶತಮಾನದ ವಚನ ಚಳುವಳಿಯ ಹರಿಕಾರರಾಗಿ ಸಮಾಜದಲ್ಲಿ ಸಮಾನತೆಗಾಗಿ ಅವಿರತ ಹೋರಾಡಿದ ಮಹಾ ಮಾನವತಾವಾದಿ ಎಂದು ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್ ಬಣ್ಣಿಸಿದರು.

    ನಗರದ ಬಸವೇಶ್ವರ ಕಾಲೋನಿಯಲ್ಲಿ ಆಯೋಜಿಸಿದ್ದ ೮೯೧ ನೇ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯಬೇಕಿದೆ.
    ಅವರ ವಿಚಾರ ಮತ್ತು ತತ್ವಗಳು ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು
    ಬಿ ಜಿ ಪಾಟೀಲ್ ಹೇಳಿದರು.

    ಚಿಂತಕ ಹಾಗೂ ಲೇಖಕರಾದ ಪ್ರೊ|| ಯಶವಂತರಾಯ ಅಷ್ಠಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ,
    ವಿಶ್ವಗುರು ಬಸವಣ್ಣನವರು ಜಾತಿ ಧರ್ಮ, ಮೂಢನಂಬಿಕೆ, ಕಂದಾಚಾರ ಪದ್ಧತಿಗಳ ವಿರುದ್ದ ಸಮರವನ್ನು ಸಾರುವ ಮೂಲಕ ಸಮಾನತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ.
    ಅವರು ನಂಬಿದ್ದ ಕಾಯಕ, ದಾಸೋಹ ತತ್ವಗಳು ಇಂದಿನ ಆಧುನಿಕ ಸಮಾಜ ಅಳವಡಿಸಿಕೊಳ್ಳಬೇಕಿರುವುದು ಅನಿವಾರ್ಯ. ಮುಂದುವರೆದು ಮಾತನಾಡಿದ ಅವರು,
    ಸಮಾಜದಲ್ಲಿ ಇದ್ದಂತಹ ಅನಿಷ್ಟ ಪದ್ದತಿಗಳು, ತಪ್ಪು ತಿಳುವಳಿಗೆ ತಿಲಾಂಜಲಿ ಇಡಲು ಶ್ರಮಿಸಿದವರು ಜಗಜ್ಯೋತಿ ಬಸವೇಶ್ವರರು ಎಂದು ಪ್ರೊ ಯಶವಂತರಾಯ ಅಷ್ಠಗಿ ಯವರು ಅಭಿಪ್ರಾಯ ಪಟ್ಟರು.

    ಕಲಬುರಗಿ ಎಪಿಎಂಸಿ ಉಪಾಧ್ಯಕ್ಷರಾದ ರಾಜಕುಮಾರ್ ಕೋಟೆ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಶರಣು ಪಪ್ಪಾ ಮಾತನಾಡಿ,
    ಮಾನವ ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಬಸವಣ್ಣನವರ ತತ್ವಗಳು ಹಾಗೂ ಶರಣರು ಹಾಕಿಕೊಟ್ಟ ಕಾಯಕ ದಾಸೋಹ ತತ್ವಗಳನ್ನು ಅಳವಡಿಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದರು.

    [ ಆಧುನಿಕ ಯುಗದ ಜನರು ಸ್ವಾರ್ಥ, ಅಧಿಕಾರ, ಅಂತಸ್ತಿನ ಹಿಂದೆ ಬಿದ್ದಿದ್ದಾರೆ. ಬಸವಣ್ಣನವರು, ಶರಣರ ಆತ್ಮ ಗೌರವಕ್ಕೆ ಧಕ್ಕೆಯಾದಾಗ ಬಿಜ್ಜಳನ ಆಸ್ಥಾನದ ಮಹಾ ಮಂತ್ರಿಯ ಪದವಿಯನ್ನೇ ತೊರಿದಿದ್ದರು.
    ಆದರೆ ಇಂದು ಕುರ್ಚಿಗಾಗಿ ಗುದ್ದಾಟಗಳು ನಡೆಯುತ್ತಿವೆ ಎಂದರು.]
    ಪ್ರೊ ಯಶವಂತರಾಯ ಅಷ್ಠಗಿ ಚಿಂತಕರು, ಕಲಬುರಗಿ

    ಬಸವ ಜಯಂತಿ ಉತ್ಸವದ ಷಟಸ್ಥಲ ಧ್ವಜಾರೋಹಣವನ್ನು ಬಸವೇಶ್ವರ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಕವಿರಾಜ್ ಕೋಳಕೂರ ನೇರವೇರಿಸಿದರು.
    ಉದಯಕುಮಾರ ಸಾಲಿ ಪ್ರಾರ್ಥಿಸಿದರು. ಕಲಬುರಗಿ ಜನತಾ ಬಜಾರ್ ಅಧ್ಯಕ್ಷರಾದ ದತ್ತಾತ್ರೇಯ ಫಡ್ನವೀಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
    ರಾಚಯ್ಯ ಸ್ವಾಮಿ ನಿರೂಪಿಸಿದರು, ಪ್ರಕಾಶ್ ಪಾಟೀಲ್ ವಂದಿಸಿದರು.
    ಕಾರ್ಯಕ್ರಮದಲ್ಲಿ ಪ್ರಮುಖರಾದ, ಯುವ ಮುಖಂಡರಾದ ಶರಣಗೌಡ ಅಲ್ಲಮಪ್ರಭು ಪಾಟೀಲ್ ನೆಲೋಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ್ ಹೊನ್ನಳ್ಳಿ, ಪ್ರದೀಪ್, ವೀರೇಶ್ ವಾಲಿಶೆಟ್ಟಿ ಆನಂದ್ ಕದ್ದರ್ಗಿ, ವಿಕಾಸ್, ಜಗದೀಶ್ ಹರಸೂರ್, ಸಂತೋಷ್ ಹಳ್ಳಿಪೇಟ್, ರಾಜು ಹರಸೂರ್, ವಿಶ್ವನಾಥ್ ಸ್ವಾಮಿ, ಮಲ್ಲಿಕಾರ್ಜುನ್ ಹೊನ್ನಕಿರಣಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts